Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2025: ಇಲ್ಲಿದೆ ಆರ್‌ಸಿಬಿ ಸಂಪೂರ್ಣ ವೇಳಾಪಟ್ಟಿ: ಬೆಂಗಳೂರಿನಲ್ಲಿ ಪಂದ್ಯಗಳು ಯಾವಾಗ?

ಶುಕ್ರವಾರದಿಂದ ದೇಶದಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ರಂಗು ಆರಂಭವಾಗಲಿದೆ. ಈ ಲೀಗ್‌ನಲ್ಲಿ ಒಟ್ಟು ಐದು ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಮೂರನೇ ಆವೃತ್ತಿಯ ಲೀಗ್‌ ಎಲ್ಲರ ಚಿತ್ತ ಕದ್ದಿದೆ. ಸ್ಟಾರ್ ಆಟಗಾರರು ಒಂದೇ ಸೂರಿನಡಿ ಕಾಣಿಸಿಕೊಳ್ಳುವುದು ಅಭಿಮಾನಿಗಳ ಸೆಳೆದಿದೆ. ತಂಡದ ಗೆಲುವಿಗಾಗಿ ಆಟಗಾರರು ಮಾಡುವ ಸಂಘಟಿತ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಐದು ತಂಡಗಳ ಲೀಗ್‌ನಲ್ಲಿ ಎಲ್ಲ ತಂಡಗಳು ಲೀಗ್‌ನಲ್ಲಿ ಒಟ್ಟು 8 ಪಂದ್ಯಗಳನ್ನು ಆಡಲಿವೆ.

ಪುರುಷರ ಲೀಗ್‌ನಲ್ಲಿ ಇರುವಂತೆಯೇ ಈ ಲೀಗ್‌ನಲ್ಲೂ ತವರು ನೆಲ ಹಾಗೂ ವಿರೋಧಿಗಳ ಅಂಗಳದಲ್ಲಿ ತಲಾ ಒಮ್ಮೆ ತಂಡಗಳು ಕಾದಾಟವನ್ನು ನಡೆಸುತ್ತವೆ. ಲೀಗ್‌ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ ನಾಲ್ಕು ತಂಡಗಳು ಮುಂದಿನ ಹಂತಕ್ಕೆ ಅರ್ಹತೆ ಪಡೆಯುತ್ತವೆ. ಆರ್‌ಸಿಬಿ ಸಹ ಈ ಲೀಗ್‌ನಲ್ಲಿ ಕಾಣಿಸಿಕೊಳ್ಳಲಿದೆ. ಎರಡನೇ ಆವೃತ್ತಿಯ ಡಬ್ಲ್ಯುಪಿಎಲ್‌ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿರುವ ಆರ್‌ಸಿಬಿ, ಮೂರನೇ ಲೀಗ್‌ನಲ್ಲೂ ಚಾಂಪಿಯನ್‌ ಪಟ್ಟಕ್ಕೇರುವ ಕನಸು ಕಾಣುತ್ತಿದೆ.

8 14 vs 7 30 17 vs 7 30 21 vs 7 30 24 vs 7 30 27 vs 7 30 1 vs 7 30 8 vs 7 30 11 vs 7 30

ಪ್ರಶಸ್ತಿ ಉಳಿಸಿಕೊಳ್ಳುವ ಕನಸಿನಲ್ಲಿ ಆರ್‌ಸಿಬಿ

ಆರ್‌ಸಿಬಿ ತಂಡದಲ್ಲಿ ಸ್ಟಾರ್ ಆಟಗಾರ್ತಿಯರ ದಂಡೇ ಇದೆ. ವಿಶ್ವ ಮಹಿಳಾ ಕ್ರಿಕೆಟ್‌ನಲ್ಲಿ ತಮ್ಮದೇ ಛಾಪು ಮೂಡಿಸಿರುವ ಆಸ್ಟ್ರೇಲಿಯಾ ಎಲ್ಲಿಸಾ ಪೆರ್ರಿ, ಇಂಗ್ಲೆಂಡ್‌ನ ಸೋಫಿಯಾ ಡಿವೈನ್‌, ಭಾರತ ಸ್ಮೃತಿ ಮಂಧನಾ, ರಿಚಾ ಘೋಷ್‌ ರಂತಹ ಸ್ಟಾರ್ ಆಟಗಾರರು ತಂಡದಲ್ಲಿದ್ದು, ಭರವಸೆಯನ್ನು ಮೂಡಿಸಿದ್ದಾರೆ. ಯುವ ಹಾಗೂ ಅನುಭವಿ ಆಟಗಾರರನ್ನು ಒಳಗೊಂಡಿರುವ ತಂಡ ಬಲಾಢ್ಯವಾಗಿದೆ. ಎಂದಿನಂತೆ ಬೆಂಗಳೂರು ತವರಿನಲ್ಲಿ ನಾಲ್ಕು ಹಾಗೂ ಬೇರೆ ಮೈದಾನದಲ್ಲಿ ನಾಲ್ಕು ಪಂದ್ಯಗಳನ್ನು ಆಡಲಿದೆ.

ಆರ್‌ಸಿಬಿ ಬೌಲಿಂಗ್ ವಿಭಾಗದಲ್ಲೂ ಸ್ಟಾರ್ ಆಟಗಾರ್ತಿಯರು ಇದ್ದಾರೆ. ಇದರಲ್ಲಿ ಕನ್ನಡತಿ ಶ್ರೇಯಾಂಕಾ ಪಾಟೀಲ್‌ ಎದ್ದು ಕಾಣುತ್ತಾರೆ. ಇವರು ಕಳೆದ ವರ್ಷ ಅಮೋಘ ಪ್ರದರ್ಶನ ನೀಡಿ ತಂಡದ ಜಯದಲ್ಲಿ ಮಿಂಚಿದ್ದರು. ಅಲ್ಲದೆ ಎರಡನೇ ಆವೃತ್ತಿಯ ಲೀಗ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಸಾಧನೆಯನ್ನು ಮಾಡಿದ್ದರು. ಹೀಗಾಗಿ ಈ ಬಾರಿ ಇವರ ಮೇಲೂ ಎಲ್ಲರ ಕಣ್ಣು ನೆಟ್ಟಿರಲಿದೆ.

8 14 vs 7 30 17 vs 7 30 21 vs 7 30 24 vs 7 30 27 vs 7 30 1 vs 7 30 8 vs 7 30 11 vs 7 30

ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಆರ್‌ಸಿಬಿ ವೇಳಾ ಪಟ್ಟಿ

  • ಫೆ.14, ಗುಜರಾತ್‌ ಜೈಂಟ್ಸ್‌ vs ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ವಡೋಧರಾ, ರಾತ್ರಿ 7.30ಕ್ಕೆ
  • ಫೆ.17, ಡೆಲ್ಲಿ ಕ್ಯಾಪಿಟಲ್ಸ್‌ vs ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ವಡೋಧರಾ, ರಾತ್ರಿ 7.30ಕ್ಕೆ
  • ಫೆ.21, ಮುಂಬೈ ಇಂಡಿಯನ್ಸ್‌ vs ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಬೆಂಗಳೂರು, ರಾತ್ರಿ 7.30ಕ್ಕೆ
  • ಫೆ.24, ರಾಯಲ್ ಚಾಲೆಂಜರ್ಸ್‌ ಬೆಂಗಳೂರು vs ಯುಪಿ ವಾರಿಯರ್ಸ್‌, ಬೆಂಗಳೂರು, ರಾತ್ರಿ 7.30ಕ್ಕೆ
  • ಫೆ.27, ರಾಯಲ್ ಚಾಲೆಂಜರ್ಸ್‌ ಬೆಂಗಳೂರು vs ಗುಜರಾತ್ ಟೈಟಾನ್ಸ್‌, ಬೆಂಗಳೂರು, ರಾತ್ರಿ 7.30ಕ್ಕೆ
  • ಮಾ.1, ರಾಯಲ್ ಚಾಲೆಂಜರ್ಸ್‌ ಬೆಂಗಳೂರು vs ಡೆಲ್ಲಿ ಕ್ಯಾಪಿಟಲ್ಸ್, ಬೆಂಗಳೂರು, ರಾತ್ರಿ 7.30ಕ್ಕೆ
  • ಮಾ.8, ಯುಪಿ ವಾರಿಯರ್ಸ್‌ vs ರಾಯಲ್ ಚಾಲೆಂಜರ್ಸ್‌ ಬೆಂಗಳೂರು, ಲಕ್ನೋ, ರಾತ್ರಿ 7.30ಕ್ಕೆ
  • ಮಾ.11, ಮುಂಬೈ ಇಂಡಿಯನ್ಸ್‌ vs ರಾಯಲ್ ಚಾಲೆಂಜರ್ಸ್‌ ಬೆಂಗಳೂರು, ಮುಂಬೈ, ರಾತ್ರಿ 7.30ಕ್ಕೆ

Story first published: Thursday, February 13, 2025, 9:00 [IST]
Other articles published on Feb 13, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+