Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2024: 'ಈ ಸಲ ಕಪ್‌ ನಮ್ದೇ' ಅಲ್ಲಲ್ಲ, 'ಈ ಸಲ ಕಪ್‌ ನಮ್ದು' ಎಂದ ಸ್ಮೃತಿ ಮಂಧಾನ

ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಆರ್‌ಸಿಬಿ ತಂಡ ಕಪ್‌ಗೆ ಮುತ್ತಿಟಿದೆ. ಅಲ್ಲದೆ ಅಭಿಮಾನಿಗಳಿಗೆ ಫೈನಲ್‌ ಪಂದ್ಯದಲ್ಲಿ ಹಬ್ಬದೂಟವನ್ನು ಹಾಕಿದೆ. ಈ ಕಪ್‌ ಹಿಡಿಯುವ ಮುನ್ನ ಸ್ಮೃತಿ ಮಂಧನಾ ಅಭಿಮಾನಿಗಳ ಮನದ ಮಾತನ್ನು ಹೇಳಿದರು.

ಬಹುಶಃ ಈ ಸಂಭ್ರಮಾಚರಣೆ ಮಾಡಲು ನಿಜಕ್ಕೂ ಸಮಯ ಬೇಕು. ನಾನು ಈ ಜೋಶ್‌ನಿಂದ ಹೊರ ಬರಲು ತುಂಬ ಕಷ್ಟ. ನಾನು ಈ ತಂಡವನ್ನು ಮುನ್ನಡೆಸಿದ್ದು ನನಗೆ ಖುಷಿ ಇದೆ. ನಾವು ಈ ಟೂರ್ನಿಯಲ್ಲಿ ಏರಿಳತವನ್ನು ನೋಡಿದ್ದೇವೆ. ತವರಿನ ಅಂಗಳದಲ್ಲಿ ನಮ್ಮ ತಂಡ ಉತ್ತಮವಾಗಿ ಆಡಿತು ಎಂದು ತಿಳಿಸಿದರು.

WPL 2024 Smriti Mandhana says ee sala cup namde not ee sala cup namddu

ದೆಹಲಿಯ ಅಂಗಳದಲ್ಲಿ ಎರಡು ವೀರೋಚಿತ ಸೋಲುಗಳನ್ನು ಕಂಡಿದ್ದೆವು. ಈ ಸೋಲು ನಮ್ಮ ಮೇಲೆ ಯಾವುದೇ ವ್ಯತ್ಯಾಸ ಮಾಡಲಿಲ್ಲ. ಆಟಗಾರ್ತಿಯಾಗಿ ನಾಯಕಿಯಾಗಿ ಈ ತಂಡದಿಂದ ಸಿಕ್ಕಾಪಟ್ಟಿ ಕಲಿತಿದ್ದೇನೆ. ಆರ್‌ಸಿಬಿ ಟೀಮ್ ಮ್ಯಾನೇಜ್ಮೆಂಟ್‌ ನನ್ನ ಮೇಲೆ ಭರವಸೆ ಇಟ್ಟಿದ್ದಕ್ಕೆ ಧನ್ಯವಾದಗಳನ್ನು ಸ್ಮೃತಿ ಮಂದಾನ ತಿಳಿಸಿದರು.

ಬಳಿಕ ಅಭಿಮಾನಿಗಳು ಪದೆ ಪದೇ ಹೇಳುವ 'ಈ ಸಲ ಕಪ್‌ ನಮ್ದೇ' ಎಂದು ಹೇಳುತ್ತಿತ್ತು. ಇದನ್ನೇ ಪ್ರೆಸೆಂಟೆಷನ್‌ ಸೆರಮನಿಯಲ್ಲಿ ಸ್ಮೃತಿ ಮಂಧಾನ ಹೇಳಿದರು. ಅಲ್ಲದೆ 'ಈ ಸಲ ಕಪ್‌ ನಮ್ದು' ಎಂದ ಸ್ಮೃತಿ ಮಂಧಾನ ಹೇಳಿದ್ದಾರೆ.

ಟ್ರೋಫಿ ಗೆದ್ದಿರುವುದು ನಿಜಕ್ಕೂ ಸಮಾಧಾನ ತಂದಿದೆ. ಈ ಟ್ರೋಫಿ ಗೆಲ್ಲಲು ಸಂಘಟಿತ ಆಟ ಎದ್ದು ಕಾಣುತ್ತಿತ್ತು. ಫ್ರಾಂಚೈಸಿಯಾಗಿ ಆರ್‌ಸಿಬಿ ಗೆಲ್ಲುವುದು ನಿಜಕ್ಕೂ ವಿಶೇಷ. ಈ ಗೆಲುವು ಖಂಡಿತವಾಗಿಯೂ ಅಗ್ರ ಐದು ಪಂದ್ಯಗಳಲ್ಲಿ ನಿಲ್ಲುತ್ತದೆ. ವಿಶ್ವಕಪ್ (ಗೆಲುವು) ಅದರಲ್ಲಿ ಅಗ್ರಸ್ಥಾನದಲ್ಲಿದೆ. RCB ಅಭಿಮಾನಿಗಳಿಗೆ, ಅತ್ಯಂತ ನಿಷ್ಠಾವಂತ ಅಭಿಮಾನಿಗಳಿಗೆ ಧನ್ಯವಾದಗಳು. ಅವರ ಬೆಂಬಲವಿಲ್ಲದೆ ಏನೂ ಸಾಧ್ಯವಾಗುತ್ತಿರಲಿಲ್ಲ. ಈ ಸಲ ಕಪ್ ನಮ್ದೇ ಅಲ್ಲ ಈ ಸಲ ಕಪ್ ನಮ್ದು ಅಂತ ಹೇಳ್ಬೇಕು ಎಂದು ಹೇಳಿದರು.

Story first published: Sunday, March 17, 2024, 23:53 [IST]
Other articles published on Mar 17, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+