For Quick Alerts
ALLOW NOTIFICATIONS  
For Daily Alerts
 

WPL 2025: ಯುಪಿ ವಾರಿಯರ್ಸ್‌ ತಂಡಕ್ಕೆ ಹೊಸ ನಾಯಕಿಯಾಗಿ ದೀಪ್ತಿ ಶರ್ಮಾ ನೇಮಕ

ಕ್ರಿಕೆಟ್ ಅಭಿಮಾನಿಗಳು ಪ್ರಸ್ತುತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗಾಗಿ ಕಾಯುತ್ತಿದ್ದಾರೆ. ಇದರ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನ ಭಾರತದಲ್ಲಿ ಬಹುನಿರೀಕ್ಷಿತ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್) 2025ರ ಆವೃತ್ತಿ ನಡೆಯಲಿದೆ. 2025ರ ಡಬ್ಲ್ಯೂಪಿಎಲ್ ಫೆಬ್ರವರಿ 14 ರಿಂದ ಶುರುವಾಗಲಿದೆ. ಇತ್ತೀಚೆಗೆ ಡಬ್ಲ್ಯೂಪಿಎಲ್‌ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಈ ಮಧ್ಯೆ ಯುಪಿ ವಾರಿಯರ್ಸ್ ಫ್ರಾಂಚೈಸಿ ಭಾನುವಾರ ತಮ್ಮ ತಂಡದ ಹೊಸ ನಾಯಕಿಯನ್ನು ಘೋಷಣೆ ಮಾಡಿದೆ.

ಡಬ್ಲ್ಯೂಪಿಎಲ್‌ನ ಮೊದಲೆರಡು ಆವೃತ್ತಿಗಳಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಯುಪಿ ವಾರಿಯರ್ಸ್ ವಿಫಲವಾಗಿತ್ತು. ಇದೀಗ ಮೂರನೇ ಆವೃತ್ತಿಗೆ ಯುಪಿ ವಾರಿಯರ್ಸ್ ತಂಡ ಸಜ್ಜಾಗಿದ್ದು, ನಾಯಕತ್ವವನ್ನು ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ದೀಪ್ತಿ ಶರ್ಮಾ ಅವರಿಗೆ ನೀಡಲಾಗಿದೆ.

WPL 2025 Deepti Sharma Appointed as the New Captain of UP Warriors Team

ಕಳೆದ ಕೆಲವು ವರ್ಷಗಳಿಂದ ದೀಪ್ತಿ ಶರ್ಮಾ ಟೀಮ್ ಇಂಡಿಯಾ ಪರ ಅದ್ಭುತ ಪ್ರದರ್ಶಗ ನೀಡುತ್ತಿದ್ದಾರೆ. ಅವರ ಯಶಸ್ಸನ್ನು ಕಂಡ ಯುಪಿ ವಾರಿಯರ್ಸ್ ಈಗ ತಂಡದ ನಾಯಕತ್ವ ಅವರಿಗೆ ನೀಡಿದೆ. ಗಾಯಗೊಂಡು ಟೂರ್ನಿಯಿಂದ ಹೊರಗುಳಿದಿರುವ ಆಸ್ಟ್ರೇಲಿಯಾದ ಅಲಿಸಾ ಹೀಲಿ ಬದಲಿಗೆ ದೀಪ್ತಿ ಶರ್ಮಾ ಅವನ್ನು ನಾಯಕಿನ್ನಾಗಿ ಆಯ್ಕೆ ಮಾಡಲಾಗಿದೆ.

ದೀಪ್ತಿ ಕಳೆದರೆಡು ಡಬ್ಲ್ಯೂಪಿಎಲ್‌ ಆವೃತ್ತಿಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಅವರು ಡಬ್ಲ್ಯೂಪಿಎಲ್‌ ಇತಿಹಾಸದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಭಾರತದ ಆಟಗಾರ್ತಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಯುಪಿ ವಾರಿಯರ್ಸ್ ಪರ ಮಿಂಚಿರುವ ಆಟಗಾರ್ತಿಯರಲ್ಲಿ ದೀಪ್ತಿ ಮುಂಚೂಣಿಯಲ್ಲಿದ್ದಾರೆ. ಇದೀಗ ನಾಯಕತ್ವವನ್ನು ವಹಿಸಿಕೊಂಡಿರುವ ದೀಪ್ತಿ ತಂಡವನ್ನು ಮುನ್ನಡೆಸಲು ಉತ್ಸಾಹಗೊಂಡಿದ್ದಾರೆ. ತಂಡದಲ್ಲಿ ತಹ್ಲಿಯಾ ಮೆಕಾಗ್ರಾತ್, ಚಾಮರಿ ಅಟಪಟ್ಟು, ಗ್ರೇಸ್ ಹ್ಯಾರಿಸ್ ಅವರಂತಹ ಅಂತಾರಾಷ್ಟ್ರೀಯ ಸ್ಟಾರ್ ಆಟಗಾರ್ತಿರಿದ್ದಾರೆ.

ದೀಪ್ತಿ ಶರ್ಮಾ ಯುಪಿ ವಾರಿಯರ್ಸ್ ಪರ 2 ಆವೃತ್ತಿಗಳಲ್ಲಿ 17 ಪಂದ್ಯಗಳನ್ನು ಆಡಿದ್ದಾರೆ. ಈ ಸಂದರ್ಭದಲ್ಲಿ ಅವರು 16 ಇನ್ನಿಂಗ್ಸ್‌ಗಳಲ್ಲಿ 38.50 ಸರಾಸರಿಯಲ್ಲಿ 385 ರನ್‌ ಗಳಿಸಿದ್ದಾರೆ. ಬ್ಯಾಟಿಂಗ್ ಮಾತ್ರವಲ್ಲದೆ, ದೀಪ್ತಿ ಬೌಲಿಂಗ್‌ನಲ್ಲಿಯೂ ಇಲ್ಲಿವರೆಗೆ 19 ವಿಕೆಟ್‌ಗಳನ್ನು ಪಡೆದಿದ್ದಾರೆ. ಈಗ ದೀಪ್ತಿ ನಾಯಕಿಯಾಗಿರುವುದರಿಂದ ಅವರ ತಂಡವು ಅವರಿಂದ ಇನ್ನಷ್ಟು ಉತ್ತಮ ಪ್ರದರ್ಶನವನ್ನು ನಿರೀಕ್ಷಿಸುತ್ತಿದೆ. ಕಳೆದು ಆವೃತ್ತಿ ದೀಪ್ತಿ 295 ರನ್ ಮತ್ತು 10 ವಿಕೆಟ್ ಪಡೆದಿದ್ದರು.

Story first published: Sunday, February 9, 2025, 17:13 [IST]
Other articles published on Feb 9, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+