WPL 2024: ಆರ್‌ಸಿಬಿ ಪುರುಷ ತಂಡ ಸಾಧಿಸದ್ದನ್ನು ಸಾಧಿಸಿ ಇತಿಹಾಸ ಬರೆಯಲಿದೆಯೇ ಸ್ಮೃತಿ ಮಂಧಾನ ಪಡೆ?
ಭಾನುವಾರ, ಮಾರ್ಚ್ 17ರಂದು ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ 2024ರ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ನ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ತಂಡಗಳು ಪ್ರಶಸ್ತಿಗಾಗಿ ಹಣಾಹಣಿ ನಡೆಸಲಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿ ಈವರೆಗೆ ಪ್ರತಿಷ್ಠಿತ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿದಿಲ್ಲ. 2008ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಾರಂಭವಾದಾಗಿನಿಂದ ಆರ್‌ಸಿಬಿ ಲೀಗ್‌ನಲ್ಲಿದೆ. ಆದರೆ ಒಮ್ಮೆಯೂ ಟ್ರೋಫಿ ಮೇಲೆ ಹಿಡಿತ ಸಾಧಿಸಲು ವಿಫಲವಾಗಿದೆ.
16 ವರ್ಷಗಳ ನಂತರ, 2024ರ ಮಹಿಳಾ ಪ್ರೀಮಿಯರ್ ಲೀಗ್ ಫೈನಲ್‌ನಲ್ಲಿ ಮಾರ್ಚ್ 17ರಂದು ಆರ್‌ಸಿಬಿ ಪುರುಷರ ತಂಡಕ್ಕೆ ಸಾಧ್ಯವಾಗದ್ದನ್ನು ಮಾಡಲು ಸ್ಮೃತಿ ಮಂಧಾನ ನಾಯಕತ್ವದ ಮಹಿಳಾ ತಂಡಕ್ಕೆ ದೊಡ್ಡ ಅವಕಾಶವಿದೆ.

ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಮೂರು ತಂಡಗಳು ಆರಂಭದಿಂದಲೂ ಇವೆ. ಮುಂಬೈ ಇಂಡಿಯನ್ಸ್ ಐಪಿಎಲ್ ಮತ್ತು ಡಬ್ಲ್ಯುಪಿಎಲ್ ಎರಡರಲ್ಲೂ ಯಶಸ್ಸನ್ನು ಸಾಧಿಸಿದೆ. ಮತ್ತೊಂದೆಡೆ, ಪುರುಷರ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಐದು ಪ್ರಶಸ್ತಿಗಳನ್ನು ಗೆದ್ದಿದೆ.
ಆದರೆ, ಐಪಿಎಲ್‌ನ 16 ಸೀಸನ್‌ಗಳಲ್ಲಿ ಮತ್ತು ಡಬ್ಲ್ಯುಪಿಎಲ್‌ನ ಉದ್ಘಾಟನಾ ಋತುವಿನಲ್ಲಿ ಭಾಗವಹಿಸಿದ ಆರ್‌ಸಿಬಿ ಇನ್ನೂ ಟ್ರೋಫಿಯನ್ನು ಕೈಯಲ್ಲಿಡಿದು ನೋಡಿಲ್ಲ.
ವಿರಾಟ್ ಕೊಹ್ಲಿ (2016), ಡೇನಿಯಲ್ ವೆಟ್ಟೋರಿ (2011) ಮತ್ತು ಅನಿಲ್ ಕುಂಬ್ಳೆ (2009) ನಾಯಕರಾಗಿದ್ದಾಗ ಆರ್‌ಸಿಬಿ ಫೈನಲ್‌ನಲ್ಲಿ ಸೋಲು ಎದುರಿಸಿತ್ತು. ಇದೀಗ ಸ್ಮೃತಿ ಮಂಧಾನ ಅವರು ಫೈನಲ್‌ನಲ್ಲಿ ತಂಡವನ್ನು ಮುನ್ನಡೆಸುವ ನಾಲ್ಕನೇ ಆರ್‌ಸಿಬಿ ನಾಯಕಿಯಾಗಲಿದ್ದಾರೆ.
ಐಪಿಎಲ್‌ನಲ್ಲಿ ಮೂರು ಬಾರಿ ಫೈನಲ್‌ಗೆ ತಲುಪಿದ್ದ ಆರ್‌ಸಿಬಿ 2009ರ ಫೈನಲ್‌ನಲ್ಲಿ 6 ರನ್‌ಗಳಿಂದ, 2011ರಲ್ಲಿ 58 ರನ್‌ಗಳಿಂದ ಸಿಎಸ್‌ಕೆ ವಿರುದ್ಧ ಭಾರಿ ಸೋಲಿನಲ್ಲಿ ಕೊನೆಗೊಂಡಿತು ಮತ್ತು ಮೂರನೇ ಫೈನಲ್ 2016ರಲ್ಲಿ 8 ರನ್‌ಗಳಿಂದ ಎಸ್ಆರ್‌ಎಚ್ ವಿರುದ್ಧ ಸೋಲು ಕಂಡಿತು.
ಮೂರು ಫೈನಲ್‌ಗಳು ಮತ್ತು ಮೂವರು ನಾಯಕರು ಸೋಲನ್ನು ಎದುರಿಸಿದ್ದಾರೆ. ಇದೀಗ ಭೂತಕಾಲವನ್ನು ಬಿಟ್ಟು ವರ್ತಮಾನದಲ್ಲಿ ಇತಿಹಾಸ ರಚಿಸುವ ಅವಕಾಶ ಸ್ಮೃತಿ ಮಂಧಾನಗಿದೆ.

ವಿಲಕ್ಷಣ ಕಾಕತಾಳೀಯ ಘಟನೆ
ಮುಂಬೈ ಇಂಡಿಯನ್ಸ್ ವಿರುದ್ಧದ ಎಲಿಮಿನೇಟರ್‌ನಲ್ಲಿ ರೋಚಕವಾಗಿ ಗೆಲುವು ಸಾಧಿಸಿದ ನಂತರ, ಆರ್‌ಸಿಬಿ ಮಹಿಳಾ ತಂಡ 2024ರ ಮಹಿಳಾ ಪ್ರೀಮಿಯರ್ ಲೀಗ್ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲು ಸಜ್ಜಾಗಿದೆ.
ಕುತೂಹಲಕಾರಿಯಾಗಿ, ಆರ್‌ಸಿಬಿ ಪುರುಷರ ತಂಡವು ತಮ್ಮ ಎರಡನೇ ಋತುವಿನ ಫೈನಲ್‌ನಲ್ಲಿ (ಡಿಸಿ) ಡೆಕ್ಕನ್ ಚಾರ್ಜರ್ಸ್ ತಂಡವನ್ನು ಎದುರಿಸಿತು.
ಲೀಗ್‌ನ ಉದ್ಘಾಟನಾ ಆವೃತ್ತಿಯಲ್ಲಿ ಪುರುಷರ ಮತ್ತು ಮಹಿಳೆಯರ ಎರಡೂ ತಂಡಗಳು ಅಂಕಪಟ್ಟಿಯಲ್ಲಿ 7ನೇ ಸ್ಥಾನವನ್ನು ಗಳಿಸಿದವು ಮತ್ತು ಎರಡನೇ ಋತುವಿನ (ಐಪಿಎಲ್ 2009 ಮತ್ತು ಡಬ್ಲ್ಯುಪಿಎಲ್ 2024) ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದವು.
ಇದೀಗ ಕಾಕತಾಳೀಯವೋ ಅಥವಾ ಸ್ಮೃತಿ ಮಂಧಾನ ನಾಯಕತ್ವದ ಮಹಿಳಾ ತಂಡಕ್ಕೆ ಏನಾಗಲಿದೆ ಎಂಬುದರ ಸಂಕೇತವೋ, ಯಾರಿಗೂ ತಿಳಿದಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications