Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2025: ಮಹಿಳಾ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ; ಯಾವ ಚಾನೆಲ್‌ನಲ್ಲಿ ಎಷ್ಟು ಗಂಟೆಗೆ ಆರಂಭ?

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಮೆಗಾ ಹರಾಜಿನ ನಂತರ, ಈಗ ಎಲ್ಲರ ಕಣ್ಣುಗಳು ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್ 2025) ಹರಾಜಿನ ಮೇಲೆ ನೆಟ್ಟಿದೆ. ಇದೀಗ ಮತ್ತೊಂದು ಹರಾಜನ್ನು ಯಶಸ್ವಿಯಾಗಿ ಆಯೋಜಿಸುವುದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ( ಬಿಸಿಸಿಐ) ಮುಂದಿರುವ ಸವಾಲು. ಭಾನುವಾರ ಬೆಂಗಳೂರಿನಲ್ಲಿ ಡಬ್ಲ್ಯೂಪಿಎಲ್ ಹರಾಜು ಪ್ರಕ್ರಿಯೆಯನ್ನು ಆಯೋಜಿಸಲಾಗಿದೆ. ಈ ಬಾರಿ ಹರಾಜಿನಲ್ಲಿ ಒಟ್ಟು 120 ಆಟಗಾರರನ್ನು ಖರೀದಿಸಲು ಐದು ಫ್ರಾಂಚೈಸಿಗಳು ಯೋಜನೆ ರೂಪಿಸಿವೆ.

ಡಬ್ಲ್ಯೂಪಿಎಲ್ ಹರಾಜು ಪಟ್ಟಿಯಲ್ಲಿ 91 ಭಾರತೀಯ ಮತ್ತು 29 ಅಂತಾರಾಷ್ಟ್ರೀಯ ಆಟಗಾರರಿದ್ದಾರೆ. ಅಸೋಸಿಯೇಟ್ ನೇಷನ್ಸ್‌ನ 3 ಉದಯೋನ್ಮುಖ ಪ್ರತಿಭೆಗಳು ಸೇರಿದಂತೆ 82 ಭಾರತೀಯ ಅನ್‌ಕ್ಯಾಪ್ಡ್ ಆಟಗಾರರು ಮತ್ತು 8 ಅನ್‌ಕ್ಯಾಪ್ಡ್ ವಿದೇಶಿ ಆಟಗಾರರು ಈ ಬಾರಿ ಕಾಣಿಸಿಕೊಳ್ಳಲಿದ್ದಾರೆ. ಹೆಚ್ಚಿನ ಫ್ರಾಂಚೈಸಿಗಳು ತಮ್ಮ ಪ್ರಮುಖ ತಂಡಗಳನ್ನು ಉಳಿಸಿಕೊಂಡಿರುವುದರಿಂದ ಎಲ್ಲಾ ತಂಡಗಳಲ್ಲಿ 19 ಸ್ಲಾಟ್‌ಗಳು ಖಾಲಿ ಇದ್ದು, ಅದರಲ್ಲಿ 5 ಸ್ಲಾಟ್‌ಗಳನ್ನು ವಿದೇಶಿ ಆಟಗಾರರಿಗೆ ತೆರೆದಿದೆ.

WPL 2025 Auction What Time Starts On Which Channel

ನೇರಪ್ರಸಾರ

ಮಹಿಳೆಯರ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ ಡಿಸೆಂಬರ್ 15 ಭಾನುವಾರದಂದು ನಡೆಯಲಿದೆ. ಬೆಂಗಳೂರಿನಲ್ಲಿ ಈ ಬಾರಿ ಹರಾಜು ಪ್ರಕಿಯೆಯನ್ನು ಆಯೋಜಿಸಲಾಗಿದೆ. ಆಟಗಾರರ ಹರಾಜು ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದ್ದು, 30 ನಿಮಿಷ ಮುಂಚಿತವಾಗಿ ನೇರಪ್ರಸಾರ ಆರಂಭವಾಗಲಿದೆ. ಕ್ರಿಕೆಟ್ ಅಭಿಮಾನಿಗಳು ಜಿಯೋ ಸಿನಿಮಾದಲ್ಲಿ ಹರಾಜಿನ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಬಹುದು. ಅಲ್ಲದೆ, ಸ್ಪೋರ್ಟ್ಸ್ 18 - 1 (ಎಸ್‌ಡಿ ಮತ್ತು ಹೆಚ್‌ಡಿ) ಚಾನೆಲ್‌ಗಳಲ್ಲಿ ನೇರ ಪ್ರಸಾರವಾಗಲಿದೆ.

ಸ್ಟಾರ್ ಆಟಗಾರರ ಮೇಲೆ ಕಣ್ಣು

ಈ ವರ್ಷದ ಹರಾಜಿನಲ್ಲಿ ತೇಜಲ್ ಹಸ್ಬಾನಿಸ್, ಸ್ನೇಹ್ ರಾಣಾ, ವೆಸ್ಟ್ ಇಂಡೀಸ್‌ನ ಡೇಂಡ್ರಾ ಡಾಟಿನ್, ಇಂಗ್ಲೆಂಡ್‌ನ ಹೀದರ್ ನೈಟ್ ಮತ್ತು ಲಾರೆನ್ ಬೆಲ್, ಐರ್ಲೆಂಡ್‌ನ ಓರ್ಲಾ ಪ್ರೆಂಡರ್‌ಗಾಸ್ಟ್ , ಆಸ್ಟ್ರೇಲಿಯಾದ ಕಿಮ್ ಗಾರ್ತ್ ಮತ್ತು ಡೇನಿಯಲ್ ಗಿಬ್ಸನ್ ಸೇರಿದ ಅನೇಕ ಇತರ ಪ್ರಮುಖ ಆಟಗಾರರನ್ನು ಬಿಡ್ ಮಾಡಲು ಫ್ರಾಂಚೈಸಿಗಳು ಸಜ್ಜಾಗಿವೆ.

ಫ್ರಾಂಚೈಸಿಗಳ ಪರ್ಸ್

  • ಡೆಲ್ಲಿ ಕ್ಯಾಪಿಟಲ್ಸ್ : 2.5 ಕೋಟಿ ರೂ.
  • ಗುಜರಾತ್ ಜೈಂಟ್ಸ್ : 4.4 ಕೋಟಿ ರೂ.
  • ಮುಂಬೈ ಇಂಡಿಯನ್ಸ್: 2.65 ಕೋಟಿ ರೂ.
  • ಯುಪಿ ವಾರಿಯರ್ಸ್: 3.9 ಕೋಟಿ ರೂ.
  • ರಾಯಲ್ ಚಾಲೆಂಜರ್ಸ್ ಬೆಂಗಳೂರು: 3.25 ಕೋಟಿ ರೂ.

Story first published: Saturday, December 14, 2024, 16:12 [IST]
Other articles published on Dec 14, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+