WPL 2024: ಸ್ಮೃತಿ, ಎಲ್ಲಿಸ್ ಅಮೋಘ ಆಟ: ಆರ್‌ಸಿಬಿಗೆ 23 ರನ್ ಜಯ
ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಹಾಗೂ ಎಲ್ಲಿಸ್ ಪೆರ್ರಿ ಅವರ ಭರ್ಜರಿ ಅರ್ಧಶತಕದ ನೆರವಿನಿಂದ ಆರ್‌ಸಿಬಿ ಮಹಿಳಾ ತಂಡ WPL 2024ರ ಟೂರ್ನಿಯಲ್ಲಿ ಮೂರನೇ ಗೆಲುವು ದಾಖಲಿಸಿದೆ.
ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 198 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಯುಪಿ ವಾರಿಯರ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 175 ರನ್ ಕಲೆ ಹಾಕಿ ಸೋಲು ಕಂಡಿತು.

ಆರ್‌ಸಿಬಿ ಮಹಿಳಾ ತಂಡ ಆಡಿದ ಐದು ಪಂದ್ಯಗಳಲ್ಲಿ ಮೂರು ಜಯ, ಎರಡು ಸೋಲು ಕಂಡಿದ್ದು ಆರು ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ಮಹಿಳಾ ತಂಡ ಭರ್ಜರಿ ಆರಂಭವನ್ನು ಪಡೆಯಿತು. ನಾಯಕಿ ಸ್ಮೃತಿ ಹಾಗೂ ಸಬ್ಬಿನೇನಿ ಮೇಘನಾ ಜೋಡಿ 5.3 ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 51 ರನ್‌ಗಳ ಜೊತೆಯಾಟವನ್ನು ನೀಡಿದರು. ಸಬ್ಬಿನೇನಿ ಮೇಘನಾ 21 ಎಸೆತಗಳಲ್ಲಿ 28 ರನ್ ಸಿಡಿಸಿ ತಂಡಕ್ಕೆ ಆಧಾರವಾದರು.
ಎರಡನೇ ವಿಕೆಟ್‌ಗೆ ಭರ್ಜರಿ ಜೊತೆಯಾಟ
ಸ್ಮೃತಿ ಹಾಗೂ ಎಲ್ಲಿಸ್ ಪೆರ್ರಿ ಜೋಡಿ ಸೊಗಸಾದ ಜೊತೆಯಾಟವನ್ನು ಆಡಿದರು. ಈ ಜೋಡಿ ಸುಮಾರು 10 ಓವರ್‌ಗಳ ಕಾಲ ವಿಕೆಟ್ ಬೀಳದಂತೆ ನೋಡಿಕಂಡರು. ಈ ಜೋಡಿ 64 ಎಸೆತಗಳಲ್ಲಿ 95 ರನ್ ಜೊತೆಯಾಟವನ್ನು ನೀಡಿದರು. ಸ್ಮೃತಿ 50 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ ಸಹಾಯದಿಂದ 80 ರನ್ ಬಾರಿಸಿ ಔಟ್ ಆದರು. ಎಲ್ಲಿಸಾ 37 ಎಸೆತಗಳಲ್ಲಿ 58 ರನ್ ಬಾರಿಸಿದರು.

ವಿಕೆಟ್ ಕೀಪರ್ ರೀಚಾ ಘೋಷ್ 10 ಎಸೆತಗಳಲ್ಲಿ 21 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ನೀಡಿದ 198 ರನ್‌ಗಳಿಗೆ ಉತ್ತರವಾಗಿ ಬ್ಯಾಟಿಂಗ್‌ಗೆ ಬಂದ ಯುಪಿ ವಾರಿಯರ್ಸ್ ಉತ್ತಮ ಆರಂಭವನ್ನು ಹೊಂದಿತ್ತು. ಯುಪಿ ವಾರಿಯರ್ಸ್ ಆರಂಭಿಕರಾದ ಅಲಿಸ್ಸಾ ಹೀಲಿ ಮತ್ತು ಕಿರಣ್ ನವಗಿರೆ ಮೊದಲ ವಿಕೆಟ್‌ಗೆ 4.1 ಓವರ್‌ಗಳಲ್ಲಿ 47 ರನ್ ಸೇರಿಸಿದರು. ಕಿರಣ್ ನವಗಿರೆ 11 ಎಸೆತಗಳಲ್ಲಿ 18 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ಇದಾದ ಬಳಿಕ ಚಾಮರಿ ಅಟಪಟ್ಟು ಬೇಗನೇ ಔಟಾದರು. ನಂತರ ಗ್ರೇಸ್ ಹ್ಯಾರಿಸ್ ಮತ್ತು ಶ್ವೇತಾ ಸೆಹ್ರಾವತ್ ಕೂಡ ರನ್ ಕಲೆ ಹಾಕಲು ಸಾಧ್ಯವಾಗಲಿಲ್ಲ. ಆದರೆ, ಯುಪಿ ವಾರಿಯರ್ಸ್ ತಂಡದ ನಾಯಕಿ ಅಲಿಸ್ಸಾ ಹೀಲಿ ಅವರು ಗಟ್ಟಿಯಾಗಿ ನಿಂತರು. ಆದರೆ ಉಳಿದ ಬ್ಯಾಟ್ಸ್‌ಮನ್‌ಗಳಿಗೆ ಬೆಂಬಲ ಸಿಗಲಿಲ್ಲ.
ಅಲಿಸ್ಸಾ ಹೀಲಿ 38 ಎಸೆತಗಳಲ್ಲಿ 55 ರನ್ ಕೊಡುಗೆ ನೀಡಿದರು. ದೀಪ್ತಿ ಶರ್ಮಾ ಮತ್ತು ಪೂನಂ ಖೇಮ್ನಾರ್ ಕೊನೆಯ ಓವರ್‌ಗಳಲ್ಲಿ ಕೆಲವು ರನ್ ಗಳಿಸಿದರು. ಆದರೆ ಅದು ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಕಾಗಲಿಲ್ಲ.
ದೀಪ್ತಿ ಶರ್ಮಾ 22 ಎಸೆತಗಳಲ್ಲಿ 33 ರನ್ ಗಳಿಸಿದರು. ಪೂನಂ ಖೇಮ್ನಾರ್ 24 ಎಸೆತಗಳಲ್ಲಿ 31 ರನ್ ಗಳಿಸಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಸೋಫಿಯಾ ಡಿವೈನ್ ಹೊರತುಪಡಿಸಿ, ಜಾರ್ಜಿಯಾ ವೇರ್‌ಹ್ಯಾಮ್, ಆಶಾ ಶೋಭನಾ ಮತ್ತು ಸೋಫಿ ಮೊಲಿನೆಕ್ಸ್ ತಲಾ ಎರಡು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications