For Quick Alerts
ALLOW NOTIFICATIONS  
For Daily Alerts
 

WPL 2025: RCB ಹಿಂದಿಕ್ಕಿ ಅಗ್ರ ಸ್ಥಾನಕ್ಕೆ ಬಡ್ತಿ ಪಡೆದ ಡೆಲ್ಲಿ

ಸತತ ಎರಡೂ ಪಂದ್ಯಗಳಲ್ಲಿ ಸೋತರೂ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದ ಆರ್‌ಸಿಬಿಗೆ ಮಂಗಳವಾರ ಶಾಕ್‌ ಕಾದಿದೆ. ಮಹಿಳಾ ಪ್ರೀಮಿಯರ್‌ ಲೀಗ್‌ನ 9ನೇ ಪಂದ್ಯದಲ್ಲಿ ಸಂಘಟಿ ಆಟದ ಪ್ರದರ್ಶನ ನೀಡಿದ ಡೆಲ್ಲಿ ಕ್ಯಾಪಿಟಲ್ಸ್‌ ಜಯದ ನಗೆ ಬೀರಿದೆ. ಗುಜರಾತ್‌ ಜೈಂಟ್ಸ್‌ ಟೂರ್ನಿಯಲ್ಲಿ ಸತತ ಎರಡನೇ ಸೋಲು ಕಂಡಿದೆ. ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್‌ ಮೂರನೇ ಗೆಲುವಿನ ನಗೆ ಬೀರಿದ್ದು 6 ಅಂಕಗಳನ್ನು ಕಲೆ ಹಾಕಿ, ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆದಿದೆ. ಆರ್‌ಸಿಬಿ ಎರಡನೇ ಸ್ಥಾನಕ್ಕೆ ಕುಸಿದಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್)ನ 10ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ 8 ವಿಕೆಟ್‌ಗಳಿಂದ ಸೋಲಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ ಕೇವಲ 127 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಇನ್ನು 29 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್ ಕಳೆದುಕೊಂಡು ಗೆಲುವಿನ ಕೇಕೆ ಹಾಕಿತು.

WPL 2025 Delhi Capitals won by 6 wickets against Gujarat Giants

ಡೆಲ್ಲಿ ಪರ ಶಫಾಲಿ ವರ್ಮಾ ಮತ್ತು ಜೆಸ್ ಜೊನಾಸ್ಸೆನ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಸ್ಪೋಟಕ ಬ್ಯಾಟಿಂಗ್ ಮಾಡಿದ ಜೆಸ್ ಜೊನಾಸ್ಸೆನ್ 32 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ‌ ಅಜೇಯ 61 ಬಾರಿಸಿದರು. ಶಫಾಲಿ ವರ್ಮಾ ಕೂಡ 27 ಎಸೆತಗಳಲ್ಲಿ 3 ಸಿಕ್ಸರ್‌, 5 ಬೌಂಡರಿಗಳ ನೆರವಿನಿಂದ ಬಿರುಸಿನ 44 ರನ್ ಗಳಿಸುವ‌ ಮೂಲಕ ಡೆಲ್ಲಿ ತಂಡಕ್ಕೆ ಗೆಲುವು ತಂದು ಕೊಟ್ಟರು.

ಗುಜರಾತ್ ಪರ ಕಾಶ್ವೀ ಗೌತಮ್ 2 ವಿಕೆಟ್‌ ಕಬಳಿಸಿದರು. ತನುಜಾ ಕನ್ವರ್ ಹಾಗೂ ಆಶ್ಲೀ ಗಾರ್ಡ್ನರ್ ತಲಾ 1 ವಿಕೆಟ್‌ ಉರುಳಿಸಿದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಪರ ಭಾರತಿ ಫುಲ್ಮಾಲಿ ಜವಾಬ್ದಾರಿಯುತ ಆಟವಾಡಿದರು. ಅವರು 29 ಎಸೆತಗಳಲ್ಲಿ 2 ಸಿಕ್ಸರ್‌ ಮತ್ತು 4 ಬೌಂಡರಿಗಳ ನೆರವಿನಿಂದ ಅಜೇಯ 40 ರನ್‌ ಗಳಿಸಿದರು. ಡಿಯಾಂಡ್ರಾ ಡಾಟಿನ್ 24 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 26 ರನ್‌, ತನುಜಾ ಕನ್ವರ್ 24 ಎಸೆತಗಳಲ್ಲಿ 16 ರನ್‌, ನಾಯಕಿ ಬೆತ್ ಮೂನಿ 11 ಎಸೆತಗಳಲ್ಲಿ 10 ರನ್‌ ಕಲೆ ಹಾಕಿ ತಂಡಕ್ಕೆ ಆಸರೆಯಾದರು.

ಡೆಲ್ಲಿ ಕ್ಯಾಪಿಟಲ್ಸ್ ಪರ ಶಿಖಾ ಪಾಂಡೆ, ಮರಿಜಾನ್ನೆ ಕಪ್, ಅನ್ನಾಬೆಲ್ ಸದರ್ಲ್ಯಾಂಡ್ ತಲಾ 2 ವಿಕೆಟ್‌ ಉರುಳಿಸಿ ಮಿಂಚಿದರೆ, ಟೈಟಾಸ್ ಸಾಧು ಮತ್ತು ಜೆಸ್ ಜೊನಾಸೆನ್ ತಲಾ ಒಂದೊಂದು ವಿಕೆಟ್‌ ಪಡೆದರು.

ಉಭಯ ತಂಡಗಳ ಪ್ಲೇಯಿಂಗ್-11

ಡೆಲ್ಲಿ ಕ್ಯಾಪಿಟಲ್ಸ್‌: ಶಫಾಲಿ ವರ್ಮಾ, ಮೆಗ್ ಲ್ಯಾನಿಂಗ್ (ನಾಯಕಿ), ಜೆಮಿಮಾ ರೋಡ್ರಿಗಸ್, ಮರಿಝನ್ನೆ ಕಪ್, ಅನ್ನಾಬೆಲ್ ಸದರ್ಲ್ಯಾಂಡ್, ಜೆಸ್ ಜೊನಾಸೆನ್, ಸಾರಾ ಬ್ರೈಸ್ (ವಿಕೆಟ್‌ಕೀಪರ್), ನಿಕಿ ಪ್ರಸಾದ್, ಶಿಖಾ ಪಾಂಡೆ, ಮಿನ್ನು ಮಣಿ, ಟಿಟಾಸ್ ಸಾಧು.

ಗುಜರಾತ್ ಜೈಂಟ್ಸ್: ಬೆತ್ ಮೂನಿ (ವಿಕೆಟ್‌ಕೀಪರ್), ಹರ್ಲೀನ್ ಡಿಯೋಲ್, ಫೋಬೆ ಲಿಚ್‌ಫೀಲ್ಡ್, ಆಶ್ಲೀಗ್ ಗಾರ್ಡ್ನರ್ (ನಾಯಕಿ), ಡಿಯಾಂಡ್ರಾ ಡಾಟಿನ್, ಸಿಮ್ರಾನ್ ಶೇಖ್, ತನುಜಾ ಕನ್ವರ್, ಭಾರತಿ ಫುಲ್ಮಾಲಿ, ಕಾಶ್ವೀ ಗೌತಮ್, ಮೇಘನಾ ಸಿಂಗ್, ಪ್ರಿಯಾ ಮಿಶ್ರಾ.

Story first published: Tuesday, February 25, 2025, 23:34 [IST]
Other articles published on Feb 25, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+