Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2024: ಫೈನಲ್‌ಗೆ ಆರ್‌ಸಿಬಿ ಕ್ವಾಲಿಫೈ

ಎಲಿಮಿನೆಟರ್‌ ಪಂದ್ಯದಲ್ಲಿ ಆರ್‌ಸಿಬಿ ಸ್ಥಿರ ಪ್ರದರ್ಶನವನ್ನು ನೀಡಿ ಮುಂಬೈ ಇಂಡಿಯನ್ಸ್‌ ತಂಡವನ್ನು ಮಣಿಸಿ ಫೈನಲ್‌ಗೆ ಅರ್ಹತೆ ಪಡೆದಿದೆ. ಎಲಿಮಿನಿಟರ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನವನ್ನು ನೀಡಿದ ಆರ್‌ಸಿಬಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅಬ್ಬರದ ಪ್ರದರ್ಶನ ನೀಡಿ ಫೈನಲ್‌ಗೆ ಅರ್ಹತೆ ಪಡೆದಿದೆ.

ಮುಂಬೈ ಇಂಡಿಯನ್ಸ್ ಗೆಲುವಿಗೆ 136 ರನ್ ಗಳ ಗುರಿ ನೀಡಲಾಗಿತ್ತು. ಆದರೆ ಮುಂಬೈ ಇಂಡಿಯನ್ಸ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 130 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರಿನಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದೆ.

WPL 2024 RCB Qualify for Finals

ಮುಂಬೈ ಇಂಡಿಯನ್ಸ್ ಪರ ನಾಯಕಿ ಹರ್ಮನ್‌ಪ್ರೀತ್ ಕೌರ್ ಗರಿಷ್ಠ 33 ರನ್ ಗಳಿಸಿದರು. ಅದೇ ಸಮಯದಲ್ಲಿ ಅಮೆಲಿಯಾ ಕಾರ್ 27 ರನ್ ಗಳಿಳಿದರು. ನ್ಯಾಟ್ ಸೀವರ್ ಬ್ರಂಟ್ 23 ರನ್ ಕೊಡುಗೆ ನೀಡಿದರು. ಇದಕ್ಕೂ ಮುನ್ನ ಆರಂಭಿಕರಾದ ಯಾಸ್ತಿಕಾ ಭಾಟಿಯಾ ಮತ್ತು ಹೈಲಿ ಮ್ಯಾಥ್ಯೂಸ್ ಮೊದಲ ವಿಕೆಟ್‌ಗೆ 27 ರನ್ ಜೊತೆಯಾಟವನ್ನು ನೀಡಿದರು. ಹೈಲಿ ಮ್ಯಾಥ್ಯೂಸ್ 15 ರನ್ ಗಳಿಸಿದರು. ಯಾಸ್ತಿಕಾ ಭಾಟಿಯಾ 19 ರನ್ ಗಳಿಸಿದ ನಂತರ ಎಲ್ಲಿಸ್ ಪೆರಿಯ ಬಲಿಯಾದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಶ್ರೇಯಾಂಕಾ ಪಾಟೀಲ್ ಯಶಸ್ವಿ ಬೌಲರ್ ಎನಿಸಿಕೊಂಡರು. ಶ್ರೇಯಾಂಕಾ ಪಾಟೀಲ್ 2 ವಿಕೆಟ್ ಪಡೆದರು. ಇದಲ್ಲದೇ ಆಲಿಸ್ ಪೆರ್ರಿ, ಸೋಫಿ ಮೊಲಿನೆಕ್ಸ್, ಜಾರ್ಜಿಯಾ ವೇರ್ಹ್ಯಾಮ್ ಮತ್ತು ಆಶಾ ಶೋಭನಾ ತಲಾ 1 ವಿಕೆಟ್ ಪಡೆದರು.

ಇದಕ್ಕೂ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂಧಾನ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 135 ರನ್ ಗಳಿಸಿತು. ಆರಂಭಿಕರಾದ ಸ್ಮೃತಿ ಮಂಧಾನ ಮತ್ತು ಸೋಫಿಯಾ ಡಿವೈನ್ ನಿರಾಸೆ ಮೂಡಿಸಿದರು.

WPL 2024 RCB Qualify for Finals

ರಿಚಾ ಘೋಷ್ ಕೂಡ ರನ್ ಗಳಿಸಲು ಸಾಧಯವಾಗಲಿಲ್ಲ. ಆದರೆ ಆಲಿಸ್ ಪೆರ್ರಿ ಸ್ಥಿರ ಪ್ರದರ್ಶನ ನೀಡಿದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಜೊತೆಗೆ ಈ ಆಲ್‌ರೌಂಡರ್ ಸಣ್ಣ ಜೊತೆಯಾಟಗಳ ಸಹಾಯದಿಂದ ಗೌರವಾನ್ವಿತ ಸ್ಕೋರ್ ತಲುಪಿದರು.

ಎಲ್ಲಿಸ್ ಪೆರ್ರಿ 50 ಎಸೆತಗಳಲ್ಲಿ 66 ರನ್ ಗಳಿಸಿ ಕೊನೆಯ ಓವರ್‌ನಲ್ಲಿ ಪೆವಿಲಿಯನ್‌ಗೆ ಮರಳಿದರು. ಅವರ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್‌ ಸೇರಿವೆ. ಈ ಆಲ್‌ರೌಂಡರ್‌ಗೆ ಇತರ ಬ್ಯಾಟ್ಸ್‌ಮನ್‌ಗಳ ಬೆಂಬಲ ಸಿಗಲಿಲ್ಲ. ಆದಾಗ್ಯೂ, ಜಾರ್ಜಿಯಾ ವೇರ್‌ಹ್ಯಾಮ್ ಕೊನೆಯ ಓವರ್‌ಗಳಲ್ಲಿ 10 ಎಸೆತಗಳಲ್ಲಿ 18 ರನ್ ಗಳಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದರು.

Story first published: Friday, March 15, 2024, 23:49 [IST]
Other articles published on Mar 15, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+