For Quick Alerts
ALLOW NOTIFICATIONS  
For Daily Alerts
 

WPL 2024: ಆರ್‌ಸಿಬಿ ತಂಡಕ್ಕೆ ಭಾರೀ ಹಿನ್ನಡೆ; ಮಹಿಳಾ ಪ್ರೀಮಿಯರ್ ಲೀಗ್‌ನಿಂದ ಹಿಂದೆ ಸರಿದ ಸ್ಟಾರ್ ಆಲ್‌ರೌಂಡರ್!

ಇಂಗ್ಲೆಂಡ್‌ ಮಹಿಳಾ ಕ್ರಿಕೆಟ್‌ ತಂಡದ ಸ್ಟಾರ್ ಆಲ್‌ರೌಂಡರ್ ಹೀದರ್ ನೈಟ್ ಅವರು ಮುಂಬರುವ 2024ರ ಮಹಿಳಾ ಪ್ರೀಮಿಯರ್ ಲೀಗ್ (WPL) ನಿಂದ ಹಿಂದೆ ಸರಿದಿದ್ದಾರೆ. ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಭಾರೀ ಹಿನ್ನಡೆಯಾಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ತಮ್ಮ ರಾಷ್ಟ್ರೀಯ ತಂಡವನ್ನು ಆಯ್ಕೆ ಮಾಡಿದ ನಂತರ, ಫ್ರಾಂಚೈಸ್ ಲೀಗ್ 2024ರ ಮಹಿಳಾ ಪ್ರೀಮಿಯರ್ ಪಂದ್ಯಾವಳಿಯಿಂದ ಹೊರನಡೆದರು. ಕಳೆದ ಋತುವಿನಿಂದಲೂ ಹೀದರ್ ನೈಟ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಹಿಳಾ ತಂಡದ ಭಾಗವಾಗಿದ್ದರು.

WPL 2024: Huge Setback For RCB Team; Heather Knight Out of The Womens Premier League

ಇಎಸ್‌ಪಿಎನ್‌ಕ್ರಿಕ್‌ಇನ್ಫೋ ವರದಿಯ ಪ್ರಕಾರ, ಇಂಗ್ಲೆಂಡ್ ಮತ್ತು ವೇಲ್ಸ್ (ಇಸಿಬಿ) ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸುವ ಆಟಗಾರರು ನ್ಯೂಜಿಲೆಂಡ್ ವಿರುದ್ಧದ ಮೊದಲ ಮೂರು ಟಿ20 ಪಂದ್ಯಗಳಿಗೆ ಆಯ್ಕೆಗೆ ಅರ್ಹರಾಗಿರುವುದಿಲ್ಲ ಎಂದು ಹೇಳಿತ್ತು.

ಮಹಿಳಾ ಪ್ರೀಮಿಯರ್ ಲೀಗ್ ಮಾರ್ಚ್ 17ರಂದು ಕೊನೆಗೊಳ್ಳಲಿದ್ದರೂ, ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್‌ನ ಮೊದಲ ಟಿ20 ಪಂದ್ಯ ಮಾರ್ಚ್ 19ರಂದು ಡ್ಯುನೆಡಿನ್‌ನ ಯೂನಿವರ್ಸಿಟಿ ಓವಲ್‌ನಲ್ಲಿ ನಡೆಯಲಿದೆ.

ಇದಕ್ಕೂ ಮೊದಲು, ಯುಪಿ ವಾರಿಯರ್ಜ್‌ನ ಲಾರೆನ್ ಬೆಲ್ ಕೂಡ ನ್ಯೂಜಿಲೆಂಡ್ ಮಹಿಳಾ ಪ್ರೀಮಿಯರ್ ಲೀಗ್‌ನಿಂದ ಹಿಂದೆ ಸರಿದಿದ್ದರು. ನಂತರ ಅನ್‌ಸೋಲ್ಡ್ ಶ್ರೀಲಂಕಾ ಅನುಭವಿ ಚಾಮರಿ ಅಥಾಪತ್ತು ಅವರನ್ನು ಆಯ್ಕೆ ಮಾಡಲಾಯಿತು.

ಆಲಿಸ್ ಕ್ಯಾಪ್ಸೆ (ಡೆಲ್ಲಿ ಕ್ಯಾಪಿಟಲ್ಸ್), ನ್ಯಾಟ್ ಸ್ಕಿವರ್-ಬ್ರಂಟ್ ಮತ್ತು ಇಸ್ಸಿ ವಾಂಗ್ (ಮುಂಬೈ ಇಂಡಿಯನ್ಸ್), ಡ್ಯಾನಿ ವ್ಯಾಟ್ ಮತ್ತು ಸೋಫಿ ಎಕ್ಲೆಸ್ಟೋನ್ (ಯುಪಿ ವಾರಿಯರ್ಜ್) ಮತ್ತು ಕೇಟ್ ಕ್ರಾಸ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸಲು ಸಿದ್ಧರಾಗಿರುವ ಇತರ ಇಂಗ್ಲೆಂಡ್ ಆಟಗಾರ್ತಿಯರು. ಆದರೆ, ಸದ್ಯಕ್ಕೆ ಇವರು ಟಿ20 ಲೀಗ್‌ನಲ್ಲಿ ಅವರ ಭಾಗವಹಿಸುವಿಕೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ.

WPL 2024: Huge Setback For RCB Team; Heather Knight Out of The Womens Premier League

ಆರ್‌ಸಿಬಿ ತಂಡಕ್ಕೆ ನಾಡಿನ್ ಡಿ ಕ್ಲರ್ಕ್ ಸೇರ್ಪಡೆ

ಇದೇ ವೇಳೆ ಆರ್‌ಸಿಬಿ ತಂಡವು ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ನಾಡಿನ್ ಡಿ ಕ್ಲರ್ಕ್ ಅವರನ್ನು ಹೀದರ್ ನೈಟ್‌ಗೆ ಬದಲಿಯಾಗಿ ಆಯ್ಕೆ ಮಾಡಿಕೊಂಡಿದೆ.

24 ವರ್ಷದ ನಾಡಿನ್ ಡಿ ಕ್ಲರ್ಕ್ 30 ಲಕ್ಷ ರೂಪಾಯಿಗಳ ಮೂಲ ಬೆಲೆಗೆ ಹರಾಜಿಗೆ ಹೋದರು. ಆದರೆ ಯಾವುದೇ ಫ್ರಾಂಚೈಸಿಗಳು ಖರೀದಿಸಲಿಲ್ಲ. ಇದೀಗ ಸ್ಮೃತಿ ಮಂಧಾನ, ಎಲ್ಲಿಸ್ ಪೆರ್ರಿ ಮತ್ತು ಇತರ ದೊಡ್ಡ ಆಟಗಾರ್ತಿಯರ ಜೊತೆಗೆ ಆಡಲಿದ್ದಾರೆ.

ಇಲ್ಲಿಯವರೆಗೆ 46 ಮಹಿಳಾ ಟಿ20 ಪಂದ್ಯಗಳಲ್ಲಿ ಆಡಿರುವ ನಾಡಿನ್ ಡಿ ಕ್ಲರ್ಕ್ 26.18ರ ಸರಾಸರಿಯಲ್ಲಿ ಮತ್ತು 98.35ರ ಸ್ಟ್ರೈಕ್-ರೇಟ್‌ನಲ್ಲಿ 419 ರನ್ ಗಳಿಸಿದ್ದಾರೆ.

ಮೇ 2019ರಲ್ಲಿ ಬೆನೋನಿಯ ವಿಲ್ಲೊಮೂರ್ ಪಾರ್ಕ್‌ನಲ್ಲಿ ಪಾಕಿಸ್ತಾನದ ಮಹಿಳಾ ತಂಡದ ವಿರುದ್ಧ ಅಜೇಯ 37 ರನ್‌ಗಳ ಅವರ ಗರಿಷ್ಠ ಸ್ಕೋರ್ ಬಂದಿದೆ.

ಮಹಿಳಾ ಟಿ20 ಪಂದ್ಯಗಳಲ್ಲಿ 7.19ರ ಎಕಾನಮಿ ದರದಲ್ಲಿ 35 ವಿಕೆಟ್‌ಗಳನ್ನು ಪಡೆದಿರುವ ನಾಡಿನ್ ಡಿ ಕ್ಲರ್ಕ್ ಬೌಲಿಂಗ್‌ನೊಂದಿಗೆ ಪರಿಣಾಮಕಾರಿಯಾಗಿದ್ದಾರೆ.

ಆಗಸ್ಟ್ 2022ರಲ್ಲಿ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ ಪಂದ್ಯದಲ್ಲಿ ನಾಡಿನ್ ಡಿ ಕ್ಲರ್ಕ್ ಶ್ರೀಲಂಕಾ ವಿರುದ್ಧ 4-0-7-3 ಅತ್ಯುತ್ತಮ ಅಂಕಿಗಳನ್ನು ಪಡೆದರು.

ಇನ್ನು ಕಳೆದ ಅವೃತ್ತಿಯಲ್ಲಿ ಸತತ 5 ಪಂದ್ಯಗಳಲ್ಲಿ ಸೋತ ನಂತರ ಆರ್‌ಸಿಬಿ ತಂಡ ಪ್ಲೇ ಆಫ್‌ಗೆ ಪ್ರವೇಶಿಸಲು ವಿಫಲವಾಗಿತ್ತು. 2024ರ ಆವೃತ್ತಿಗಾಗಿ ನಡೆದ ಮಿನಿ ಹರಾಜಿನಲ್ಲಿ ಆರ್‌ಸಿಬಿ ತಂಡ ಜಾರ್ಜಿಯಾ ವೇರ್ಹ್ಯಾಮ್, ಕೇಟ್ ಕ್ರಾಸ್, ಸಬ್ಬಿನೇನಿ ಮೇಘನಾ, ಸಿಮ್ರಾನ್ ಬಹದ್ದೂರ್, ಸೋಫಿ ಮೊಲಿನೆಕ್ಸ್, ಏಕ್ತಾ ಬಿಶ್ತ್ ಮತ್ತು ಶುಭಾ ಸತೀಶ್ ಅವರನ್ನು ಖರೀದಿಸಿದೆ.

Story first published: Sunday, January 28, 2024, 8:52 [IST]
Other articles published on Jan 28, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+