ಭಾನುವಾರ, ಮಾರ್ಚ್ 17ರಂದು ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಸ್ಮೃತಿ ಮಂಧಾನ ನಾಯಕತ್ವದ ಆರ್‌ಸಿಬಿ ಮಹಿಳಾ ತಂಡ ಐತಿಹಾಸಿಕ 2024ರ ಮಹಿಳಾ ಪ್ರೀಮಿಯರ್ ಲೀಗ್ ಟ್ರೋಫಿಯನ್ನು ಗೆದ್ದ ನಂತರ, ದೇಶದ ಪ್ರತಿಯೊಂದು ಮೂಲೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂತು.
2008ರಲ್ಲಿ ಫ್ರಾಂಚೈಸಿಯಾಗಿ ಅಸ್ತಿತ್ವಕ್ಕೆ ಬಂದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಂದೇ ಒಂದು ಪ್ರಶಸ್ತಿ ಗೆಲ್ಲದ ಕಾರಣ, ಈ ಗೆಲುವು ವಿಶೇಷವಾಗಿದೆ. 16 ವರ್ಷಗಳ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಪುರುಷರ ತಂಡ ಒಮ್ಮೆಯೂ ಚಾಂಪಿಯನ್ ಪಟ್ಟ ಅಲಂಕರಿಸಿಲ್ಲ.

ಆರ್‌ಸಿಬಿ ಮಹಿಳಾ ತಂಡವನ್ನು ಐತಿಹಾಸಿಕ ಪ್ರಶಸ್ತಿಗೆ ಮುನ್ನಡೆಸಿ ನ್ಯಾಶನಲ್ ಕ್ರಶ್ ಸ್ಮೃತಿ ಮಂಧಾನಾಗೆ ಇದು ದೊಡ್ಡ ದಿನವಾಗಿತ್ತು. ತನ್ನ ಫ್ರಾಂಚೈಸಿ ಲೀಗ್ ವೃತ್ತಿಜೀವನದಲ್ಲಿ ಪ್ರಮುಖ ಟ್ರೋಫಿಯನ್ನು ಸೇರಿಸಿಕೊಂಡರು.
ನಾಯಕಿ ಸ್ಮೃತಿ ಮಂಧಾನ ತನ್ನ ತಂಡದ ಆಟಗಾರ್ತಿಯರೊಂದಿಗೆ ಟ್ರೋಫಿ ಮತ್ತು ಆರ್‌ಸಿಬಿ ಫ್ರಾಂಚೈಸಿಯ ಅಧಿಕಾರಿಗಳೊಂದಿಗೆ ಫೋಟೋಗೆ ಪೋಸ್ ನೀಡಿದರು.

ಆರ್‌ಸಿಬಿ ಕ್ವೀನ್ ಸ್ಮೃತಿ ಮಂಧಾನ ಅವರು ಪುರುಷರ ತಂಡದ ಮಾಜಿ ನಾಯಕ ಮತ್ತು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯಿಂದ ವಿಡಿಯೋ ಕಾಲ್ ಸ್ವೀಕರಿಸಿದರು. ವಾಸ್ತವವಾಗಿ, ಇಡೀ ಮಹಿಳಾ ತಂಡವು ವಿರಾಟ್ ಕೊಹ್ಲಿಯೊಂದಿಗೆ ವಿಡಿಯೋ ಕರೆಯಲ್ಲಿ ಗೆಲುವನ್ನು ಸಂಭ್ರಮಿಸಿತು.
ಆರ್‌ಸಿಬಿ ಮಹಿಳಾ ತಂಡದ ನಾಯಕಿ ಸ್ಮೃತಿ ಮಂಧಾನ ಗೆಲುವಿನ ನಂತರ 'ಮಿಸ್ಟರಿ ಹುಡುಗ'ನೊಂದಿಗೆ ಕಾಣಿಸಿಕೊಂಡರು. ಅಲ್ಲದೆ, ಟ್ರೋಫಿಯೊಂದಿಗೆ ಫೋಟೋ ಪೋಸ್ ನೀಡಿದರು. ಈ ಹುಡುಗ ಯಾರೆಂದು ತಿಳಿಯುವ ಕುತೂಹಲ ಸ್ಮೃತಿ ಮಂಧಾನಳನ್ನು ಮನಸಲ್ಲೇ ಇಷ್ಟಪಡುವ ಅಭಿಮಾನಿಗಳಲ್ಲಿದೆ.

ಆರ್‌ಸಿಬಿ ತಂಡದ ಮಾಜಿ ಆಟಗಾರ ಯುಜ್ವೇಂದ್ರ ಚಹಾಲ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಅದೇ ಹುಡುಗನ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ಮಧ್ಯಪ್ರದೇಶದ ಇಂದೋರ್‌ಗೆ ಸೇರಿದ ಬಾಲಿವುಡ್ ಗಾಯಕ ಮತ್ತು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಗೆಲುವಿನ ನಂತರ ಮೈದಾನದಲ್ಲೇ ಸ್ಮೃತಿ ಮಂಧಾನಳನ್ನು ತಬ್ಬಿಕೊಂಡು ಅಭಿನಂದಿಸಿದ.
ಪಲಾಶ್ ಮುಚ್ಚಲ್‌ನ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಮೃತಿ ಮಂಧಾನ ಮತ್ತು ಅವನು ಸ್ನೇಹಿತರಾಗಿದ್ದಾರೆ ಮತ್ತು ಅದು ಗೆಳೆತನಕ್ಕಿಂತ ಹೆಚ್ಚು ಎಂದು ಹೇಳುತ್ತದೆ.
ಪಲಾಶ್ ಮುಚ್ಚಲ್ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಪೋಸ್ಟ್ ಮಾಡಿ ಶೀರ್ಷಿಕೆ ನೀಡಿದ್ದು, "ಈ ಸಲ ಕಪ್ ನಮ್ದು! ಆರ್‌ಸಿಬಿ ಹೃದಯ ಎಮೋಜಿ' ಹಾಕಿದ್ದಾನೆ. ಇನ್ನು ಕಾಮೆಂಟ್‌ಗಳ ವಿಭಾಗವು ಆತ ನಿಜವಾಗಿಯೂ ಯಾರೆಂದು ಅಭಿಮಾನಿಗಳನ್ನು ಗೊಂದಲಗೊಳಿಸಿತು.
ಕೆಲವರು ಈತ ಸ್ಮೃತಿ ಮಂಧಾನಳ ಬಾಯ್ ಫ್ರೆಂಡ್ ಎಂದು ಹೇಳಿದರೆ, ಇನ್ನು ಕೆಲವರು ಅಣ್ಣ-ತಂಗಿ ಎಂದು ಹೇಳಿದ್ದಾರೆ. ಸ್ಮೃತಿ ಮಂಧಾನ ಮತ್ತು ಪಲಾಶ್ ಮುಚ್ಚಲ್ ನಡುವಿನ ಸಂಬಂಧದ ಬಗ್ಗೆ ಆಕೆಯ ಅಭಿಮಾನಿಗಳು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
ಪಲಾಶ್ ಮುಚ್ಚಲ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಹಿಂದೆ ಸ್ಮೃತಿ ಮಂಧಾನ ಜೊತೆಗಿರುವ ಹಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಅಂತಹ ಒಂದು ಫೋಟೋ ಜುಲೈ 7, 2023ರಿಂದ ಬಂದಿದೆ. ಇದು ಸ್ಮೃತಿ ಮತ್ತು ಪಲಾಶ್ ನಗುತ್ತಿರುವ ಆರಾಧ್ಯ ಫೋಟೋವಾಗಿದ್ದು, ಶೀರ್ಷಿಕೆಯಲ್ಲಿ '#4' ಎಂದು ಬರೆಯಲಾಗಿದೆ.
ಕಾಮೆಂಟ್‌ಗಳ ವಿಭಾಗದಲ್ಲಿ ಅಭಿಮಾನಿಗಳು ಸಂಖ್ಯೆ 4 ಎಂದರೆ, ಸಂಬಂಧದಲ್ಲಿ ನಾಲ್ಕನೇ ವರ್ಷವನ್ನು ಪೂರ್ಣಗೊಳಿಸುತ್ತದೆಯೇ ಎಂದು ಊಹಿಸುತ್ತಿದ್ದಾರೆ.
ನಟ ರಾಜ್‌ಪಾಲ್ ಯಾದವ್ ಅದೇ ಫೋಟೋದ ಕಾಮೆಂಟ್‌ಗಳ ವಿಭಾಗದಲ್ಲಿ ಅವರ ಸಂಬಂಧವನ್ನು ದೃಢಪಡಿಸಿದ್ದಾರೆ. ಆದರೆ ಪಲಾಶ್ ಮುಚ್ಚಲ್ ಅಥವಾ ಸ್ಮೃತಿ ಮಂಧಾನ ಇನ್ನೂ ಅದನ್ನು ಸ್ವತಃ ಬಹಿರಂಗಪಡಿಸಿಲ್ಲ. ರಾಜ್‌ಪಾಲ್ ಯಾದವ್ ಪ್ರತಿಕ್ರಿಯಿಸಿ, "ಸುಂದರ ಜೋಡಿ! ದೇವರು ಆಶೀರ್ವದಿಸಲಿ ಮತ್ತು ನಿಮ್ಮಿಬ್ಬರಿಗೂ ಶುಭ ಹಾರೈಸಲಿ," ಎಂದು ಬರೆದಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಾಗ ವೈರಲ್ ಆಗಿರುವ ವಿಡಿಯೋದಲ್ಲಿ, ಪಲಾಶ್ ಮುಚ್ಚಲ್ ತನ್ನ ಗೆಳತಿ 'ಸ್ಮೃತಿ ಮಂಧಾನ'ಗಾಗಿ ಪ್ರೇಮಗೀತೆಯನ್ನು ಅರ್ಪಿಸಿದ್ದರು.
ಪಲಾಶ್ ಮತ್ತು ಸ್ಮೃತಿ ನಿಜವಾಗಿಯೂ ಪ್ರೀತಿಸುತ್ತಿದ್ದಾರೆ ಎಂಬುದಕ್ಕೆ ಇವು ಸಾಕ್ಷಿಗಳಾಗಿವೆ. ಸ್ಮೃತಿ ಮಂಧಾನಳ ಲಕ್ಷಾಂತರ ಅಭಿಮಾನಿಗಳು ಪಲಾಶ್ ಮುಚ್ಚಲ ಅವರೊಂದಿಗಿನ ಹೊಸ ಸಂಬಂಧದಿಂದ ನಿರಾಶೆಗೊಂಡಿದ್ದಾರೆ.
ಸ್ಮೃತಿ ಮಂಧಾನ ತಮ್ಮ ಅದ್ಭುತ ಕ್ರಿಕೆಟ್ ಕೌಶಲ್ಯ ಮತ್ತು ಮೈದಾನದ ಹೊರಗೆ ಸೊಬಗು ಮತ್ತು ನಗುಮುಖದ ಸುಂದರತೆಗೆ ಹೆಸರುವಾಸಿಯಾಗಿದ್ದಾರೆ. ಆರ್‌ಸಿಬಿ ತಂಡದ ಟ್ರೋಫಿ ಗೆಲುವು ಸ್ಮೃತಿ ಮಂಧಾನಳ ಜನಪ್ರಿಯತೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ.