ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವನಿತೆಯರು ಯುಪಿ ವಾರಿಯರ್ಸ್ ತಂಡವನ್ನು ಸೋಲಿಸಿದರು. ಮಿಂಚಿನ ಬ್ಯಾಟಿಂಗ್ ಪ್ರದರ್ಶನ ಮಾಡಿದ ಡೆಲ್ಲಿ ನಾಯಕಿ ಮೆಗ್ ಲ್ಯಾನಿಂಗ್ ಅಬ್ಬರದ ಅರ್ಧಶತಕ ಸಿಡಿಸಿ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಬೌಲಿಂಗ್ ಆಯ್ಕೆ ಮಾಡಿಕೊಂಡು ಯುಪಿ ವಾರಿಯರ್ಸ್ ಅನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಮೊದಲು ಬ್ಯಾಟಿಂಗ್‌ಗೆ ಇಳಿದ ಯುಪಿ ವಾರಿಯರ್ಸ್ ತಂಡ 7 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿ, ಡೆಲ್ಲಿಗೆ 167 ರನ್‌ಗಳ ಟಾರ್ಗೆಟ್ ನೀಡಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಕೇವಲ ಒಂದು ಎಸೆತ ಬಾಕಿ ಇರುವಾಗಲೇ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಡೆಲ್ಲಿ ಪರ ನಾಯಕಿ ಮೆಗ್ ಲ್ಯಾನಿಂಗ್ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದರು. ಯುಪಿ ಬೌಲರ್ಸ್ ಬೆವರಿಳಿಸದ ಮೆಗಾ ಲ್ಯಾನಿಂಗ್ ಅರ್ಧಶತಕ ಪೂರೈಸುವಲ್ಲಿ ಯಶಸ್ವಿಯಾದರು. ಅವರು 49 ಎಸೆತಗಳಲ್ಲಿ 12 ಬೌಂಡರಿ ಬಾರಿಸುವ ಮೂಲಕ 69 ರನ್ ಗಳಿಸಿದರು. ಈ ಸಂದರ್ಭಲ್ಲಿ ಲ್ಯಾನಿಂಗ್ ಮತ್ತು ಶೆಫಾಲಿ ವರ್ಮಾ 42 ಎಸೆತಗಳಲ್ಲಿ 65 ರನ್‌ಗಳ ಜೊತೆಯಾಟವಾಡಿದರು. ಈ ಜೊತೆಯಾಟ ತಂಡದ ಗೆಲುವಿಗೆ ಅಡಿಪಾಯವಾಯಿತು. ಕೊನೆಯಲ್ಲಿ ಸದರ್ಲ್ಯಾಂಡ್ 35 ಎಸೆತಗಳಲ್ಲಿ 42 ರನ್ ಬಾರಿಸಿದರೆ, ಕಾಪ್ ಅಜೇಯ 29 ರನ್ ಗಳಿಸಿ ತಂಡಕ್ಕೆ ಗೆಲುವು ತಂದು ಕೊಟ್ಟರು.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಯುಪಿ ವಾರಿಯರ್ಸ್ ಪರ ಕಿರಣ್ ನವ್ಗಿರೆ ಬಿರುಸಿನ ಅರ್ಧಶತಕ ಸಿಡಿಸಿದರು. ಅವರು 27 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 51 ರನ್ ಗಳಿಸಿ ಎಲ್ಲರ ಚಿತ್ತ ಕದ್ದರು. ಮತ್ತೊಂದೆಡೆ ದಿನೇಶ್ ವೃಂದ 16 ರನ್ ಕಲೆ ಹಾಕಿದರೆ, ನಾಯಕಿ ದೀಪ್ತಿ ಶರ್ಮಾ ಕೇವಲ 7 ರನ್ ಗಳಿಸಿ ಔಟಾದರು. ಅಂತಿಮ ಓವರ್‌ಗಳಲ್ಲಿ ಶ್ವೇತಾ ಸೆಹ್ರಾವತ್ 37 ಹಾಗೂ ಚಿನೆಲ್ಲೆ ಹೆನ್ರಿ 33 ರನ್ ಗಳಿಸಿ ಯುಪಿ ತಂಡದ ಮೊತ್ತವನ್ನು 166 ಕ್ಕೇರಿಸಿದರು.
ಯುಪಿ ವಾರಿಯರ್ಸ್: ಕಿರಣ್ ನವಗಿರೆ , ವೃಂದಾ ದಿನೇಶ್ , ಉಮಾ ಚೆಟ್ರಿ (ವಿಕೆಟ್‌ಕೀಪರ್) , ದೀಪ್ತಿ ಶರ್ಮಾ (ನಾಯಕಿ) , ತಹ್ಲಿಯಾ ಮೆಗ್ರಾತ್ , ಗ್ರೇಸ್ ಹ್ಯಾರಿಸ್ , ಚಿನೆಲ್ಲೆ ಹೆನ್ರಿ , ಶ್ವೇತಾ ಸೆಹ್ರಾವತ್ , ಸೋಫಿ ಎಕ್ಲೆಸ್ಟೋನ್ , ಕ್ರಾಂತಿ ಗೌಡ್ , ರಾಜೇಶ್ವರಿ ಗಾಯಕ್ವಾಡ್.
ಡೆಲ್ಲಿ ಕ್ಯಾಪಿಟಲ್ಸ್: ಶಫಾಲಿ ವರ್ಮಾ , ಮೆಗ್ ಲ್ಯಾನಿಂಗ್ (c) , ಜೆಮಿಮಾ ರಾಡ್ರಿಗಸ್ , ಮರಿಝನ್ನೆ ಕಪ್ , ಅನ್ನಾಬೆಲ್ ಸದರ್ಲ್ಯಾಂಡ್ , ನಿಕಿ ಪ್ರಸಾದ್ , ಸಾರಾ ಬ್ರೈಸ್ ( wk ) , ಜೆಸ್ ಜೊನಾಸೆನ್ , ಶಿಖಾ ಪಾಂಡೆ , ಅರುಂಧತಿ ರೆಡ್ಡಿ , ಮಿನ್ನು ಮಣಿ.