WPL 2024: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರೋಚಕ ಸೋಲಿನ ಬಳಿಕ ಆರ್‌ಸಿಬಿಗೆ ಪ್ಲೇಆಫ್ ಅವಕಾಶವಿದೆಯೇ?
ಭಾನುವಾರ, ಮಾರ್ಚ್ 10ರಂದು ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ 2024ರ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) 17ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಒಂದು ರನ್ ಗೆಲುವು ಸಾಧಿಸಿತು.
ಆರ್‌ಸಿಬಿ ತಂಡದ ವಿರುದ್ಧದ ಗೆಲುವಿನ ನಂತರ ಡೆಲ್ಲಿ ಕ್ಯಾಪಿಟಲ್ಸ್ ತಂಡವು 2024ರ ಮಹಿಳಾ ಪ್ರೀಮಿಯರ್ ಲೀಗ್‌ನ ಸತತ ಎರಡನೇ ಋತುವಿನಲ್ಲಿ ಪ್ಲೇಆಫ್‌ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಜೆಮಿಮಾ ರೋಡ್ರಿಗಸ್ ಮತ್ತು ಆಲಿಸ್ ಕ್ಯಾಪ್ಸಿ ಅವರ ಅಮೋಘ ಆಟದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 181 ರನ್‌ಗಳನ್ನು ಕಲೆಹಾಕಿತು.
182 ರನ್‌ಗಳ ಬೃಹತ್ ಮೊತ್ತ ಬೆನ್ನಟ್ಟಿದ ಆರ್‌ಸಿಬಿ ವನಿತೆಯರು 20 ಓವರ್‌ಗಳಲ್ಲಿ 7 ಕಳೆದುಕೊಂಡು 180 ರನ್ ಗಳಿಸಿದರು ಮತ್ತು ಕೇವಲ ಒಂದು ರನ್‌ನಿಂದ ರೋಚಕ ಸೋಲು ಅನುಭವಿಸಿದರು.

ಕೊನೆಯ ಎಸೆತದವರೆಗೂ ಆರ್‌ಸಿಬಿ ತಂಡವನ್ನು ಚೇಸಿಂಗ್‌ನಲ್ಲಿಡಲು 29 ಎಸೆತಗಳಲ್ಲಿ 51 ರನ್ ಗಳಿಸಿದ ರಿಚಾ ಘೋಷ್ ಅವರ ಹೋರಾಟ ಫಲಿಸಲಿಲ್ಲ. ಕೊನೆಯ ಎಸೆತದಲ್ಲಿ 2 ರನ್ ಬೇಕಾಗಿದ್ದಾಗ ರನೌಟ್ ಆಗುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೋಲೊಪ್ಪಿಕೊಂಡರು.
ಮಹಿಳಾ ಪ್ರೀಮಿಯರ್ ಲೀಗ್ 2024: ತಂಡಗಳ ಪ್ಲೇಆಫ್ ಭವಿಷ್ಯ
2024ರ ಮಹಿಳಾ ಪ್ರೀಮಿಯರ್ ಲೀಗ್‌ನ ಎರಡನೇ ಆವೃತ್ತಿಯ ಅಂತ್ಯಕ್ಕೆ ಸಮೀಪಿಸುತ್ತಿದ್ದಂತೆ, ಪ್ಲೇಆಫ್ ಸ್ಥಾನಕ್ಕಾಗಿ ತಂಡಗಳ ಪೈಪೋಟಿ ತೀವ್ರಗೊಳ್ಳುತ್ತಿದೆ.
2024ರ ಪಂದ್ಯಾವಳಿಯ ಲೀಗ್ ಹಂತದ ಮುಕ್ತಾಯಕ್ಕೆ ಇನ್ನು ಮೂರು ದಿನಗಳು ಬಾಕಿಯಿದ್ದು, ಈಗಾಗಲೇ ಪ್ಲೇಆಫ್‌ಗೆ ಅರ್ಹತೆ ಪಡೆದಿರುವ ಮುಂಬೈ ಇಂಡಿಯನ್ಸ್ ಹೊರತುಪಡಿಸಿ ಎಲ್ಲಾ ನಾಲ್ಕು ತಂಡಗಳು ಪ್ಲೇಆಫ್‌ನಲ್ಲಿ ಸ್ಥಾನಕ್ಕಾಗಿ ಪೈಪೋಟಿಯಲ್ಲಿದ್ದವು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ಲೇಆಫ್ ಭವಿಷ್ಯ
ಭಾನುವಾರದಂದು ಆರ್‌ಸಿಬಿ ವಿರುದ್ಧ ರೋಚಕ ಒಂದು ರನ್ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಪ್ಲೇ ಆಫ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಇನ್ನು ಮಾರ್ಚ್ 13ರಂದು ಗುಜರಾತ್ ಜೈಂಟ್ಸ್ ವಿರುದ್ಧ ಕೊನೆಯ ಲೀಗ್ ಪಂದ್ಯ ಆಡಲಿದೆ.
ಆರ್‌ಸಿಬಿ ತಂಡದ ಪ್ಲೇಆಫ್ ಭವಿಷ್ಯ
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಪ್ಲೇಆಫ್ ಭವಿಷ್ಯವು ಬೇರೊಂದು ಪಂದ್ಯದ ಫಲಿತಾಂಶದ ಮೇಲೆ ಅವಲಂಬಿತವಾಗಿದೆ. ಪ್ಲೇಆಫ್ ಪೈಪೋಟಿಯಲ್ಲಿರುವ ಯುಪಿ ವಾರಿಯರ್ಜ್ ತಂಡವು ಅಂಕಪಟ್ಟಿಯಲ್ಲಿ ಸ್ಥಾನದಲ್ಲಿರುವ ಗುಜರಾತ್ ಜೈಂಟ್ಸ್ ವಿರುದ್ಧ ಸೋತರೆ, ಆರ್‌ಸಿಬಿ ತಂಡದ ಪ್ಲೇಆಫ್ ಕನಸು ಜೀವಂತವಾಗಿರಲಿದೆ.
ಆಗ ತನ್ನ ಮುಂದಿನ ಪಂದ್ಯದಲ್ಲಿ ಸ್ಮೃತಿ ಮಂಧಾನ ನಾಯಕತ್ವದ ಆರ್‌ಸಿಬಿ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದರೆ ಸುಲಭವಾಗಿ ಪ್ಲೇಆಫ್ ಪ್ರವೇಶಿಸಬಹುದು.
ಯುಪಿ ವಾರಿಯರ್ಜ್ ತಂಡದ ಪ್ಲೇಆಫ್ ಭವಿಷ್ಯ
ಯುಪಿ ವಾರಿಯರ್ಜ್ ತಂಡವು ಪ್ಲೇಆಫ್ ಸುತ್ತಿಗೆ ಅರ್ಹತೆ ಪಡೆಯುವ ಸರಳ ಮಾರ್ಗವೆಂದರೆ, ತಮ್ಮ ಅಂತಿಮ ಲೀಗ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಸೋಲಿಸುವುದು. ಒಂದು ವೇಳೆ ಸೋತರೆ ಆರ್‌ಸಿಬಿ ತಂಡ ಪ್ಲೇಆಫ್‌ಗೆ ಎಂಟ್ರಿ ಹಾದಿ ಸುಗಮವಾಗಲಿದೆ.
ಗುಜರಾತ್ ಜೈಂಟ್ಸ್ ತಂಡದ ಪ್ಲೇಆಫ್ ಭವಿಷ್ಯ
2023ರ ಆವೃತ್ತಿಯಲ್ಲಿ ಕೊನೆಯ ಸ್ಥಾನ ಪಡೆದಿದ್ದ ಗುಜರಾತ್ ಜೈಂಟ್ಸ್ ತಂಡ ಮತ್ತೆ ಈ ಆವೃತ್ತಿಯಲ್ಲೂ ಅದೇ ಸ್ಥಾನದಲ್ಲಿದೆ. ಗುಜರಾತ್ ಜೈಂಟ್ಸ್ ಪ್ಲೇಆಫ್ ರೇಸ್‌ನಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಲೆಕ್ಕಾಚಾರದ ಪ್ರಕಾರ, ಅವರಿಗೆ ಇನ್ನೂ ಕಡಿಮೆ ಅವಕಾಶವಿದೆ.
ಮೊದಲಿಗೆ, ಬೆತ್ ಮೂನಿ ನಾಯಕತ್ವ ಗುಜರಾತ್ ಜೈಂಟ್ಸ್ ತಂಡವು ತನ್ನ ಕೊನೆಯ ಎರಡು ಲೀಗ್ ಪಂದ್ಯಗಳನ್ನು ಗೆಲ್ಲಬೇಕು ಮತ್ತು ಮುಂಬೈ ಇಂಡಿಯನ್ಸ್ ತಂಡವು ಆರ್‌ಸಿಬಿ ತಂಡವನ್ನು ಸೋಲಿಸಬೇಕು.
ಯುಪಿ ವಾರಿಯರ್ಜ್ ಮತ್ತು ಆರ್‌ಸಿಬಿ ತಲಾ ಆರು ಪಾಯಿಂಟ್‌ಗಳೊಂದಿಗೆ ಮತ್ತು ಹೆಚ್ಚಿನ ಎನ್‌ಆರ್‌ಆರ್ ಮುನ್ನಡೆಯೊಂದಿಗೆ ಅವರ ನಡುವೆ ಮೂರು ತಂಡಗಳ ಪೈಪೋಟಿಗೆ ಕಾರಣವಾಗುತ್ತದೆ.
ಆದರೆ, ಗುಜರಾತ್ ಜೈಂಟ್ಸ್ ತಂಡವು -1.111ರ ನೆಟ್ ರನ್‌ರೇಟ್ ಹೊಂದಿದ್ದು, ಮೂರನೇ ಸ್ಥಾನಕ್ಕಾಗಿ ಸ್ಪರ್ಧಿಸುತ್ತಿರುವ ಇತರ ಆರ್‌ಸಿಬಿ ಮತ್ತು ಯುಪಿ ವಾರಿಯರ್ಜ್ ತಂಡಗಳನ್ನು ಸೋಲಿಸುವಲ್ಲಿ ಗುಜರಾತ್ ಜೈಂಟ್ಸ್ ಸವಾಲು ಎದುರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications