Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2025 DC vs MI: ಅಗ್ರ ಸ್ಥಾನಕ್ಕಾಗಿ ಡೆಲ್ಲಿ, ಮುಂಬೈ ಫೈಟ್

ಮೂರನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನ 13ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಕಾದಾಟ ನಡೆಸಲಿವೆ. ಉಭಯ ತಂಡಗಳಲ್ಲಿ ಸ್ಟಾರ್ ಆಟಗಾರರು ಇದ್ದು ರೋಚಕತೆ ಹೆಚ್ಚಿಸಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆಯಲಿವೆ. ಹ್ಯಾಟ್ರಿಕ್‌ ಗೆಲುವಿನ ನಗೆ ಬೀರಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಶಾಕ್ ನೀಡಲು ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ಲ್ಯಾನ್ ಮಾಡಿಕೊಂಡಿದೆ.

ಉಭಯ ತಂಡಗಳು ಈಗಾಗಲೇ ಲೀಗ್‌ನಲ್ಲಿ ಒಟ್ಟಾರೆ 6 ಬಾರಿ ಮುಖಾಮುಖಿ ಆಗಿವೆ. ಈ ವೇಳೆ ಉಭಯ ತಂಡಗಳು ತಲಾ ಮೂರು ಪಂದ್ಯಗಳಲ್ಲಿ ಜಯ ದಾಖಲಿಸಿವೆ. ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 2 ವಿಕೆಟ್‌ಗಳಿಂದ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ 164 ರನ್‌ಗಳಿಗೆ ಆಲೌಟ್‌ ಆಯಿತು. ಡಈ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 165 ರನ್‌ ಸಾಧಿಸಿ ಜಯ ಸಾಧಿಸಿತು. ಉಭಯ ತಂಡಗಳು ತಲಾ ಮೂರು ಜಯ ಸಾಧಿಸಿದ್ದು, 6 ಅಂಕಗಳನ್ನು ಕಲೆ ಹಾಕಿವೆ. ಶುಕ್ರವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆಯುವ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡ ಅಗ್ರ ಸ್ಥಾನಕ್ಕೆ ಬಡ್ತಿ ಪಡೆಯುತ್ತದೆ.

WPL 2025 Delhi Capitals and Mumbai Indians Battle for the Top Spot

ಸ್ಟಾರ್ ಬ್ಯಾಟರ್‌ಗಳ ಬಲ

ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಸ್ಟಾರ್ ಬ್ಯಾಟರ್‌ಗಳು ಇದ್ದಾರೆ. ಆರಂಭಿಕರಾಗಿ ಕಣಕ್ಕೆ ಇಳಿಯುವ ಶಫಾಲಿ ವರ್ಮಾ, ಮೆಗ್‌ ಲ್ಯಾನಿಂಗ್ ಮೇಲೆ ಎಲ್ಲರ ಚಿತ್ತ ನೆಟ್ಟಿರಲಿದೆ. ಇವರು ತಂಡದ ಪರ ಗರಿಷ್ಠ ರನ್‌ ಕಲೆ ಹಾಕಿರುವ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರು ಈ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡುವ ಅವಶ್ಯಕತೆ ಇದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಜೇಮಿಮಾ ರೋಡ್ರಿಗಸ್‌ ಅವರ ಮೇಲೆ ದೊಡ್ಡ ಜವಾಬ್ದಾರಿಯನ್ನು ಹೊರಿಸಲಾಗಿದೆ. ಉಳಿದ ಬ್ಯಾಟರ್‌ಗಳು ಪರಿಸ್ಥಿತಿಗೆ ತಕ್ಕನಾದ ಆಟವನ್ನು ಆಡುವ ಅನಿವಾರ್ಯತೆ ಇದೆ.

ಬೌಲಿಂಗ್‌ ವಿಭಾಗದಲ್ಲಿ ಅನ್ನಾಬೆಲ್ ಸದರ್ಲ್ಯಾಂಡ್ ಹಾಗೂ ಜೆಸ್ ಜೊನಾಸೆನ್ ಎದುರಾಳಿ ಬ್ಯಾಟರ್‌ಗಳ ರಣ ತಂತ್ರವನ್ನು ಮೆಟ್ಟಿನಿಂತು ಬ್ಯಾಟ್ ಮಾಡಬಹುದು. ಇನ್ನು ಇವರಿಗೆ ಶಿಖಾ ಪಾಂಡ್ಯ ಉತ್ತಮ ಸಾಥ್ ನೀಡಬೇಕು. ಉಳಿದಂತೆ ಮಿಡ್ಲ್ ಓವರ್‌ಗಳಲ್ಲಿ ಬಿಗುವಿನ ದಾಳಿ ಸಂಘಟಿಸಿದರೆ ಗೆಲುವಿನ ಆಸೆ ಚಿಗುರುತ್ತದೆ.

WPL 2025 Delhi Capitals and Mumbai Indians Battle for the Top Spot

ಬ್ರಂಟ್ ಆಕರ್ಷಣೆ

ಬುಧವಾರ ಯುಪಿ ವಾರಿಯರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ನ್ಯಾಟ್‌ ಸ್ಕೀವರ್ ಬ್ರಂಟ್‌ ಅವರ ಮೇಲೆ ನಿರೀಕ್ಷೆಗಳು ಹೆಚ್ಚಿವೆ. ಹ್ಯಾಲಿ ಮ್ಯಾಥ್ಯೂಸ್‌ ಹಾಗೂ ಹರ್ಮನ್ ಪ್ರೀತ್ ಕೌರ್‌ ತಮ್ಮ ಮೇಲೆ ಮ್ಯಾನೇಜ್ಮೆಂಟ್ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಬೇಕಿದೆ. ಇನ್ನು ಬೌಲಿಂಗ್‌ ವಿಭಾಗದಲ್ಲೂ ತಮ್ಮ ಪ್ರಭಾವ ಬೀರಿರುವ ಬ್ರಂಟ್ ಹಾಗೂ ಮ್ಯಾಥ್ಯೂಸ್‌ಗೆ ಅಮೇಲಿಯಾ ಕೆರ್, ಜಿಂಟಿಮಣಿ ಕಲಿತಾ ಸಾಥ್‌ ನೀಡಬೇಕಿದೆ. ಅಂದಾಗ ಅಗ್ರ ಸ್ಥಾನದ ಆಸೆ ಫಲಿಸುತ್ತದೆ.

Story first published: Friday, February 28, 2025, 8:22 [IST]
Other articles published on Feb 28, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+