WPL 2025: ಮಹಿಳಾ ಲೀಗ್ ಇತಿಹಾಸದ 5 ಸ್ಮರಣೀಯ ಕ್ಷಣಗಳು
ಭಾರತದಲ್ಲಿ ಕಳೆದ 18 ವರ್ಷಗಳ ಹಿಂದೆ ಕ್ರಿಕೆಟ್ ಲೀಗ್‌ನಲ್ಲಿ ಒಂದು ಶಿಶು ಜನಿಸಿತು. ಈ ಶಿಶು ಹುಟ್ಟುವಾಗ ನಿರೀಕ್ಷೆಗಳು ಏನು ಇರಲಿಲ್ಲ. ಆದರೆ ಈಗ ಅದು ಹೆಮ್ಮರವಾಗಿ ಬೆಳೆದಿದೆ. ವಿಶ್ವದ ಶ್ರೀಮಂತ ಲೀಗ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಭಾರತದಲ್ಲಿ ಆರಂಭವಾದ ಐಪಿಎಲ್ ಬೇರೆ ದೇಶಗಳಲ್ಲೂ ಕ್ರಿಕೆಟ್ ಲೀಗ್ ಆರಂಭಿಸಲು ಪ್ರೇರಣೆ ಆಗಿದೆ. ಇನ್ನು ಪುರುಷರ ಟಿ20 ಲೀಗ್‌ನಲ್ಲಿ ಕಂಡ ಯಶಸ್ವಿನ ಬಳಿಕ ಬಿಸಿಸಿಐ, ಇದನ್ನು ಮಹಿಳಾ ಕ್ರಿಕೆಟ್‌ಗೂ ಪರಿಚಯಿಸಿತು. ಈಗ ಈ ಲೀಗ್ ಮಹಿಳಾ ವಿಭಾಗದಲ್ಲೂ ಭಾರೀ ಸದ್ದು ಮಾಡುತ್ತಿದೆ.
ಇನ್ನೇನು ಕೆಲವೇ ದಿನಗಳಲ್ಲಿ ಮೂರನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಈ ಲೀಗ್‌ನಲ್ಲಿ ಭಾಗವಹಿಸಲು ತಂಡಗಳು ಸಹ ರೆಡಿ ಆಗಿವೆ. ಈ ಬಾರಿಯೂ ನವ ಉತ್ಸಾಹದಲ್ಲಿ ಆಟಗಾರರು ಮೈದಾನಕ್ಕೆ ಪ್ರವೇಶಿಸಲಿದ್ದಾರೆ. ಒಟ್ಟಾರೆ ಐದು ಆವೃತ್ತಿ ಕಂಡ ಈ ಲೀಗ್‌ನ ಸ್ಮರಣೀಯ ಐದು ಘಟನೆಗಳು ಇಲ್ಲಿವೆ.

ಆರ್‌ಸಿಬಿ ಚಾಂಪಿಯನ್
ನಿಶ್ಚಿತವಾಗಿ ಸ್ಮರಣೀಯ ಕ್ಷಣಗಳಲ್ಲಿ ಎದ್ದು ಕಾಣುವುದು ಕಳೆದ ಬಾರಿ ಆರ್‌ಸಿಬಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದು. ಈ ವೇಳೆ ಆರ್‌ಸಿಬಿ ಮಹಿಳಾ ತಂಡ ಚೊಚ್ಚಲ ಬಾರಿಗೆ ಪ್ರಶಸ್ತಿ ಎತ್ತಿ ಸಂಭ್ರಮಿಸಿತು. ಈ ಮೂಲಕ ಪುರುಷರ ತಂಡ ಕಳೆದ 16 ಆವೃತ್ತಿಗಳಲ್ಲಿ ಮಾಡದ ಸಾಧನೆಯನ್ನು ಯುವ ಮಹಿಳಾ ತಂಡ ಮಾಡಿ ಬೀಗಿತು. ಈ ತಂಡವನ್ನು ಸ್ಮೃತಿ ಮಂಧನಾ ಮುನ್ನಡೆಸಿದ್ದರು.
ಇಸ್ಸಿ ವಾಂಗ್ ಹ್ಯಾಟ್ರಿಕ್
ಮಹಿಳಾ ಪ್ರೀಮಿಯರ್ ಲೀಗ್ ಮೊದಲ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಬೌಲರ್ ಇಸ್ಸಿ ವಾಂಗ್ ಹ್ಯಾಟ್ರಿಕ್ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದರು. 13ನೇ ಓವರ್‌ನಲ್ಲಿ ಯುಪಿ ಬ್ಯಾಟರ್‌ಗಳನ್ನು ಕಾಡಿದ ಇಸ್ಸಿ ಸತತ ಮೂರು ವಿಕೆಟ್ ಪಡೆದು ಅಬ್ಬರಿಸಿದರು. ಇವರ ಅಮೋಘ ಪ್ರದರ್ಶನದ ಬಲದಿಂದ ಮುಂಬೈ ಫೈನಲ್‌ಗೆ ಪ್ರವೇಶವನ್ನು ಪಡೆಯಿತು.

ಕಾರಿನ ಗ್ಲಾಸ್ ಪೀಸ್ ಪೀಸ್
ಇಂತಹ ದೃಶ್ಯಗಳು ದಶಕಗಳಲ್ಲಿ ಒಮ್ಮೆ ನಡೆಯಬಹುದು ಎಂದು ಹೇಳಿದರೆ ತಪ್ಪಾಗಲಾರದು. ಆರ್‌ಸಿಬಿ ಹಾಗೂ ಯುಪಿ ವಾರಿಯರ್ಸ್ ಪಂದ್ಯದ ವೇಳೆ ಅಪರೂಪದ ಕ್ಷಣಕ್ಕೆ ಮೈದಾನ ಸಾಕ್ಷಿಯಾಯಿತು. ಆರ್‌ಸಿಬಿ ಪರ ಬ್ಯಾಟ್ ಮಾಡಿದ ಎಲಿಸ್ ಪೆರ್ರಿ ಈ ಅಮೋಘ ಸಾಧನೆ ಮಾಡಿದರು. 19 ನೇ ಓವರ್‌ನಲ್ಲಿ, ಪೆರ್ರಿ, ದೀಪ್ತಿ ಶರ್ಮಾ ಅವರ ಎಸೆತವನ್ನು ಮಿಡ್-ವಿಕೆಟ್ ಮೇಲೆ ಬಾರಿಸಿದರು. ಚೆಂಡು ಮೈದಾನದಲ್ಲಿ ಪ್ರದರ್ಶನಕ್ಕೆ ಇಟ್ಟಿದ ಕಾರಿನ ಖಿಡಕಿಗೆ ಬಡಿಯಿತು. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಈ ರೀತಿ ಆಗಿದ್ದು ಇದೆ ಮೊದಲು.
ಸೋಫಿ ಡಿವೈನ್
ಆರ್‌ಸಿಬಿ ಪರ ಆಡುವ ಸೋಫಿ ಡಿವೈನ್ ತಮ್ಮ ಬಿರುಸಿನ ಬ್ಯಾಟಿಂಗ್‌ಗೆ ಹೆಸರುವಾಸಿ. ಇವರು ಮೊದಲ ಆವೃತ್ತಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದರು. ಗುಜರಾತ್ ಜೈಂಟ್ಸ್ ವಿರುದ್ಧ ಪಂದ್ಯದಲ್ಲಿ ಸೋಫಿ ಜಸ್ಟ್ 36 ಎಸೆತಗಳಲ್ಲಿ 9 ಬೌಂಡರಿ, 8 ಸಿಕ್ಸರ್ ನೆರವಿನಿಂದ 99 ರನ್ ಬಾರಿಸಿದರು. ಇದು ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಎಂದು ನೆನಪು ಹಾರದ ದಿನ.

ಶಬ್ನಿಮ್ ಇಸ್ಮಾಯಿಲ್ ವೇಗದ ಎಸೆತ
ಮಹಿಳಾ ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಬೌಲಿಂಗ್ ಮಾಡಿದ ದಾಖಲೆಯನ್ನು ಮುಂಬೈ ಇಂಡಿಯನ್ಸ್ ಆಟಗಾರ್ತಿ ಹೊಂದಿದ್ದಾರೆ. ಇವರು ಕಳೆದ ಲೀಗ್‌ನಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಈ ಸಾಧನೆ ಮಾಡಿದ್ದರು. ಇವರು ಗಂಟೆಗೆ 132.1 ಕಿಲೋ ಮೀಟರ್ ವೇಗದಲ್ಲಿ ಬೌಲ್ ಮಾಡಿದರು. ಈ ಎಸೆತದಲ್ಲಿ ಅವರಿಗೆ ವಿಕೆಟ್ ಲಭಿಸಲಿಲ್ಲ. ಆದರೆ ಈ ಎಸೆತ ಇತಿಹಾಸದ ಪುಟದಲ್ಲಿ ಸ್ಥಾನ ಪಡೆದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications