WPL 2024: WPL ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಬೌಲರ್ ಶೋಭನಾ ಆಶಾ
ಶನಿವಾರ, ಫೆಬ್ರವರಿ 24ರಂದು ಕಿಕ್ಕಿರಿದು ತುಂಬಿದ್ದ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2024ರ ಮಹಿಳಾ ಪ್ರೀಮಿಯರ್ ಲೀಗ್ (WPL) 2ನೇ ಆವೃತ್ತಿಯ 2ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡವು ಯುಪಿ ವಾರಿಯರ್ಜ್ ಮಹಿಳಾ ತಂಡದ ವಿರುದ್ಧ ರೋಚಕ 2 ರನ್‌ಗಳ ಗೆಲುವು ಸಾಧಿಸಿತು.
ರಿಚಾ ಘೋಷ್ 37 ಎಸೆತಗಳಲ್ಲಿ 12 ಬೌಂಡರಿ ಸಮೇತ 62 ರನ್ ಮತ್ತು ಸಬ್ಬಿನೇನಿ ಮೇಘನಾ 44 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 53 ರನ್ ಬಾರಿಸಿ ತವರಿನ ಪ್ರೇಕ್ಷಕರನ್ನು ರಂಜಿಸಿದರು.
ನಂತರ ಬೌಲಿಂಗ್‌ನಲ್ಲಿ ಶೋಭನಾ ಆಶಾ 4 ಓವರ್‌ಗಳ ಮಾಂತ್ರಿಕ ಸ್ಪೆಲ್‌ನಲ್ಲಿ 22 ರನ್ ನೀಡಿ 5 ವಿಕೆಟ್ ಪಡೆಯುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವನಿತೆಯರು 2024ರ ಮಹಿಳಾ ಪ್ರೀಮಿಯರ್ ಲೀಗ್ ಅಭಿಯಾನವನ್ನು ಗೆಲುವಿನೊಂದಿಗೆ ಆರಂಭಿಸಲು ನೆರವಾದರು.

ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಇತಿಹಾಸದಲ್ಲಿ ಐದು ವಿಕೆಟ್ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿಯ ಎನಿಸಿದ ನಂತರ, ಶೋಭನಾ ಆಶಾ ಜಾಯ್ ಅವರು ತಮ್ಮ ಕಣ್ಣೀರನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡ ಸಬ್ಬಿನೇನಿ ಮೇಘನಾ ಮತ್ತು ರಿಚಾ ಘೋಷ್ ಅವರ ಭರ್ಜರಿ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 157 ರನ್ ಗಳಿಸಿತು.
158 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಜ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 155 ರನ್ ಗಳಿಸಿ ಕೇವಲ 2 ರನ್‌ಗಳಿಂದ ಸೋಲು ಕಂಡಿತು.

158 ರನ್‌ಗಳ ರಕ್ಷಣೆಯ ಹಾದಿಯಲ್ಲಿ ಶೋಭನಾ ಆಶಾ ಯುಪಿ ವಾರಿಯರ್ಜ್ ತಂಡದ ಚೇಸ್ ಅನ್ನು ಹಳಿತಪ್ಪಿಸಿದರು. ತಮ್ಮ ಮೊದಲ ಓವರ್‌ನ ಮೊದಲು ಮೂರು ಎಸೆತಗಳ ಅವಧಿಯಲ್ಲಿ ವೃಂದಾ ದಿನೇಶ್ ಮತ್ತು ತಹ್ಲಿಯಾ ಮೆಕ್‌ಗ್ರಾತ್ ಅವರನ್ನು ಔಟ್ ಮಾಡಿದರು.
ನಂತರ 17ನೇ ಓವರ್‌ನಲ್ಲಿ ಶ್ವೇತಾ ಸೆಹ್ರಾವತ್, ಗ್ರೇಸ್ ಹ್ಯಾರಿಸ್ ಮತ್ತು ಕಿರಣ್ ನವಗಿರೆ ಅವರನ್ನು ಔಟ್ ಮಾಡುವ ಮೂಲಕ ಆರ್‌ಸಿಬಿ ತಂಡದ ಪರವಾಗಿ ಆವೇಗವನ್ನು ಹೆಚ್ಚಿಸಿದರು.
ಇನ್ನು ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಇತಿಹಾಸದಲ್ಲಿ ಮೊದಲ ಐದು ವಿಕೆಟ್ ಗಳಿಕೆಯನ್ನು ಯುಎಸ್ಎ ವೇಗಿ ತಾರಾ ನಾರ್ರಿಸ್ ಅವರು ಪ್ರಾಸಂಗಿಕವಾಗಿ ಉದ್ಘಾಟನಾ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧವೇ ಮಾಡಿದ್ದರು.
ದೇಶೀಯ ಸರ್ಕ್ಯೂಟ್‌ನಲ್ಲಿ ಅನುಭವಿ ಲೆಗ್ ಸ್ಪಿನ್ನರ್ ಆಗಿರುವ ಶೋಭನಾ ಆಶಾ, ಆರ್‌ಸಿಬಿ ತಂಡದೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೊದಲು ಕೇರಳ, ರೈಲ್ವೇಸ್ ಮತ್ತು ಪುದುಚೇರಿ ತಂಡಗಳನ್ನು ಪ್ರತಿನಿಧಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications