WPL 2024: ಫೈನಲ್‌ಗಾಗಿ ಟೀಮ್ ಇಂಡಿಯಾ ನಾಯಕಿ ಹಾಗೂ ಉಪನಾಯಕಿ ನಡುವೆ ಕಾದಟ
ಶುಕ್ರವಾರ ಮಹಿಳೆಯರ ಪ್ರೀಮಿಯರ್ ಲೀಗ್‌ನ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸವಾಲನ್ನು ಎದುರಿಸಲಿದೆ. ಎರಡೂ ತಂಡಗಳು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.
ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿಯೇ ಉಳಿದಿದೆ. ಹೀಗಾಗಿ ಮೆಗ್ ಲ್ಯಾನಿಂಗ್ ತಂಡವು ಫೈನಲ್‌ಗೆ ಅರ್ಹತೆ ಗಳಿಸಿತು. ಅದೇ ಸಮಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ವಿಜೇತ ತಂಡವು ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಎದುರಿಸಲಿದೆ. ಈ ಟೂರ್ನಿಯ ಫೈನಲ್ ಮಾರ್ಚ್ 17 ರಂದು ನಡೆಯಲಿದೆ.

ಹೇಗಿದೆ ಆರ್‌ಸಿಬಿ ತಂಡ?
ಆರ್‌ಸಿಬಿ ತಂಡ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನವನ್ನು ನೀಡಿದೆ. ಆದರೆ ಮಹತ್ವದ ಪಂದ್ಯದಲ್ಲಿ ಸ್ಟಾರ್ ಆಟಗಾರ್ತಿಯರು ಅಬ್ಬರದ ಪ್ರದರ್ಶನ ನೀಡಿದರೆ ಮಾತ್ರ ಗೆಲುವಿನ ಕನಸು ನನಸಾಗುತ್ತದೆ. ಆರ್‌ಸಿಬಿ ತಂಡದ ಪರ ನಾಯಕಿ ಸ್ಮೃತಿ ಮಂಧನಾ ಟೂರ್ನಿಯಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿದ್ದಾರೆ. ಇವರು ಆಡಿರುವ ಪಂದ್ಯಗಳಲ್ಲಿ 259 ರನ್ ಕಲೆ ಹಾಕಿದ್ದಾರೆ. ಉಳಿದಂತೆ ರಿಚಾ ಘೋಷ್ (226 ರನ್), ಎಲ್ಲಿಸಾ ಪೆರ್ರಿ (246 ರನ್), ಸಬ್ಬಿನೇನಿ ಮೇಘನಾ (168 ರನ್) ರನ್ ಕಲೆ ಹಾಕುವ ಸಾಮರ್ಥ್ಯವನ್ನು ಹೊಂದಿದ್ದಾರೆ.
ಆರ್‌ಸಿಬಿ ತಂಡದ ಬ್ಯಾಟಿಂಗ್‌ನಷ್ಟೆ ಬೌಲಿಂಗ್ ಸಹ ಉತ್ತಮವಾಗಿದೆ ಸ್ಟಾರ್ ಆಟಗಾರ್ತಿಯರು ಬಿಗುವಿನದಾಳಿ ನಡೆಸುತ್ತಿದ್ದಾರೆ. ಸೋಫಿ ಮೊಲಿನೆಕ್ಸ್, ಆಶಾ ಶೋಭನಾ, ಶ್ರೇಯಾಂಕಾ ಪಾಟೀಲ್ ವಿಕೆಟ್ ಕಬಳಿಸುವಲ್ಲಿ ಮುಂಚೂಣಿಯಲ್ಲಿ ನಿಂತಿದ್ದಾರೆ. ಈ ಎಲ್ಲ ಆಟಗಾರರು ಸ್ಥಿರ ಪ್ರದರ್ಶನ ನೀಡಿದಲ್ಲಿ ಫೈನಲ್ ಅರ್ಹತೆ ಸಿಗುತ್ತದೆ.

ಮುಂಬೈ ಬಲ ಏನು?
ಮುಂಬೈ ತಂಡದ ಬ್ಯಾಟಿಂಗ್ ಸೊಗಸಾಗಿದೆ. ನಾಯಕಿ ಹರ್ಮನ್ ಪ್ರೀತ್ ಕೌರ್ ಬ್ಯಾಟಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಉಳಿದಂತೆ ಹೇಲಿ ಮ್ಯಾಥ್ಯೂಸ್, ಅಮೆಲಿಯಾ ಕೆರ್, ಯಾಸ್ತಿಕಾ ಭಾಟಿಯಾ ಆಟಗಾರರು ರನ್ ಕಲೆ ಹಾಕಿ ತಂಡಕ್ಕೆ ನೆರವಾಗಬಲ್ಲರು. ಅಂತಾರಾಷ್ಟ್ರೀಯ ಅನುಭವ ಹೊಂದಿರುವ ಆಟಗಾರರಾದ ಶಬ್ನಿಮ್ ಇಸ್ಮಾಯಿಲ್, ನ್ಯಾಟ್ ಸ್ಕಿವರ್-ಬ್ರಂಟ್ ತಂಡದಲ್ಲಿದ್ದು, ಬೌಲಿಂಗ್ ನೊಗವನ್ನು ಹೊರಲಿದ್ದಾರೆ.
ಎಲ್ಲಿ ವೀಕ್ಷಿಸಬಹುದು?
ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಎಲಿಮಿನೇಟರ್ ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ. ಜಿಯೋ ಸಿನಿಮಾದಲ್ಲಿ ಲೈವ್ ಸ್ಟ್ರೀಮಿಂಗ್ ವೀಕ್ಷಿಸಲು ಸಾಧ್ಯವಾಗುತ್ತದೆ. ಇದಲ್ಲದೆ, ಸ್ಪೋರ್ಟ್ಸ್-18 ನಲ್ಲಿ ನೇರ ಪ್ರಸಾರವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications