WPL 2024: ಆರ್‌ಸಿಬಿ ತಂಡದ ಸಂಪೂರ್ಣ ವೇಳಾಪಟ್ಟಿ
2024ರ ಮಹಿಳಾ ಪ್ರೀಮಿಯರ್ ಲೀಗ್ (WPL) ಎರಡನೇ ಆವೃತ್ತಿಯ ಸಂಪೂರ್ಣ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದ್ದು, ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಕಳೆದ ವರ್ಷದ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.
2024ರ ಮಹಿಳಾ ಪ್ರೀಮಿಯರ್ ಲೀಗ್‌ನ ಎರಡನೇ ಆವೃತ್ತಿಯು ಫೆಬ್ರವರಿ 23ರಿಂದ ಮಾರ್ಚ್ 17ರವರೆಗೆ ನಡೆಯಲಿದೆ. ಫೈನಲ್ ಪಂದ್ಯವನ್ನು ಮಾರ್ಚ್ 17ರಂದು ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಆಡಲು ನಿಗದಿಪಡಿಸಲಾಗಿದೆ.

2008ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಾರಂಭವಾದಾಗಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿ ಹಲವು ವಿಶ್ವ ದರ್ಜೆಯ ಆಟಗಾರರನ್ನು ಹೊಂದಿದೆ.
ಆದರೆ, ಕಳೆದ 16 ಆವೃತ್ತಿಗಳಿಂದ ಪ್ರಶಸ್ತಿ ಗೆಲ್ಲಲು ವಿಫಲವಾಗಿದೆ. ಕಳೆದ ವರ್ಷ ಮಹಿಳಾ ಪ್ರೀಮಿಯರ್ ಲೀಗ್ (WPL) ನ ಉದ್ಘಾಟನಾ ಋತುವಿನಲ್ಲಿ ಆರ್‌ಸಿಬಿ ಫ್ರಾಂಚೈಸಿ ತಮ್ಮ ತಂಡವನ್ನು ಹೊಂದಲು ನಿರ್ಧರಿಸಿದಾಗ, ತಮ್ಮ ತಂಡವನ್ನು ಹೇಗೆ ನಿರ್ಮಿಸಲಿದ್ದಾರೆ ಎಂಬುದನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದರು.
ಚೊಚ್ಚಲ ಬಾರಿಗೆ ನಡೆದ ಡಬ್ಲ್ಯುಪಿಎಲ್ ಹರಾಜು ಆರ್‌ಸಿಬಿ ತಂಡಕ್ಕೆ ಉತ್ತಮ ಆಟಗಾರ್ತಿಯರೇ ಸೇರಿಕೊಂಡರು. ಭಾರತ ತಂಡದ ಉಪನಾಯಕಿ ಸ್ಮೃತಿ ಮಂಧಾನ ಅವರನ್ನು 3.40 ಕೋಟಿ ರೂಪಾಯಿಗೆ ಖರೀದಿಸಿತು.
ಸ್ಮೃತಿ ಮಂಧಾನ 2023ರಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನಲ್ಲೇ ಅತ್ಯಂತ ದುಬಾರಿ ಆಟಗಾರ್ತಿಯಾಗಿ ಹೊರಹೊಮ್ಮಿದರು. ಆದಾಗ್ಯೂ, ಅವರು ಆರ್‌ಸಿಬಿ ಲೈನ್-ಅಪ್‌ನಲ್ಲಿ ಸ್ಟಾರ್ ಆಟಗಾರ್ತಿಯಾಗಿ ಮಿಂಚಲಿಲ್ಲ.
ಎಲ್ಲಿಸ್ ಪೆರ್ರಿ ಮತ್ತು ಸೋಫಿ ಡಿವೈನ್ ಅವರಂತಹ ಅನುಭವಿ ಅಂತಾರಾಷ್ಟ್ರೀಯ ಆಲ್‌ರೌಂಡರ್‌ಗಳನ್ನು ಮತ್ತು ಮೇಗನ್ ಶುಟ್ ಮತ್ತು ರೇಣುಕಾ ಸಿಂಗ್ ಅವರಂತಹ ಪ್ರಭಾವಶಾಲಿ ಬೌಲರ್‌ಗಳನ್ನು ಆಯ್ಕೆ ಮಾಡಿದರು. ಸ್ಫೋಟಕ ಬ್ಯಾಟರ್ ಮತ್ತು ರಿಚಾ ಘೋಷ್ ಅವರನ್ನು ಆರ್‌ಸಿಬಿ ಫ್ರಾಂಚೈಸಿ ಖರೀದಿಸಿತು.
ಅಂತಹ ಸ್ಟಾರ್ ಆಟಗಾರ್ತಿಯರಿಂದ ಕೂಡಿದ ತಂಡದೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2023ರ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವೆಂದು ಎಂದು ಅನೇಕರು ಹೆಸರಿಸಿದ್ದರು.
ಆದರೆ, ಸ್ಮೃತಿ ಮಂಧಾನ ನಾಯಕತ್ವದ ತಂಡ ತಮ್ಮ ಮೊದಲ ಐದು ಪಂದ್ಯಗಳಲ್ಲಿ ಸೋತರು. ಇದು ಪ್ಲೇಆಫ್ ತಲುಪುವ ಆಸೆಯನ್ನು ಕೊನೆಗೊಳಿಸಿತು. ನಂತರ ತಮ್ಮ ಕೊನೆಯ ಮೂರು ಪಂದ್ಯಗಳಲ್ಲಿ ಆರ್‌ಸಿಬಿ ತಂಡವು ಎರಡರಲ್ಲಿ ಗೆದ್ದು ಒಂದನ್ನು ಸೋತು ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿತು. ಕೇವಲ ಗುಜರಾತ್ ಜೈಂಟ್ಸ್ ತಂಡಕ್ಕಿಂತ ಮೇಲೆ ಇತ್ತು.
ಮುಂಬರುವ ಮಹಿಳಾ ಪ್ರೀಮಿಯರ್ ಲೀಗ್ ಋತುವಿನಲ್ಲಿ ಆರ್‌ಸಿಬಿ ಮಹಿಳಾ ತಂಡಕ್ಕೆ ಹೊಸ ಮುಖ್ಯ ಕೋಚ್ ಆಗಿ ಆಸ್ಟ್ರೇಲಿಯಾದ ಲ್ಯೂಕ್ ವಿಲಿಯಮ್ಸ್ ಅವರನ್ನು ಘೋಷಿಸಲಾಗಿದೆ. ಇದೇ ವೇಳೆ ಮೊ ಬೊಬಾಟ್ ಕ್ರಿಕೆಟ್ ನಿರ್ದೇಶಕರಾಗಿ ಬಂದಿದ್ದಾರೆ.
2023ರ ಮಹಿಳಾ ಪ್ರೀಮಿಯರ್ ಲೀಗ್ ಸಮಯದಲ್ಲಿ ಈ ಪಾತ್ರದಲ್ಲಿ ಸೇವೆ ಸಲ್ಲಿಸಿದ ಬೆನ್ ಸಾಯರ್ ಅವರನ್ನು ಲ್ಯೂಕ್ ವಿಲಿಯಮ್ಸ್ ಬದಲಾಯಿಸಿದರು.
2024ರ ಮಹಿಳಾ ಪ್ರೀಮಿಯರ್ ಲೀಗ್‌ನ ಆರ್‌ಸಿಬಿ ತಂಡದ ಪೂರ್ಣ ವೇಳಾಪಟ್ಟಿ
ಫೆಬ್ರವರಿ 24 - ಆರ್‌ಸಿಬಿ vs ಯುಪಿ ವಾರಿಯರ್ಜ್, ಬೆಂಗಳೂರು
ಫೆಬ್ರವರಿ 27 - ಆರ್‌ಸಿಬಿ vs ಗುಜರಾತ್ ಜೈಂಟ್ಸ್, ಬೆಂಗಳೂರು
ಫೆಬ್ರವರಿ 29 - ಆರ್‌ಸಿಬಿ vs ಡೆಲ್ಲಿ ಕ್ಯಾಪಿಟಲ್ಸ್, ಬೆಂಗಳೂರು
ಮಾರ್ಚ್ 2 - ಆರ್‌ಸಿಬಿ vs ಮುಂಬೈ ಇಂಡಿಯನ್ಸ್, ಬೆಂಗಳೂರು
ಮಾರ್ಚ್ 4 - ಯುಪಿ ವಾರಿಯರ್ಜ್ vs ಆರ್‌ಸಿಬಿ, ಬೆಂಗಳೂರು
ಮಾರ್ಚ್ 6 - ಗುಜರಾತ್ ಜೈಂಟ್ಸ್ vs ಆರ್‌ಸಿಬಿ, ದೆಹಲಿ
ಮಾರ್ಚ್ 10 - ಡೆಲ್ಲಿ ಕ್ಯಾಪಿಟಲ್ಸ್ vs ಆರ್‌ಸಿಬಿ, ದೆಹಲಿ
ಮಾರ್ಚ್ 12 - ಆರ್‌ಸಿಬಿ vs ಮುಂಬೈ ಇಂಡಿಯನ್ಸ್, ದೆಹಲಿ
ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಆರಂಭವಾಗಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications