For Quick Alerts
ALLOW NOTIFICATIONS  
For Daily Alerts
 

WPL 2024: ಚಾಂಪಿಯನ್ ಆರ್‌ಸಿಬಿ ತಂಡಕ್ಕೆ ಸಿಕ್ಕ ಬಹುಮಾನವೆಷ್ಟು?; ಉಳಿದ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ

ಭಾನುವಾರ, ಮಾರ್ಚ್ 17ರಂದು ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ 2024ರ ಮಹಿಳಾ ಪ್ರೀಮಿಯರ್ ಲೀಗ್‌ನ (ಡಬ್ಲ್ಯುಪಿಎಲ್) 2ನೇ ಆವೃತ್ತಿಯ ಫೈನಲ್‌ನಲ್ಲಿ ಸ್ಮೃತಿ ಮಂಧಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡ ಉತ್ತಮ ಆರಂಭದ ಹೊರತಾಗಿಯೂ ಆರ್‌ಸಿಬಿ ಸ್ಪಿನ್ನರ್‌ಗಳ ಮಾರಕ ದಾಳಿಗೆ ಸಿಲುಕಿ 18.3 ಓವರ್‌ಗಳಲ್ಲಿ ಕೇವಲ 113 ರನ್‌ಗಳಿಗೆ ಸರ್ವಪತನ ಕಂಡಿತು.

WPL 2024 Final Do You Know How Much Money WPL Winner RCB Got Know Complete Award List

ಟ್ರೋಫಿ ಗೆಲುವಿಗೆ 114 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡ ಸೋಫಿ ಡಿವೈನ್, ಸ್ಮೃತಿ ಮಂಧಾನ, ಎಲ್ಲಿಸ್ ಪೆರ್ರಿ ಮತ್ತು ರಿಚಾ ಘೋಷ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ 19.3 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 8 ವಿಕೆಟ್‌ಗಳ ಗೆಲುವಿನ ನಗೆ ಬೀರಿತು.

ಈ ಗೆಲುವು ಕೇವಲ ಆರ್‌ಸಿಬಿ ಮಹಿಳಾ ತಂಡದ ಮೊದಲ ಪ್ರಶಸ್ತಿಯಲ್ಲ, ಆರ್‌ಸಿಬಿ ಫ್ರಾಂಚೈಸಿಗೆ ಇದು ಮೊದಲ ಟ್ರೋಫಿಯಾಗಿದೆ. 16 ವರ್ಷಗಳ ಲೀಗ್‌ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕ್ಯಾಬಿನೆಟ್‌ನಲ್ಲಿ ತೋರಿಸಲು ಟ್ರೋಫಿ ಇದೆ.

ಆರ್‌ಸಿಬಿ ಮಹಿಳಾ ತಂಡ ಗೆಲ್ಲುತ್ತಿದ್ದಂತೆಯೇ ಆರ್‌ಸಿಬಿ ಪುರುಷರ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ ಉತ್ಸಾಹವನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಈ ಸಂಭ್ರಮದ ಸಂದರ್ಭವನ್ನು ಆಚರಿಸಲು ಸ್ಮೃತಿ ಮಂಧಾನಗೆ ವಿಡಿಯೋ ಕಾಲ್ ಮಾಡಿ ಅಭಿನಂದನೆ ಸಲ್ಲಿಸಿದರು. ಆರ್‌ಸಿಬಿ ಮಹಿಳಾ ತಂಡದೊಂದಿಗೆ ವಿಡಿಯೋ ಕಾಲ್‌ನಲ್ಲೇ ಸಂಭ್ರಮಿಸಿದರು ಮತ್ತು ಆ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

WPL 2024 Final Do You Know How Much Money WPL Winner RCB Got Know Complete Award List

ಆರ್‌ಸಿಬಿ ಮಹಿಳಾ ತಂಡ ಬಂಗಾರದ ಟ್ರೋಫಿ ಮತ್ತು ಕೋಟ್ಯಂತರ ಹೃದಯ ಗೆಲ್ಲುವುದರ ಜೊತೆಗೆ ಬೃಹತ್ ನಗದು ಬಹುಮಾನವನ್ನೂ ಪಡೆದರು. ಮಹಿಳಾ ಪ್ರೀಮಿಯರ್ ಲೀಗ್ ವಿಜೇತ ಆರ್‌ಸಿಬಿ ತಂಡ ಬರೋಬ್ಬರಿ 6 ಕೋಟಿ ರೂಪಾಯಿಗಳನ್ನು ಬಹುಮಾನವಾಗಿ ಪಡೆದುಕೊಂಡಿತು.

ಇನ್ನು ಈ ಸಂದರ್ಭದಲ್ಲಿ ರನ್ನರ್-ಅಪ್ ತಂಡವಾದ ಮೆಗ್ ಲ್ಯಾನಿಂಗ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಮಹಿಳೆಯರು 3 ಕೋಟಿ ರೂಪಾಯಿಗಳನ್ನು ಬಹುಮಾನವಾಗಿ ಪಡೆದುಕೊಂಡರು.

ಫೈನಲ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಸೋಫಿ ಮೊಲಿನೆಕ್ಸ್ 4 ಓವರ್‌ಗಳಲ್ಲಿ 3 ವಿಕೆಟ್‌ಗೆ 20 ರನ್ ಗಳಿಸಿ ಪಂದ್ಯಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ಪಡೆದರು. ಡೆಲ್ಲಿ ಕ್ಯಾಪಿಟಲ್ಸ್‌ನ ಶಫಾಲಿ ವರ್ಮಾ 3 ಸಿಕ್ಸರ್‌ಗಳೊಂದಿಗೆ ಗರಿಷ್ಠ ಸಿಕ್ಸರ್ ಪ್ರಶಸ್ತಿಯನ್ನು ಪಡೆದರು.

WPL 2024 Final Do You Know How Much Money WPL Winner RCB Got Know Complete Award List

ಶಫಾಲಿ ವರ್ಮಾ ಇಡೀಯ ಪಂದ್ಯಾವಳಿಯಲ್ಲಿ ಅತಿ ಹೆಚ್ಚು (20) ಸಿಕ್ಸರ್‌ಗಳನ್ನು ಹೊಡೆದರು ಮತ್ತು ಅದಕ್ಕಾಗಿ 5 ಲಕ್ಷ ರೂಪಾಯಿ ನಗದು ಬಹುಮಾನ ಪಡೆದರು.

ಇನ್ನು ಆಡಿದ 9 ಇನ್ನಿಂಗ್ಸ್‌ನಲ್ಲಿ 347 ರನ್ ಸಿಡಿಸಿದ ಆರ್‌ಸಿಬಿಯ ಎಲ್ಲಿಸ್ ಪೆರ್ರಿ ಆರೆಂಜ್ ಕ್ಯಾಪ್ ಪಡೆದರು. 8 ಇನ್ನಿಂಗ್ಸ್‌ಗಳಲ್ಲಿ 13 ವಿಕೆಟ್ ಪಡೆದ ಆರ್‌ಸಿಬಿ ತಂಡದ ಶ್ರೇಯಾಂಕ ಪಾಟೀಲ್ ಪರ್ಪಲ್ ಕ್ಯಾಪ್ ಗೆದ್ದರು.

ಎಲ್ಲಿಸ್ ಪೆರ್ರಿ ಮತ್ತು ಶ್ರೇಯಾಂಕ ಪಾಟೀಲ್ ಇಬ್ಬರೂ ತಮ್ಮ ಸಾಧನೆಗಳಿಗಾಗಿ ತಲಾ 5 ಲಕ್ಷ ರೂಪಾಯಿ ನಗದು ಬಹುಮಾನವನ್ನು ಪಡೆದರು. ಅಲ್ಲದೆ, ಶ್ರೇಯಾಂಕ ಪಾಟೀಲ್ ಅವರು ಈ ಆವೃತ್ತಿಯ ಉದಯೋನ್ಮುಖ ಆಟಗಾರ್ತಿ ಎಂದು ಹೆಸರಿಸಲ್ಪಟ್ಟರು ಮತ್ತು ಅದಕ್ಕಾಗಿ ಹೆಚ್ಚುವರಿ 5 ಲಕ್ಷ ರೂಪಾಯಿ ಪಡೆದುಕೊಂಡಳು.

WPL 2024 Final Do You Know How Much Money WPL Winner RCB Got Know Complete Award List

ದೀಪ್ತಿ ಶರ್ಮಾ 295 ರನ್‌ಗಳು ಮತ್ತು 10 ವಿಕೆಟ್‌ಗಳೊಂದಿಗೆ ಋತುವಿನ ಅತ್ಯಮೂಲ್ಯ ಆಟಗಾರ್ತಿಯಾದರು ಮತ್ತು 5 ಲಕ್ಷ ರೂಪಾಯಿ ನಗದು ಬಹುಮಾನ ಪಡೆದರು.

ಕ್ಯಾಚ್ ಆಫ್ ದಿ ಸೀಸನ್ ಪ್ರಶಸ್ತಿಯನ್ನು ಸಜೀವನ್ ಸಜನಾ ಪಡೆದರು ಮತ್ತು ಆರ್‌ಸಿಬಿ ತಂಡ ಫೇರ್‌ಪ್ಲೇ ಪ್ರಶಸ್ತಿಯನ್ನೂ ಗೆದ್ದುಕೊಂಡಿತು.

ಗೆಲುವಿನ ನಂತರ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಹರ್ಷ ವ್ಯಕ್ತಪಡಿಸಿದರು. ಗೆಲುವಿನ ಸಂಭ್ರಮಾಚರಣೆಗಾಗಿ ಕನ್ನಡದಲ್ಲೇ ಮಾತನಾಡಿದ ಸ್ಮೃತಿ, ಈ ಗೆಲುವನ್ನು ತಂಡದ ನಿಷ್ಠಾವಂತ ಅಭಿಮಾನಿಗಳಿಗೆ ಅರ್ಪಿಸಿದರು ಮತ್ತು ಅಭಿಮಾನಿಗಳ ಬೆಂಬಲವೇ ಕಾರಣವೆಂದು ಹೇಳುವ ಮೂಲಕ 'ಈ ಸಲ ಕಪ್ ನಮ್ದೇ' ಬದಲಾಗಿ 'ಈ ಸಲ ಕಪ್ ನಮ್ದು' ಎಂದು ಹೇಳಬೇಕು ಎಂದು ತಿಳಿಸಿದರು.

Story first published: Monday, March 18, 2024, 10:45 [IST]
Other articles published on Mar 18, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+