For Quick Alerts
ALLOW NOTIFICATIONS  
For Daily Alerts
 

WPL 2024: ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಚರಿತ್ರೆ ಸೃಷ್ಟಿಸಿದ ಆರ್‌ಸಿಬಿಯ ಎಲ್ಲಿಸ್ ಪೆರ್ರಿ

ಮಂಗಳವಾರ, ಮಾರ್ಚ್ 12ರಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ 2024ರ ಮಹಿಳಾ ಪ್ರೀಮಿಯರ್ ಲೀಗ್‌ನ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಆಲ್‌ರೌಂಡರ್ ಎಲ್ಲಿಸ್ ಪೆರ್ರಿ ಇತಿಹಾಸವನ್ನು ಬರೆದಿದ್ದಾರೆ.

ಆರ್‌ಸಿಬಿ ತಂಡದ ಸ್ಟಾರ್ ಆಲ್‌ರೌಂಡರ್ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಕ್ರಮಾಂಕವನ್ನು ನಾಶಪಡಿಸಿದ ಕಾರಣ, ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳನ್ನು ದಾಖಲಿಸಿದರು. ಎಲ್ಲಿಸ್ ಪೆರ್ರಿ ದಾಖಲೆಯ ಆರು ವಿಕೆಟ್‌ಗಳನ್ನು ಕಬಳಿಸಿದರು.

ಮಹಿಳಾ ಪ್ರೀಮಿಯರ್ ಲೀಗ್‌ನ ಇತಿಹಾಸದಲ್ಲಿ ಅರ್ಧ ಡಜನ್ ವಿಕೆಟ್‌ಗಳನ್ನು ಉರುಳಿಸಿದ ಮೊದಲ ಬೌಲರ್‌ ಎನಿಸಿಕೊಂಡರು. ಎಲ್ಲಿಸ್ ಪೆರ್ರಿ ತನ್ನ ಅಸಾಧಾರಣ ದಿನದಂದು 15 ರನ್‌ಗಳಿಗೆ 6 ವಿಕೆಟ್‌ಗಳ ಅಂಕಿಅಂಶಗಳೊಂದಿಗೆ ಅದ್ಭುತವಾಗಿ ಮುಗಿಸಿದಳು.

WPL 2024 RCB s Ellyse Perry Makes History By Taken 6 Wickets in Women s Premier League

ಎಲ್ಲಿಸ್ ಪೆರ್ರಿ ಬೌಲಿಂಗ್ ಕಣ್ಣಿಗೆ ಹಬ್ಬದಂತಿತ್ತು. ಎದುರಾಳಿ ಬ್ಯಾಟರ್‌ಗಳನ್ನು ತಪ್ಪಿಸಿ ಸ್ಟಂಪ್‌ಗಳನ್ನು ಗುರಿಯಾಗಿಸಿಕೊಂಡು ಬೌಲಿಂಗ್ ಮಾಡಿದಳು ಮತ್ತು ಅದರಲ್ಲಿ ಯಶಸ್ವಿಯಾದಳು.

ಸೊಗಸಾದ ಲೈನ್ ಮತ್ತು ಲೆಂಗ್ತ್ ಕಾರಣದಿಂದಾಗಿ, ಎಲ್ಲಿಸ್ ಪೆರ್ರಿ ನಾಲ್ಕು ಬೌಲ್ಡ್ ಮತ್ತು ಎರಡು ಎಲ್‌ಬಿಡಬ್ಲ್ಯು ವಿಕೆಟ್‌ಗಳನ್ನು ಪಡೆದರು. ಹೀಗಾಗಿ ಮುಂಬೈ ಇಂಡಿಯನ್ಸ್ 19 ಓವರ್‌ಗಳಲ್ಲಿ ಕೇವಲ 113 ರನ್‌ಗಳಿಗೆ ಆಲೌಟ್ ಆಯಿತು.

9ನೇ ಓವರ್‌ನಲ್ಲಿ ಹೊಸ ಆರಂಭಿಕ ಬ್ಯಾಟರ್ ಸಜನಾ ಸಜೀವನ್ ಅವರನ್ನು ಔಟ್ ಮಾಡುವ ಮೂಲಕ ಎಲ್ಲಿಸ್ ಪೆರ್ರಿ ತನ್ನ ವಿಕೆಟ್ ಬೇಟೆ ಆರಂಭಿಸಿದಳು.

ಮುಂಬೈ ಇಂಡಿಯನ್ಸ್ ಬ್ಯಾಟ್‌ನೊಂದಿಗೆ ಉತ್ತಮ ಆರಂಭವನ್ನು ಪಡೆದ ನಂತರ, ಎಲ್ಲಿಸ್ ಪೆರ್ರಿ ಹಾಲಿ ಚಾಂಪಿಯನ್ ತಂಡದ ಸ್ಟಾರ್ ಆಟಗಾರ್ತಿಯರ ಬ್ಯಾಟಿಂಗ್ ಲೈನ್‌ಅಪ್ ಅನ್ನು ಮುರಿದಳು.

WPL 2024 RCB s Ellyse Perry Makes History By Taken 6 Wickets in Women s Premier League

ಸಜೀವನ್ ಸಜನಾ, ಹರ್ಮನ್‌ಪ್ರೀತ್ ಕೌರ್, ಅಮೆಲಿಯಾ ಕೆರ್, ಅಮನ್‌ಜೋತ್ ಕೌರ್, ಪೂಜಾ ವಸ್ತ್ರಕರ್ ಮತ್ತು ನ್ಯಾಟ್ ಸಿವರ್-ಬ್ರಂಟ್ ಅವರ ವಿಕೆಟ್ ಪಡೆದರು.

ಎಲ್ಲಿಸ್ ಪೆರ್ರಿ ಅದ್ಭುತ ಸ್ಪೆಲ್ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ವಿಭಾಗವನ್ನು ಅಪಾಯಕ್ಕೆ ಸಿಲುಕಿಸಿತು. ಏಕೆಂದರೆ ತಂಡವು 100 ರನ್ ಗಳಿಸುವ ಮುನ್ನ 7 ವಿಕೆಟ್‌ಗಳನ್ನು ಕಳೆದುಕೊಂಡಿತು. ದಿನದ ಆಟದ ಆರಂಭದಲ್ಲಿ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿದರು ಮತ್ತು ಎಲ್ಲಿಸ್ ಪೆರ್ರಿ ಬೌಲಿಂಗ್ ಪ್ರದರ್ಶನವು ನಾಯಕಿಯ ನಿರ್ಧಾರವನ್ನು ಸಮರ್ಥಿಸಿಕೊಂಡಿತು.

ಆಸ್ಟ್ರೇಲಿಯಾದ ಸೂಪರ್‌ಸ್ಟಾರ್ ಎಲ್ಲಿಸ್ ಪೆರ್ರಿ ಗಮನಾರ್ಹವಾದ ಅಂಕಿಅಂಶದೊಂದಿಗೆ ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸವನ್ನು ನಿರ್ಮಿಸಿದರು. ಶ್ರೀಮಂತ ಕ್ರಿಕೆಟ್‌ ಲೀಗ್‌ನ ಒಂದೇ ಪಂದ್ಯದಲ್ಲಿ ಅತಿ ಹೆಚ್ಚು (6) ವಿಕೆಟ್ ಕಬಳಿಸಿದ ಮೊದಲ ಬೌಲರ್ ಎನಿಸಿದಳು.

ಪೆರ್ರಿ ತನ್ನ ನಾಲ್ಕು-ಓವರ್‌ಗಳ ಕೋಟಾದಲ್ಲಿ 6-15 ಅಂಕಿಗಳೊಂದಿಗೆ ಮುಕ್ತಾಯಗೊಳಿಸಿದರು. ಇತಿಹಾಸದಲ್ಲಿ ಮೊದಲ ಬಾರಿಗೆ ಪ್ಲೇಆಫ್ಸ್ ಪ್ರವೇಶಿಸಲು ಆರ್‌ಸಿಬಿ ತಂಡವನ್ನು ಪ್ರಧಾನ ಸ್ಥಾನದಲ್ಲಿ ಇರಿಸಿದರು. 33 ವರ್ಷದ ಎಲ್ಲಿಸ್ ಪೆರ್ರಿ ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಐದು ವಿಕೆಟ್ ಗೊಂಚಲು ಪಡೆದ ಐದನೇ ಬೌಲರ್ ಆಗಿದ್ದಾರೆ.

Story first published: Tuesday, March 12, 2024, 22:28 [IST]
Other articles published on Mar 12, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+