WPL 2024: ಫೈನಲ್ ಪಂದ್ಯದಲ್ಲಿ ಮಿಂಚಿದ ಸೋಫಿ ಮೊಲಿನೆಕ್ಸ್ ಯಾರು?
WPl ಫೈನಲ್ ಪಂದ್ಯದಲ್ಲಿ ಆರ್ ಸಿಬಿ ತಂಡಕ್ಕೆ ಆಧಾರವಾದ ಬೌಲರ್ ಯಾರು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡುವಂತೆ ಮಾಡಿದೆ. ಈ ಪ್ಲೇಯರ್ ಆಟ ಕಂಡು ಎಲ್ಲರೂ ಮೆಚ್ಚುಗೆಯ ಮಾತುಗಳನ್ನು ಆಡಿದವರೇ. ಇವರು ಆರ್ ಸಿಬಿ ತಂಡದ ಪರ ಪ್ರಸಕ್ತ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ನೆರವಾದ ಪ್ಲೇಯರ್..
ಅಂದಹಾಗೆ ಡೆಲ್ಲಿ ಮೊದಲು ಬ್ಯಾಟ್ ಮಾಡಿ ಉತ್ತಮ ಸ್ಥಿತಿಯಲ್ಲಿತ್ತು. ಅಲ್ಲದೆ ಪವರ್ ಪ್ಲೇನಲ್ಲಿ ಪವರ್ ಫುಲ್ ಆಟವನ್ನು ಆಡಿ ಆರ್ ಸಿಬಿ ತಂಡಕ್ಕೆ ಕಾಟ ನೀಡಿತ್ತು. ಈ ಜೋಡಿಯನ್ನು ಬೇರ್ಪಡಿಸಲು ಸ್ಮೃತಿ ಮಾಡಿದ ಪ್ಲ್ಯಾನ್ ಎಲ್ಲ ಉಲ್ಟಾ ಹೊಡೆಯಿತು.

ಆದರೆ ಪಂದ್ಯದ ಎಂಟನೇ ಓವರ್ ಬೌಲ್ ಮಾಡಲು ಬಂದ ಸೋಫಿ ಮೊಲಿನೆಕ್ಸ್ ಭರ್ಜರಿ ಬೌಲಿಂಗ್ ಮಾಡಿ ತಂಡಕ್ಕೆ ಆಧಾರವಾದರು. ಈ ಓವರ್ ನ ಮೊದಲ ಎಸೆತದಲ್ಲಿ ಶಫಾಲಿ ವರ್ಮಾ ಅವರನ್ನು ಔಟ್ ಮಾಡಿ ಭರವಸೆ ಮೂಡಿಸಿದರು. ಇದೇ ಓವರ್ ನ ಮೂರನೇ ಹಾಗೂ ನಾಲ್ಕನೇ ಎಸೆತದಲ್ಲಿ ಡೆಲ್ಲಿ ಬ್ಯಾಟರ್ ವಿಕೆಟ್ ಪಡೆದಳು. ಅಲ್ಲದೆ ಅಷ್ಟೋತ್ತಿನಿಂದ ಹಿನ್ನಡೆಯಲ್ಲಿದ್ದ ಆರ್ ಸಿಬಿ ಮುನ್ನಡೆ ತಂದು ಕೊಟ್ಟರು.
ಈ ಪಂದ್ಯದಲ್ಲಿ ಸೋಫಿ ಮೊಲಿನಿಕ್ಸ್ ಒಂದೇ ಓವರ್‌ನಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಆರ್‌ಸಿಬಿ ತಂಡ ಕಮ್ ಬ್ಯಾಕ್ ಮಾಡಲು ಸಹಾಯ ಮಾಡಿದರು. ಈ ಪಂದ್ಯದಲ್ಲಿ ಡೆಲ್ಲಿ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ ಅತ್ಯಂತ ವೇಗದಲ್ಲಿ ರನ್ ಗಳಿಸಿತ್ತು. ಅವರು 7 ಓವರ್‌ಗಳಲ್ಲಿ 64 ರನ್ ಗಳಿಸಿದ್ದರು. ನಂತರ ಸೋಫಿ ಮೊಲಿನೆಕ್ಸ್ ತನ್ನ ಎರಡನೇ ಓವರ್‌ನಲ್ಲಿ ಮೂರು ವಿಕೆಟ್‌ಗಳನ್ನು ಕಿತ್ತು RCB ಪಂದ್ಯದಲ್ಲಿ ಪುನರಾಗಮನ ಮಾಡುವಂತೆ ಮಾಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications