Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2025: ಯಾರಿಗೆ, ಯಾವ ಪ್ರಶಸ್ತಿ; ಇಲ್ಲಿದೆ ಸಂಪೂರ್ಣ ಪಟ್ಟಿ

ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್) 2025ರ ಫೈನಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುಂಬೈ ಇಂಡಿಯನ್ಸ್ 8 ರನ್‌ಗಳಿಂದ ಸೋಲಿಸಿತು. ಇದರೊಂದಿಗೆ ಮುಂಬೈ ಎರಡನೇ ಬಾರಿಗೆ ಡಬ್ಲ್ಯೂಪಿಎಲ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿತು. 2023 ರಲ್ಲಿ ನಡೆದ ಮೊದಲ ಆವೃತ್ತಿಯಲ್ಲಿ ಮುಂಬೈ ತಂಡವು ಫೈನಲ್‌ನಲ್ಲಿ ಡೆಲ್ಲಿ ತಂಡವನ್ನು ಸೋಲಿಸಿತ್ತು. ಈ ಗೆಲುವಿನ ನಂತರ ಮುಂಬೈ ಕೋಟ್ಯಂತರ ರೂಪಾಯಿಗಳ ನಗದ ಬಹುಮಾನ ಪಡೆದಿದೆ. ರನ್ನರ್ ಅಪ್ ಡೆಲ್ಲಿ ತಂಡವೂ ಬರಿಗೈಯಲ್ಲಿ ಮರಳಲಿಲ್ಲ. ಈ ಲೀಗ್‌ಗಾಗಿ ಬಿಸಿಸಿಐ ಈಗಾಗಲೇ ಕೋಟ್ಯಂತರ ರೂಪಾಯಿಗಳ ನಗದು ಬಹುಮಾನ ಘೋಷಿಸಿತ್ತು.

ಡೆಲ್ಲಿ ಕ್ಯಾಪಿಟಲ್ಸ್ ತಂಡ ಸತತ ಮೂರನೇ ಬಾರಿಗೆ ನಿರಾಸೆ ಅನುಭವಿಸಿದೆ. ಡೆಲ್ಲಿ ತಂಡವು ಸತತ ಮೂರು ಬಾರಿ ಡಬ್ಲ್ಯೂಪಿಎಲ್ ಫೈನಲ್‌ಗೆ ತಲುಪಿತ್ತು. ಆದರೆ ಪ್ರತಿ ಬಾರಿಯೂ ಡೆಲ್ಲಿ ಸೋಲನ್ನು ಎದುರಿಸಬೇಕಾಯಿತು.

WPL 2025 All Award Winners List

ಡಬ್ಲ್ಯೂಪಿಎಲ್ ಇತಿಹಾಸದಲ್ಲಿ ನಡೆದಿರುವ ಮೂರು ಫೈನಲ್ ಪಂದ್ಯಗಳಲ್ಲಿ ಡೆಲ್ಲಿ ವಿರುದ್ಧ ಮುಂಬೈ ಎರಡು ಫೈನಲ್‌ಗಳಲ್ಲಿ ಗೆದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಒಂದರಲ್ಲಿ ಗೆದ್ದಿದೆ. ಕಳೆದ ವರ್ಷ ಆರ್‌ಸಿಬಿ ತಂಡ ಡೆಲ್ಲಿ ಸೋಲಿಸಿ ಚಾಂಪಿಯನ್ ಆಗಿತ್ತು. ಈ ಬಾರಿಯ ಸೋಲಿನ ನಂತರ ಡೆಲ್ಲಿ ತಂಡ 3 ಕೋಟಿ ರೂ. ನಗದು ಬಹುಮಾನ ಪಡೆದಿದೆ. ಮತ್ತೊಂದೆ ಚಾಂಪಿಯನ್ ಆದ ಮುಂಬೈ ಇಂಡಿಯನ್ಸ್ ತಂಡಕ್ಕೆ 6 ಕೋಟಿ ರೂಪಾಯಿ ನಗದು ಬಹುಮಾನ ಸಿಕ್ಕಿದೆ.

ನಗದ ಬಹುಮಾನಗಳ ವಿವರ

ಚಾಂಪಿಯನ್- 6 ಕೋಟಿ ರೂ.
ರನ್ನರ್-ಅಪ್- 3 ಕೋಟಿ ರೂ.
ಫೈನಲ್ ಪಂದ್ಯದ ಎಲೆಕ್ಟ್ರಿಕ್ ಸ್ಟ್ರೈಕರ್- 1 ಲಕ್ಷ ರೂ.
ಫೈನಲ್ ಪಂದ್ಯದ ಸಿಕ್ಸರ್‌ಗಳು- 1 ಲಕ್ಷ ರೂ.
ಸೀಸನ್‌ನ ಅತಿ ಹೆಚ್ಚು ಸಿಕ್ಸರ್‌ಗಳು- 5 ಲಕ್ಷ ರೂ.
ಸೀಸನ್‌ನ ಉದಯೋನ್ಮುಖ ಆಟಗಾರ್ತಿ- 5 ಲಕ್ಷ ರೂ.
ಆರೆಂಜ್ ಕ್ಯಾಪ್ ವಿಜೇತ (ಹೆಚ್ಚು ರನ್)- 5 ಲಕ್ಷ ರೂ.
ಪರ್ಪಲ್ ಕ್ಯಾಪ್ ವಿಜೇತ (ಹೆಚ್ಚು ವಿಕೆಟ್‌ಗಳು)- 5 ಲಕ್ಷ ರೂ.
ಅತ್ಯಂತ ಮೌಲ್ಯಯುತ ಆಟಗಾರ್ತಿ- 5 ಲಕ್ಷ ರೂ.

ಯಾರಿಗೆ, ಯಾವ ಪ್ರಶಸ್ತಿ?

ಚಾಂಪಿಯನ್: ಮುಂಬೈ ಇಂಡಿಯನ್ಸ್

ರನ್ನರ್ ಆಪ್: ಡೆಲ್ಲಿ ಕ್ಯಾಪಿಟಲ್ಸ್

ಆರೆಂಜ್ ಕ್ಯಾಪ್: ನಟಾಲಿ ಸೀವರ್ ಬ್ರಂಟ್ (ಮುಂಬೈ ಇಂಡಿಯನ್ಸ್)- 523 ರನ್

ಪರ್ಪಲ್ ಕ್ಯಾಪ್: ಅಮೆಲಿಯಾ ಕೆರ್ (ಮುಂಬೈ ಇಂಡಿಯನ್ಸ್)- 18 ವಿಕೆಟ್‌

ಫೈನಲ್ ಪಂದ್ಯದ ಎಲೆಕ್ಟ್ರಿಕ್ ಸ್ಟ್ರೈಕರ್: ಅಮನ್‌ಜೋತ್ ಕೌರ್ (ಮುಂಬೈ ಇಂಡಿಯನ್ಸ್)- 200.00 ಸ್ಟ್ರೈಕ್ ರೇಟ್

ಸೀಸನ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳು: ಆಶ್ಲೀಗ್ ಗಾರ್ಡ್ನರ್ (ಡೆಲ್ಲಿ ಕ್ಯಾಪಿಟಲ್ಸ್)- 18 ಸಿಕ್ಸರ್‌ಗಳು

ಫೈನಲ್ ಪಂದ್ಯದ ಅತಿ ಹೆಚ್ಚು ಸಿಕ್ಸರ್‌ಗಳು- ಹರ್ಮನ್‌ಪ್ರೀತ್ ಕೌರ್ ಮತ್ತು ಮರಿಜಾನ್ನೆ ಕಪ್- ತಲಾ 2 ಸಿಕ್ಸರ್

ಸೀಸನ್‌ನ ಉದಯೋನ್ಮುಖ ಆಟಗಾರ್ತಿ: ಅಮನ್‌ಜೋತ್ ಕೌರ್ (ಮುಂಬೈ ಇಂಡಿಯನ್ಸ್)

ಸೀಸನ್‌ನ ಗ್ರೀನ್ ಡಾಟ್ ಬಾಲ್‌ಗಳು: ಶಬ್ನಿಮ್ ಇಸ್ಮಾಯಿಲ್ (ಮುಂಬೈ ಇಂಡಿಯನ್ಸ್)

ಸೀಸನ್‌ನ ಕ್ಯಾಚ್: ಅನ್ನಾಬೆಲ್ ಸದರ್ಲ್ಯಾಂಡ್ (ಡೆಲ್ಲಿ ಕ್ಯಾಪಿಟಲ್ಸ್)

ಫೇರ್‌ಪ್ಲೇ ಪ್ರಶಸ್ತಿ: ಗುಜರಾತ್ ಜೈಂಟ್ಸ್

ಅತ್ಯಂತ ಮೌಲ್ಯಯುತ ಆಟಗಾರ್ತಿ: ನ್ಯಾಟ್ ಸಿವರ್-ಬ್ರಂಟ್ (ಮುಂಬೈ ಇಂಡಿಯನ್ಸ್)- 523 ರನ್‌ಗಳು, 12 ವಿಕೆಟ್‌ಗಳು

Story first published: Sunday, March 16, 2025, 9:10 [IST]
Other articles published on Mar 16, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+