Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2024: ಆರ್‌ಸಿಬಿ ಸ್ಟಾರ್ ಮಹಿಳಾ ಆಟಗಾರ್ತಿಗೆ ಉತ್ತರ ಕರ್ನಾಟಕ ಅಭಿಮಾನಿಯಿಂದ ಮದುವೆ ಪ್ರಸ್ತಾಪ!

ಮಂಗಳವಾರ, ಫೆಬ್ರವರಿ 27ರ ರಾತ್ರಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2024ರ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಪಂದ್ಯಾವಳಿಯ 5ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಗುಜರಾತ್ ಜೈಂಟ್ಸ್ (ಜಿಜಿ) ತಂಡದ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.

ಇದಕ್ಕೂ ಮುನ್ನ ಪಂದ್ಯ ನಡೆಯುತ್ತಿರುವ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸ್ಟಾರ್ ಆಟಗಾರ್ತಿ ಹಾಗೂ ಕನ್ನಡತಿ ಶ್ರೇಯಾಂಕಾ ಪಾಟೀಲ್ ಅವರು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನಿಯೊಬ್ಬರಿಂದ ಮದುವೆ ಪ್ರಸ್ತಾಪವನ್ನು ಸ್ವೀಕರಿಸಿದರು.

WPL 2024: RCB Women Cricketer Receive Marriage Proposal from North Karnataka Fan

ಆರ್‌ಸಿಬಿ ತಂಡದ ಬ್ಯಾಟಿಂಗ್ ಇನಿಂಗ್ಸ್‌ನ ಏಳನೇ ಓವರ್‌ನ ಸಮಯದಲ್ಲಿ ಕ್ಯಾಮೆರಾಮನ್ ಸೆರೆಹಿಡಿದ ಉತ್ತರ ಕರ್ನಾಟಕದ ಅಭಿಮಾನಿಯೊಬ್ಬರು, "ನೀವು ನನ್ನನ್ನು ಮದುವೆಯಾಗುತ್ತೀರಾ ಶ್ರೇಯಾಂಕಾ ಪಾಟೀಲ್" ಎಂದು ಬರೆದುಕೊಂಡಿದ್ದ ಫಲಕವನ್ನು ತೋರಿಸಿದರು.

ಈ ಘಟನೆ ವೇಳೆ ಆರ್‌ಸಿಬಿ ತಂಡದ ಆಟಗಾರ್ತಿಯರು ತಮ್ಮ ಪ್ರತಿಕ್ರಿಯೆಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಅವರು ನಗುತ್ತಿರುವುದನ್ನು ಕಾಣಬಹುದು. ಶ್ರೇಯಾಂಕಾ ಪಾಟೀಲ್‌ಗೆ ಮದುವೆ ಪ್ರಸ್ತಾಪದ ವಿಡಿಯೋ ಬಿಗ್ ಸ್ಕ್ರೀನ್‌ನಲ್ಲಿ ಬರುತ್ತಿದ್ದಂತೆಯೇ ಆರ್‌ಸಿಬಿ ಡ್ರೆಸ್ಸಿಂಗ್ ರೂಂನಲ್ಲಿ ನಗುತ್ತಿರುವ ಫೋಟೋ ನೋಡಬಹುದು.

WPL 2024: RCB Women Cricketer Receive Marriage Proposal from North Karnataka Fan

ಇನ್ನು ಪಂದ್ಯದ ಕುರಿತು ಮಾತುನಾಡುವುದಾದರೆ, ಸ್ಮೃತಿ ಮಂಧಾನ ಮತ್ತು ಸಬ್ಬಿನೇನಿ ಮೇಘನಾ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಗುಜರಾತ್ ಜೈಂಟ್ಸ್ ಮಹಿಳಾ ತಂಡದ ವಿರುದ್ಧ ಎಂಟು ವಿಕೆಟ್‌ಗಳ ಸುಲಭ ಗೆಲುವು ಸಾಧಿಸಿತು.

108 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡಕ್ಕೆ ನಾಯಕಿ ಸ್ಮೃತಿ ಮಂಧಾನ ಮತ್ತು ಸೋಫಿ ಡಿವೈನ್ ಕ್ರೀಸ್‌ಗೆ ಬಂದರು. ಇನ್ನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಆಶ್ಲೀಗ್ ಗಾರ್ಡ್ನರ್ ಬೌಲಿಂಗ್‌ನಲ್ಲಿ ಕಿವೀಸ್ ಬ್ಯಾಟಿಂಗ್ ಆಲ್‌ರೌಂಡರ್ ಸೋಫಿ ಡಿವೈನ್ ಅವರನ್ನು ಔಟ್ ಮಾಡುವ ಮುನ್ನ ಮೊದಲ ವಿಕೆಟ್‌ಗೆ 32 ರನ್‌ಗಳ ಜೊತೆಯಾಟ ನಿರ್ಮಿಸಿದರು.

ಸೋಫಿ ಡಿವೈನ್ ಕೇವಲ ಆರು ರನ್ ಗಳಿಸಿದರು ಮತ್ತು 100.00ರ ಸ್ಟ್ರೈಕ್ ರೇಟ್‌ನೊಂದಿಗೆ ಒಂದು ಬೌಂಡರಿ ಹೊಡೆದರು. ಆಲ್‌ರೌಂಡರ್ ಡಿವೈನ್ ಔಟಾದರೂ ಸ್ಮೃತಿ ಮಂಧಾನ ಅದ್ಭುತ ಬ್ಯಾಟಿಂಗ್ ಮಾಡುವ ಮೂಲಕ ಫಾರ್ಮ್‌ಗೆ ಮರಳಿದರು.

ಒಂಬತ್ತನೇ ಓವರ್‌ನಲ್ಲಿ ತನುಜಾ ಕನ್ವರ್ ಬೌಲಿಂಗ್‌ನಲ್ಲಿ ಔಟ್ ಆಗುವ ಮುನ್ನ ಸ್ಮೃತಿ ಮಂಧಾನ 27 ಎಸೆತಗಳಲ್ಲಿ 159.26ರ ಸ್ಟ್ರೈಕ್ ರೇಟ್‌ನೊಂದಿಗೆ 43 ರನ್ ಗಳಿಸಿದರು. ಆರ್‌ಸಿಬಿ ತಂಡದ ನಾಯಕಿ ಎಂಟು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದರು.

ಇಬ್ಬರು ಆರಂಭಿಕರು ಔಟಾದ ಬಳಿಕ ಬಂದ ಸಬ್ಬಿನೇನಿ ಮೇಘನಾ ಮತ್ತು ಎಲ್ಲಿಸ್ ಪೆರ್ರಿ ಪಂದ್ಯ ಗೆಲ್ಲಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು ಮತ್ತು ಆತಿಥೇಯ ತಂಡದ ಅಭಿಮಾನಿಗಳನ್ನು ನಿರಾಸೆಗೊಳಿಸಲಿಲ್ಲ.

ಸಬ್ಬಿನೇನಿ ಮೇಘನಾ ಮತ್ತು ಎಲ್ಲಿಸ್ ಪೆರ್ರಿ ಮುರಿಯದ ಮೂರನೇ ವಿಕೆಟ್‌ಗೆ 108 ರನ್‌ಗಳ ಜೊತೆಯಾಟವಾಡಿದರು ಮತ್ತು ಯಶಸ್ವಿಯಾಗಿ ಗುರಿ ಬೆನ್ನಟ್ಟಿದರು.

ಮೇಘನಾ 28 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್ ಸಮೇತ 128.57ರ ಸ್ಟ್ರೈಕ್ ರೇಟ್‌ನೊಂದಿಗೆ 36 ರನ್ ಗಳಿಸಿದರೆ, ಎಲ್ಲಿಸ್ ಪೆರ್ರಿ ನಾಲ್ಕು ಬೌಂಡರಿ ಮೂಲಕ 23 ರನ್ ಬಾರಿಸಿದರು. ಆರ್‌ಸಿಬಿ ತಂಡ ಪ್ರಸಕ್ತ ಪಂದ್ಯಾವಳಿಯಲ್ಲಿ ಸತತ ಎರಡನೇ ಗೆಲುವು ಸಾಧಿಸಿತು.

Story first published: Wednesday, February 28, 2024, 12:48 [IST]
Other articles published on Feb 28, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+