WPL 2025 Auction: ತಮಿಳುನಾಡಿನ ಯುವ ಬ್ಯಾಟರ್‌ಗೆ ಹೊಡೆದ ಜಾಕ್‌ಪಾಟ್
ಬೆಂಗಳೂರಿನಲ್ಲಿ ನಡೆಯುತ್ತಿರುವ 2025ರ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್ ) ಹರಾಜಿನಲ್ಲಿ ತಮಿಳುನಾಡಿನ ಯುವ ಬ್ಯಾಟರ್ ಜಿ ಕಮಲಿನಿ ಅವರಿಗೆ ಜಾಕ್‌ಪಾಟ್ ಹೊಡೆದಿದೆ. ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 1.60 ಕೋಟಿ ರೂ. ನೀಡುವ ಮೂಲಕ ಕಮಲಿನಿ ಅವರನ್ನು ಬಿಡ್ ಮಾಡಿದೆ. 16 ವರ್ಷದ ಕಮಲಿನಿ ದೇಶೀಯ ಕ್ರಿಕೆಟ್‌ನಲ್ಲಿ ಮಿಂಚಿದ್ದಾರೆ. ಹೀಗಾಗಿ ಈ ಬಾರಿಯ ಮಿನಿ ಹರಾಜಿನಲ್ಲಿ ಕಮಲಿನಿ ಮೇಲೆ ಮುಂಬೈ ಇಂಡಿಯನ್ಸ್ ಕಣ್ಣಿಟ್ಟಿತ್ತು. ಅದರಂತೆ ಅವರನ್ನು ಫ್ರಾಂಚೈಸಿ ಬಿಡ್ ಮಾಡಿದೆ.
ತಮಿಳುನಾಡು ಮೂಲದ ಯುವ ಬ್ಯಾಟರ್ ಕಮಲಿನಿ ದೇಶೀಯ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ವಿಕೆಟ್‌ಕೀಪಿಂಗ್ ಜೊತೆಗೆ ಆರಂಭಿಕರಾಗಿ ಬ್ಯಾಟಿಂಗ್ ಮೂಲಕ ಕಮಲಿನಿ ಭರವಸೆ ಮೂಡಿಸಿದ್ದಾರೆ. ಇದರ ಫಲವಾಗಿ ಅವರು 1.60 ಕೋಟಿ ರೂ. ಗಳಿಗೆ ಮುಂಬೈ ಸೇರಿದ್ದಾರೆ.

ಕಮಲಿನಿ ಹಿನ್ನೆಲೆ
ಕಮಲಿನಿ ಅವರು ಜುಲೈ 20, 2008ರಲ್ಲಿ ಮಧುರೈನಲ್ಲಿ ಜನಿಸಿದರು. ಈಗಾಗಲೇ ಅವರು ತಮಿಳುನಾಡು ತಂಡದ ಪರ ಆಡುತ್ತಿದ್ದು, ಎಲ್ಲರ ಗಮನ ಸೆಳೆದಿದ್ದಾರೆ. ಕಮಲಿನಿ ಕ್ರಿಕೆಟ್ ಆಡಲೆಂದೇ ಅವರ ಕುಟುಂಬ ಮುಧುರೈನಿಂದ ಚೆನ್ನೈಗೆ ಸ್ಥಳಾಂತರವಾಗಿದೆ. ದೇಶೀಯ ಕ್ರಿಕೆಟ್‌ನಲ್ಲಿ ಮಿಂಚಿದ ಅವರು, ಭಾರತ ಅಂಡರ್ 19 ತಂಡಕ್ಕೂ ಆಯ್ಕೆಯಾಗಿದ್ದಾರೆ.
ದೇಶೀಯ ಕ್ರಿಕೆಟ್‌ನಲ್ಲಿ ತಮಿಳುನಾಡು ಪರ ಅಂಡರ್-19 ಟೂರ್ನಿಗಳಲ್ಲಿ ಕಮಲಿನಿ ಅಮೋಘ ಬ್ಯಾಟಿಂಗ್ ಮಾಡಿದ್ದಾರೆ. ಇದುವರೆಗೆ ಅವರು ಆಡಿರುವ 8 ಪಂದ್ಯಗಳಲ್ಲಿ 311 ರನ್ ಕಲೆ ಹಾಕಿದ್ದಾರೆ. ಕಮಲಿನಿ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ತಮಿಳುನಾಡು ಅಂಡರ್ 19 ಟಿ20 ಟ್ರೋಫಿ ಗೆದ್ದು ಬೀಗಿದೆ. ಇದಾದ ಬಳಿಕ ಭಾರತ ಬಿ ತಂಡದಲ್ಲಿ ಸ್ಥಾನ ಪಡೆದ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ತ್ರಿಕೋನ ಸರಣಿಯ ಫೈನಲ್‌ನಲ್ಲಿ 79 ರನ್ ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದಾರೆ.
ಸಿಎಸ್‌ಕೆ ಗರಡಿ ಪಳಗಿದ ಬ್ಯಾಟರ್
ಕಮಲಿನಿ ಬ್ಯಾಟಿಂಗ್ ಜೊತೆಗೆ ವಿಕೆಟ್‌ಕೀಪರ್ ಮತ್ತು ಸ್ಪಿನ್ ಬೌಲರ್ ಕೂಡ ಆಗಿದ್ದಾರೆ. ಕಮಲಿನಿಯ ಇಂದಿನ ಯಶಸ್ಸಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಪಾಲು ಸಾಕಷ್ಟಿದೆ. ಸಿಎಸ್‌ಕೆ ಅಕಾಡೆಮಿಯಲ್ಲಿ ಕಮಲಿನಿ ಅವರು ತರಬೇತಿ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications