Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2024: ರಿಚಾ ಘೋಷ್, ಶೋಭನಾ ಆಶಾ ಮಿಂಚಿಂಗ್; ಯುಪಿ ವಾರಿಯರ್ಜ್ ವಿರುದ್ಧ ಆರ್‌ಸಿಬಿ ಶೈನಿಂಗ್!

ಶನಿವಾರ, ಫೆಬ್ರವರಿ 24ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2024ರ ಮಹಿಳಾ ಪ್ರೀಮಿಯರ್ ಲೀಗ್ (WPL) 2ನೇ ಆವೃತ್ತಿಯ 2ನೇ ಪಂದ್ಯದಲ್ಲಿ ಯುಪಿ ವಾರಿಯರ್ಜ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೋಚಕ 2 ರನ್‌ಗಳ ಗೆಲುವು ಸಾಧಿಸಿತು.

ಉದ್ಘಾಟನಾ ಪಂದ್ಯದಂತೆಯೇ ರೋಚಕ ಘಟ್ಟ ತಲುಪಿದ್ದ ಈ ಪಂದ್ಯದಲ್ಲಿ ಆರ್‌ಸಿಬಿ ತಂಡ ತವರಿನ ಅಭಿಮಾನಿಗಳ ಎದುರು ಗೆಲುವಿನ ಖಾತೆ ತೆರೆಯುವ ಮೂಲಕ 2024ರ ಆವೃತ್ತಿಯನ್ನು ಅದ್ಭುತವಾಗಿ ಆರಂಭಿಸಿತು.

WPL 2024: Royal Challengers Bangalore Beat UP Warriorz by 2 Runs in The 2nd Match

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡ ಸಬ್ಬಿನೇನಿ ಮೇಘನಾ ಮತ್ತು ರಿಚಾ ಘೋಷ್ ಅವರ ಅಮೋಘ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 157 ರನ್‌ಗಳನ್ನು ಕಲೆಹಾಕಿತು.

158 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಜ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 155 ರನ್ ಗಳಿಸಿ ಕೇವಲ 2 ರನ್‌ಗಳಿಂದ ಸೋಲು ಅನುಭವಿಸಿತು. ಶೋಭನಾ ಆಶಾ 5 ವಿಕೆಟ್ ಪಡೆಯುವ ಮೂಲಕ ಆರ್‌ಸಿಬಿ ತಂಡದ ಗೆಲುವಿಗೆ ಪ್ರಮುಖ ಕಾರಣವಾದರು.

ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಆರಂಭಿಕರಾದ ಸ್ಮೃತಿ ಮಂಧಾನ ಮತ್ತು ಸೋಫಿ ಡಿವೈನ್ ಉತ್ತಮ ಆರಂಭ ನೀಡಲಿಲ್ಲ. ಏಕೆಂದರೆ ತಂಡದ ಮೊತ್ತ 13 ರನ್‌ಗಳಾಗುವಷ್ಟರಲ್ಲಿ 1 ರನ್ ಗಳಿಸಿದ್ದ ಸೋಫಿ ಡಿವೈನ್ ಎಲ್‌ಬಿಡಬ್ಲ್ಯು ಆಗಿ ಔಟಾದರು.

WPL 2024: Royal Challengers Bangalore Beat UP Warriorz by 2 Runs in The 2nd Match

ಇನ್ನು ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಅಬ್ಬರದ ಬ್ಯಾಟಿಂಗ್ ಲಕ್ಷಣ ತೋರಿಸಿದರೂ 13 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅನುಭವಿ ಆಟಗಾರ್ತಿ ಎಲ್ಲಿಸ್ ಪೆರ್ರಿ ಕೇವಲ 8 ರನ್ ಗಳಿಸಿ ಔಟಾದರು. ಈ ವೇಳೆ ಆರ್‌ಸಿಬಿ ತಂಡ 7.5 ಓವರ್‌ಗಳಲ್ಲಿ 54 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು.

ಈ ವೇಳೆ ಜೊತೆಯಾದ ಸಬ್ಬಿನೇನಿ ಮೇಘನಾ ಮತ್ತು ರಿಚಾ ಘೋಷನ್ ನಾಲ್ಕನೇ ವಿಕೆಟ್‌ಗೆ 50 ಎಸೆತಗಳಲ್ಲಿ 71 ರನ್‌ಗಳ ಜೊತೆಯಾಟ ನಿರ್ಮಿಸಿದರು. ಸಬ್ಬಿನೇನಿ ಮೇಘನಾ 44 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 53 ರನ್ ಗಳಿಸಿದರೆ, ರಿಚಾ ಘೋಷನ್ 37 ಎಸೆತಗಳಲ್ಲಿ 12 ಬೌಂಡರಿ ಮೂಲಕ 62 ರನ್ ಬಾರಿಸಿದರು.

ಇನ್ನು ಯುಪಿ ವಾರಿಯರ್ಜ್ ತಂಡದ ಪರ ನಾಯಕಿ ಅಲಿಸ್ಸಾ ಈಲಿ 5 ರನ್, ವೃಂದಾ ದಿನೇಶ್ 18 ರನ್, ತಹ್ಲಿಯಾ ಮೆಕ್‌ಗ್ರಾತ್ 22 ರನ್, ಗ್ರೇಸ್ ಹ್ಯಾರಿಸ್ 38 ರನ್, ಶ್ವೇತಾ ಸೆಹ್ರಾವತ್ 31 ರನ್, ಪೂನಮ್ ಕೆಮ್ಮರ್ 14 ರನ್, ದೀಪ್ತಿ ಶರ್ಮಾ 13 ರನ್ ಗಳಿಸಿದರು. ಆದರೆ, ತಂಡವನ್ನು ಗೆಲುವಿನ ಗಡಿ ತಲುಪಿಸಲು ಸಾಧ್ಯವಾಗಲಿಲ್ಲ.

ಆರ್‌ಸಿಬಿ ತಂಡದ ಪರ ಶೋಭನಾ ಆಶಾ 4 ಓವರ್‌ಗಳಲ್ಲಿ 22 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದರೆ, ಸೋಫಿ ಮೊಲಿನೆಕ್ಸ್ ಮತ್ತು ಜಾರ್ಜಿಯಾ ವೆರೆಹ್ಯಾಮ್ ತಲಾ ಒಂದೊಂದು ವಿಕೆಟ್ ಪಡೆದರು. ಶೋಭನಾ ಆಶಾ ಪಂದ್ಯಶ್ರೇಷ್ಠ ಆಟಗಾರ್ತಿಯಾಗಿ ಹೊರಹೊಮ್ಮಿದರು.

Story first published: Saturday, February 24, 2024, 23:26 [IST]
Other articles published on Feb 24, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+