WPL 2025: ಹರ್ಮನ್‌ಪ್ರೀತ್ ಕೌರ್ ವಿರುದ್ಧ ಬಿಸಿಸಿಐ ಕಠಿಣ ಕ್ರಮ
ಮುಂಬೈ ಇಂಡಿಯನ್ಸ್ ನಾಯಕಿ ಹರ್ಮನ್‌ಪ್ರೀತ್ ಕೌರ್ ವಿರುದ್ಧ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಠಿಣ ಕ್ರಮ ಜರುಗಿಸಿದೆ. ಯುಪಿ ವಾರಿಯರ್ಸ್ ವಿರುದ್ಧದ ಡಬ್ಲ್ಯೂಪಿಎಲ್ 2025ರ ಪಂದ್ಯದ ವೇಳೆ ಅಂಪೈರ್ ತೀರ್ಪಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಕ್ಕಾಗಿ ಹರ್ಮನ್‌ಪ್ರೀತ್ ಕೌರ್ ಅವರಿಗೆ ಪಂದ್ಯ ಶುಲ್ಕದ ಶೇಕಡಾ 10 ರಷ್ಟು ದಂಡ ವಿಧಿಸಲಾಗಿದೆ. ಯುಪಿ ವಾರಿಯರ್ಸ್ ಇನ್ನಿಂಗ್ಸ್‌ನ 19 ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ.
ಕೊನೆಯ ಓವರ್‌ನಲ್ಲಿ ನಿಧಾನಗತಿಯ ಓವರ್ ರೇಟ್ ಇರುವುದರಿಂದ ಕೇವಲ ಮೂವರು ಫೀಲ್ಡರ್‌ಗಳು ಮಾತ್ರ ವೃತ್ತದ ಹೊರಗೆ ಉಳಿಯಬಹುದು ಎಂದು ಹರ್ಮನ್‌ಪ್ರೀತ್ ಕೌರ್ ಅವರಿಗೆ ಅಂಪೈರ್ ಅಜಿತೇಶ್ ಅರ್ಗಲ್ ತಿಳಿಸಿದ್ದರು. ಇದರಿಂದ ಸಿಟ್ಟಾದ ಹರ್ಮನ್‌ಪ್ರೀತ್ ಕೌರ್ ಅಂಪೈರ್ ಜೊತೆ ವಾಗ್ವಾದ ನಡೆಸಿದರು. ಹರ್ಮನ್ ಜೊತೆ ಅಮೆಲಿಯಾ ಕೆರ್ ಕೂಡ ವಾಗ್ವಾದಕ್ಕೆ ಕೈ ಜೋಡಿಸಿದ್ದರು.

ಡಬ್ಲ್ಯೂಪಿಎಲ್ ಅಧಿಕಾರಿಗಳ ಪ್ರಕಾರ, 'ಹರ್ಮನ್‌ಪ್ರೀತ್ ಕೌರ್ ಪಂದ್ಯದ ಸಮಯದಲ್ಲಿ ಅಂಪೈರ್ ತೀರ್ಪಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದಕ್ಕೆ ಸಂಬಂಧಿಸಿದ ಸೆಕ್ಷನ್ 2.8 ರ ಅಡಿಯಲ್ಲಿ ಲೆವೆಲ್ 1 ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಲೆವೆಲ್ 1 ಅಪರಾಧದಲ್ಲಿ ಪಂದ್ಯದ ರೆಫರಿಯ ನಿರ್ಧಾರವು ಅಂತಿಮ ಮತ್ತು ಬದ್ಧವಾಗಿರುತ್ತದೆ.
ಇನ್ನೊಂದು ತುದಿಯಲ್ಲಿ ನಿಂತಿದ್ದ ಅಮೆಲಿಯಾ ಕೆರ್ ಮತ್ತು ಹರ್ಮನ್ಪ್ರೀತ್ ಕೌರ್ ಅಂಪೈರ್ ಕಡೆಗೆ ಹೋಗಿ ಏನೋ ವಿವರಿಸಲು ಮುಂದಾದಾಗ, ಯುಪಿ ವಾರಿಯರ್ಸ್‌ನ ಸೋಫಿ ಎಕ್ಲೆಸ್ಟೋನ್ ಜೊತೆಗೂ ಹರ್ಮನ್‌ಪ್ರೀತ್ ಕೌರ್ ವಾಗ್ವಾದ ನಡೆಸಿದರು. ಈ ವಾಗ್ವಾದದಿಂದ ದೂರವಿರಲು ಸೋಫಿ ಎಕ್ಲೆಸ್ಟೋನ್ ಅವರಿಗೆ ಹರ್ಮನ್‌ಪ್ರೀತ್ ಸೂಚಿಸಿದರು. ವಿವಾದ ಹೆಚ್ಚಾಗುತ್ತಿರುವುದನ್ನು ನೋಡಿದ ಸ್ಕ್ವೇರ್ ಲೆಗ್ ಅಂಪೈರ್ ಎನ್ ಜನನಿ ಮತ್ತು ಯುಪಿ ನಾಯಕಿ ದೀಪ್ತಿ ಶರ್ಮಾ ಕೂಡ ಮುಂದೆ ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಗುರುವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್) 2025ರ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಯುಪಿ ತಂಡ 9 ವಿಕೆಟ್‌ಗೆ 150 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಮುಂಬೈ ತಂಡ 18.3 ಓವರ್‌ಗಳಲ್ಲಿ ಗುರಿ ತಲುಪಿತು.
ಅಮೆಲಿಯಾ ಕೆರ್ (5 ವಿಕೆಟ್‌ಗಳು) ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ಮತ್ತು ಹೇಲಿ ಮ್ಯಾಥ್ಯೂಸ್ (68 ರನ್‌ಗಳು, 2 ವಿಕೆಟ್‌ಗಳು) ಅವರ ಆಲ್‌ರೌಂಡರ್ ಪ್ರದರ್ಶನ ನೀಡಿದರು. ಈ ಇಬ್ಬರ ಪ್ರದರ್ಶನದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ಇನ್ನೂ ಒಂಬತ್ತು ಎಸೆತಗಳು ಬಾಕಿ ಇರುವಂತೆಯೇ ಯುಪಿ ವಾರಿಯರ್ಸ್ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿತು.
ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡವು ಎಂಟು ಅಂಕಗಳೊಂದಿಗೆ ಎರಡನೇ ಸ್ಥಾನವನ್ನು ತಲುಪಿತು. ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌ಗಿಂತ ಎರಡು ಅಂಕಗಳ ಹಿಂದಿದ್ದು, ಒಂದು ಪಂದ್ಯ ಬಾಕಿ ಇದೆ. ಯುಪಿ ವಾರಿಯರ್ಸ್‌ಗೆ ಸತತ ಮೂರನೇ ಸೋಲಾಗಿದ್ದು, ನಾಲ್ಕು ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications