WPL 2024: ಆರ್‌ಸಿಬಿ ಮಹಿಳಾ ತಂಡದಿಂದ ಪುರುಷರ ತಂಡ ಕಲಿಯಬೇಕಿದ್ದು ಏನು?
ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಈ ಟೂರ್ನಿಯುದ್ದಕ್ಕು ಆರ್‌ಸಿಬಿ ಸಂಘಟಿತ ಆಟದ ಪ್ರದರ್ಶನ ನೀಡಿದ ಸ್ಮೃತಿ ತಂಡ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವನಿಂದ ಫಾಫ್ ಡುಪ್ಲೇಸಿಸ್ ಪಡೆ ಕಲೆಯ ಬೇಕಿದ್ದು ಏನು ಎಂಬ ಪ್ರಶ್ನೆಗಳು ಆರಂಭವಾಗಿವೆ.
ಆರ್‌ಸಿಬಿ ಈ ಗೆಲುವಿನ ನಗು ಬೀರುವಲ್ಲಿ ಸಂಘಟಿತ ಆಟದ ನಗು ಎದ್ದು ಕಾಣುತ್ತದೆ. ಈ ಜಯದಿಂದ ಆರ್‌ಸಿಬಿ ಪುರುಷರ ತಂಡ ಕಲಿಯಬೇಕಾದದ್ದು ತುಂಬ ಇದೆ. ಅದ್ರಲ್ಲಿ ಒಂದು ಒಂದೇ ಆಟಗಾರನ ಮೇಲೆ ಒತ್ತಡವನ್ನು ಹೇರದೆ, ಸಂಘಟಿತ ಪ್ರಯತ್ನದ ಮೇಲೆ ಒತ್ತು ನೀಡಿದೆ. ಈ ಮಂತ್ರವನ್ನೇ ಆರ್‌ಸಿಬಿ ಮೈಗೂಡಿಸಿಕೊಳ್ಳಬೇಕಿದೆ.

ಆರ್‌ಸಿಬಿ ಚೊಚ್ಚಲ ಪ್ರಶಸ್ತಿ
ಬೆಂಗಳೂರು ಉತ್ತಮ ಆರಂಭ ಪಡೆದಿತ್ತು. ಈ ಲೋ ಸ್ಕೋರ್ ಪಂದ್ಯದಲ್ಲಿ, ಮೊದಲ ವಿಕೆಟ್‌ಗೆ ಸ್ಮೃತಿ ಮಂಧಾನ ಮತ್ತು ಸೋಫಿ ಡಿವೈನ್ ನಡುವೆ 49 ರನ್‌ಗಳ ಪ್ರಮುಖ ಜೊತೆಯಾಟವನ್ನು ನೀಡಿದರು. ಡೆವಿನ್ 27 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 32 ರನ್ ಗಳಿಸಿದರು.
ನಾಯಕ ಮಂಧಾನ 39 ಎಸೆತಗಳಲ್ಲಿ 31 ರನ್‌ಗಳ ನಿಧಾನವಾದರೂ ಪ್ರಮುಖ ಇನ್ನಿಂಗ್ಸ್ ಆಡಿದರು. ಎಲಿಸ್ ಪೆರ್ರಿ ಪಂದ್ಯಾವಳಿಯುದ್ದಕ್ಕೂ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು ಮತ್ತು ಫೈನಲ್‌ನಲ್ಲಿಯೂ ಅಬ್ಬರಿಸಿದರು. ಅವರು 37 ಎಸೆತಗಳಲ್ಲಿ 35 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ರಿಚಾ ಘೋಷ್ ವಿನ್ನಿಂಗ್ ಶಾಟ್ ಹೊಡೆಯುವ ಮೂಲಕ ಆರ್ಸಿಬಿಯನ್ನು ಮೊದಲ ಬಾರಿಗೆ ಚಾಂಪಿಯನ್ ಆಯಿತು.
ಸ್ಟಾರ್ ಮೇಲೆ ಒತ್ತಡ ಬೇಡ
ಆರ್‌ಸಿಬಿ ತಂಡದ ಸ್ಟಾರ್ ಆಟಗಾರರ ಮೇಲೆ ಒತ್ತಡವನ್ನು ಹೇರುವುದನ್ನು ಕಡಿಮೆ ಮಾಡಬೇಕಿದೆ. ಅಂದಹಾಗೆ ಆರ್‌ಸಿಬಿ ಟಾಪ್ ಆರ್ಡರ್ ತಂಡದ ಮೇಲೆ ಆರಂಭದಿಂದಲೂ ಒತ್ತಡ ಇದ್ದೇ ಇರುತ್ತದೆ. ಇದನ್ನು ಮೆಟ್ಟಿ ನಿಂತು ಆಡಬೇಕಿದೆ. ಅಂದಾಗ ಮಾತ್ರ ಗೆಲುವಿನ ನಗೆ ಬೀರುತ್ತದೆ. ಇಲ್ಲದೆ ಹೋದರೆ ಈ ಬಾರಿಯೂ ಕಪ್ ಮಿಸ್ ಆಗುವುದು ಗ್ಯಾರಂಟಿ.

ವಿದೇಶಿ ಮೋಹ ಬಿಡಬೇಕು
ಆರ್‌ಸಿಬಿ ತಂಡ ಆರಂಭದಿಂದಲೂ ವಿದೇಶಿ ಆಟಗಾರರ ಮೇಲೆ ಮೋಹ ಹೆಚ್ಚಿದೆ. ಅಷ್ಟಕ್ಕೂ 11 ಆಟಗಾರರ ತಂಡದಲ್ಲಿ ವಿದೇಶಿ ಆಟಗಾರರು ನಾಲ್ಕೇ ಜನರಿಗೆ ಆಡುವ ಅವಕಾಶ ನೀಡಲಾಗುತ್ತದೆ. ಟೀಮ್ ಮ್ಯಾನೇಜ್ಮೆಂಟ್ ಈ ಸ್ಥಾನವನ್ನು ತುಂಬಿಕೊಳ್ಳಲೇ ಹೆಚ್ಚು ಪ್ರಯತ್ನ ಪಡುತ್ತದೆ.
ಆದರೆ ವಿದೇಶಿ ಆಟಗಾರರ ಮೇಲಿನ ಮೋಹವನ್ನು ಆರ್‌ಸಿಬಿ ಮ್ಯಾನೇಜ್ಮೆಂಟ್ ಬಿಡಲೇ ಬೇಕು. ಟೀಮ್ ಇಂಡಿಯಾದ ಆಟಗಾರರು ಹಾಗೂ ದೇಶೀಯ ಆಟಗಾರರಿಗೆ ಹೆಚ್ಚಿನ ಅವಕಾಶವನ್ನು ನೀಡಬೇಕಿದೆ. ಅಲ್ಲದೆ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಿದರೆ, ಗೆಲುವು ಹತ್ತಿರವಾಗುತ್ತದೆ.
ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ಗೆಲುವಿನ ಕಹಳೆ ಊದುವಲ್ಲಿ ಭಾರತೀಯ ಆಟಗಾರ್ತಿಯರ ಶ್ರಮ ಎದ್ದು ಕಾಣುತ್ತದೆ. ಆರ್‌ಸಿಬಿ ಮಹಿಳಾ ಲೀಗ್‌ನಲ್ಲಿ ಗೆಲುವು ದಾಖಲಿಸಿದಲ್ಲಿ ಭಾರತೀಯ ಆಟಗಾರ್ತಿಯರು ಪ್ರಮುಖ ಪಾತ್ರ ವಹಿಸಿದ್ದಾರೆ.
ಇದರಲ್ಲಿ ಸ್ಮೃತಿ ಮಂಧಾನಾ, ಶ್ರೇಯಾಂಕ ಪಟೇಲ್, ರಿಚಾ ಘೋಷ್, ರೆಣುಕಾ ಸಿಂಗ್, ಆಶಾ ಶೋಬನಾ, ಸೇರಿದಂತೆ ಹಲವು ಆಟಗಾರ್ತಿಯರ ಜಯದಲ್ಲಿ ಮಿಂಚಿದ್ದಾರೆ. ಇದೇ ಮಂತ್ರವನ್ನು ಫಾಫ್ ಡುಪ್ಲೇಸಿಸ್ ಪಡೆ ಅನುಸರಿಸಿದರೆ ನಿಶ್ಚಿತವಾಗಿಯೂ ಗೆಲುವಿನ ಕನಸು ನನಸಾಗುತ್ತದೆ.
ಯುವಕರಿಗೆ ಅವಕಾಶ ನೀಡಿ
ಆರ್‌ಸಿಬಿ ತಂಡ ಯುಕವರಿಗೆ ಅವಕಾಶವನ್ನು ನೀಡಿ ಅವರಲ್ಲಿನ ಪ್ರತಿಭೆಯನ್ನು ಹೊರ ತೆಗೆಯುವ ಅವಶ್ಯಕತೆ ಇದೆ. ಅಂದಗಾ ಮಾತ್ರ ಭವಿಷ್ಯದ ತಂಡವನ್ನು ನಿರ್ಮಿಸಲು ಸಹ ಸಹಾಯವಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications