WPL 2024: ಆರ್‌ಸಿಬಿ vs ಯುಪಿ ವಾರಿಯರ್ಜ್ ಹಣಾಹಣಿ; ಸಂಭಾವ್ಯ ಆಡುವ 11ರ ಬಳಗ; ಟಿವಿ, ಲೈವ್ ಸ್ಟ್ರೀಮ್ ವಿವರ
ಶನಿವಾರ, ಫೆಬ್ರವರಿ 24ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಹಿಳಾ ತಂಡವು ಯುಪಿ ವಾರಿಯರ್ಜ್ ಮಹಿಳಾ ತಂಡದ ವಿರುದ್ಧ 2024ರ ಮಹಿಳಾ ಪ್ರೀಮಿಯರ್ ಲೀಗ್‌ನ ಎರಡನೇ ಪಂದ್ಯದಲ್ಲಿ ಸೆಣಸಾಟ ನಡೆಸಲಿದೆ.
ಎಂ ಚಿನ್ನಸ್ವಾಮಿ ಅಂಗಳದಲ್ಲಿ ತವರಿನ ಅಭಿಮಾನಿಗಳ ಭಾರೀ ಬೆಂಬಲದೊಂದಿಗೆ ಸ್ಮೃತಿ ಮಂಧಾನ ನಾಯಕತ್ವದ ಆರ್‌ಸಿಬಿ ಮಹಿಳಾ ತಂಡ ಈ ಆವೃತ್ತಿಯನ್ನು ಗೆಲುವಿನೊಂದಿಗೆ ಆರಂಭಿಸಲು ಎದುರು ನೋಡುತ್ತಿದೆ.

ಕಳೆದ ಋತುವಿನಲ್ಲಿ ಆರ್‌ಸಿಬಿ ಆಡಿದ ಎಂಟು ಪಂದ್ಯಗಳಲ್ಲಿ ಎರಡನ್ನು ಮಾತ್ರ ಗೆದ್ದು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಇನ್ನು ಎಂಟು ಪಂದ್ಯಗಳಲ್ಲಿ ತಲಾ ನಾಲ್ಕು ಗೆಲುವು ಮತ್ತು ನಾಲ್ಕು ಸೋಲುಗಳೊಂದಿಗೆ ಯುಪಿ ವಾರಿಯರ್ಜ್ ಮೂರನೇ ಸ್ಥಾನದಲ್ಲಿತ್ತು.
ಉಭಯ ತಂಡಗಳು ಕಳೆದ ಋತುವಿನಲ್ಲಿ ಮುಖಾಮುಖಿಯಾದ ಎರಡು ಪಂದ್ಯಗಳಲ್ಲಿ ತಲಾ ಒಂದನ್ನು ಗೆದ್ದಿವೆ. ಯುಪಿ ವಾರಿಯರ್ಜ್ ತಂಡವು ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ ಆಡಿದರು ಮತ್ತು 72 ರನ್‌ಗಳಿಂದ ಸೋಲು ಅನುಭವಿಸಿದರು.

ಪ್ರಸಕ್ತ ಋತುವಿನಲ್ಲಿ ಸ್ಮೃತಿ ಮಂಧಾನ ಮತ್ತೆ ಆರ್‌ಸಿಬಿ ಮಹಿಳಾ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆರ್‌ಸಿಬಿ ಕಳೆದ ಋತುವಿನಲ್ಲಿದ್ದ ಒಟ್ಟು 11 ಆಟಗಾರ್ತಿಯರನ್ನು ಉಳಿಸಿಕೊಂಡಿದೆ ಮತ್ತು ಹರಾಜಿನಲ್ಲಿ ಏಳು ಹೊಸ ಆಟಗಾರ್ತಿಯರನ್ನು ಆಯ್ಕೆ ಮಾಡಿದೆ. ಮಿನಿ ಹರಾಜಿಗೂ ಮುನ್ನ ಡೇನ್ ವ್ಯಾನ್ ನಿಕೆರ್ಕ್ ಮತ್ತು ಮೇಗನ್ ಶುಟ್ ಅವರಂತಹ ಪ್ಲೇಯರ್ಸ್‌ರನ್ನು ಬಿಡುಗಡೆ ಮಾಡಿತು.
ಮಿನಿ ಹರಾಜಿನಲ್ಲಿ ಏಕ್ತಾ ಬಿಶ್ತ್ ತಂಡವನ್ನು 60 ಲಕ್ಷ ರೂಪಾಯಿಗೆ ಸೇರುವ ಮೂಲಕ ಅತ್ಯಂತ ದುಬಾರಿ ಆಟಗಾರ್ತಿಯಾದರು. ಜಾರ್ಜಿಯಾ ವೇರ್‌ಹ್ಯಾಮ್, ಕೇಟ್ ಕ್ರಾಸ್ ಮತ್ತು ಸೋಫಿ ಮೊಲಿನೆಕ್ಸ್ ಮಿನಿ ಹರಾಜಿನಲ್ಲಿ ಆರ್‌ಸಿಬಿ ಖರೀದಿಸಿದ ಮೂವರು ಸಾಗರೋತ್ತರ ಆಟಗಾರ್ತಿಯರಾಗಿದ್ದಾರೆ.

ಮತ್ತೊಂದೆಡೆ, ಯುಪಿ ವಾರಿಯರ್ಜ್ ಕಳೆದ ಋತುವಿನಿಂದ ಒಟ್ಟು 13 ಆಟಗಾರ್ತಿಯರನ್ನು ಉಳಿಸಿಕೊಂಡಿತು ಮತ್ತು ಮಿನಿ ಹರಾಜಿನಲ್ಲಿ ಐವರು ಆಟಗಾರ್ತಿಯರನ್ನು ಖರೀದಿಸಿದರು.
ಮಿನಿ ಹರಾಜಿನಲ್ಲಿ ಕನ್ನಡತಿ ವೃಂದಾ ದಿನೇಶ್ ಅವರು 1.3 ಕೋಟಿ ರೂಪಾಯಿಗೆ ಯುಪಿ ವಾರಿಯರ್ಜ್ ಸೇರಿದ ಅತ್ಯಂತ ದುಬಾರಿ ಖರೀದಿಯಾಗಿದ್ದರು. ಮಿನಿ ಹರಾಜಿನಲ್ಲಿ ಯುಪಿ ವಾರಿಯರ್ಜ್ ಸೇರಿದ ಡ್ಯಾನಿ ವ್ಯಾಟ್ ಮಾತ್ರ ಸಾಗರೋತ್ತರ ಆಟಗಾರ್ತಿಯಾಗಿದ್ದರು.
ಆರ್‌ಸಿಬಿ vs ಯುಪಿ ವಾರಿಯರ್ಜ್ ಸಂಭಾವ್ಯ ಆಡುವ 11ರ ಬಳಗ
ಆರ್‌ಸಿಬಿ ಮಹಿಳಾ ತಂಡ: ಸೋಫಿ ಡಿವೈನ್, ಸ್ಮೃತಿ ಮಂಧಾನ (ನಾಯಕಿ) ಎಲ್ಲಿಸ್ ಪೆರ್ರಿ, ದಿಶಾ ಕಸತ್, ರಿಚಾ ಘೋಷ್ (ವಿಕೆಟ್ ಕೀಪರ್), ಜಾರ್ಜಿಯಾ ವೇರ್‌ಹ್ಯಾಮ್, ಕೇಟ್ ಕ್ರಾಸ್, ಶ್ರೇಯಾಂಕಾ ಪಾಟೀಲ್, ಸಿಮ್ರಾನ್ ಬಹದ್ದೂರ್, ಏಕ್ತಾ ಬಿಶ್ತ್, ರೇಣುಕಾ ಸಿಂಗ್.
ಯುಪಿ ವಾರಿಯರ್ಜ್ ಮಹಿಳಾ ತಂಡ: ಅಲಿಸ್ಸಾ ಹೀಲಿ (ನಾಯಕಿ), ಶ್ವೇತಾ ಸೆಹ್ರಾವತ್, ತಹ್ಲಿಯಾ ಮೆಕ್‌ಗ್ರಾತ್, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್, ಕಿರಣ್ ನವಗಿರೆ, ವೃಂದಾ ದಿನೇಶ್, ಸೋಫಿ ಎಕ್ಲೆಸ್ಟೋನ್, ಅಂಜಲಿ ಸರ್ವಾಣಿ, ಪಾರ್ಶವಿ ಚೋಪ್ರಾ, ರಾಜೇಶ್ವರಿ ಗಾಯಕ್ವಾಡ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications