WPL 2025: ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿ ಇದೆ? RCB ಆಟಗಾರ್ತಿಯರ ಪ್ರದರ್ಶನ ಹೇಗಿದೆ?
ಮೂರನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ರೋಚಕತೆ ಹುಟ್ಟಿಸಿದೆ. ಈಗಾಗಲೇ ಈ ಲೀಗ್ ಹಾಫ್ ವೇ ಮಾರ್ಕ್ ದಾಟಿ ಆಗಿದೆ. ಈಗ ಎಲ್ಲ ತಂಡಗಳು ಪ್ಲೇ ಆಫ್ ಮೇಲೆ ತಮ್ಮ ಚಿತ್ತವನ್ನು ನೆಟ್ಟಿವೆ. ಈ ಮೆಗಾ ಲೀಗ್‌ನಲ್ಲಿ ಆರ್‌ಸಿಬಿ ತಂಡ ಸಹ ಆಡುತ್ತಿದ್ದು, ಆರಂಭದಲ್ಲಿ ಸ್ಥಿರ ಪ್ರದರ್ಶನವನ್ನು ನೀಡಿ, ತವರಿನಲ್ಲಿ ಸಾಲು ಸಾಲು ಸೋಲುಗಳನ್ನು ಕಂಡಿದೆ. ಈಗ ಆರ್‌ಸಿಬಿ ಗೆಲುವೊಂದೆ ಟಾರ್ಗೆಟ್ ಆಗಿರಲಿದೆ. ಈ ಸಮಯದಲ್ಲಿ ಪಾಯಿಂಟ್ಸ್ ಟೇಬಲ್‌ನಲ್ಲಿ ಯಾರು ಅಗ್ರ ಸ್ಥಾನದಲ್ಲಿದ್ದಾರೆ? ಪರ್ಪಲ್, ಆರೆಂಜ್ ಕ್ಯಾಪ್ ಯಾರ ಬಳಿ ಇದೆ ಎಂಬ ಬಗ್ಗೆ ವರದಿ ಇಲ್ಲಿದೆ.
ಪ್ರಸಕ್ತ ಲೀಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಡೆಲ್ಲಿ ಕ್ಯಾಪಿಟಲ್ಸ್ ಆಡಿರುವ ಏಳು ಪಂದ್ಯಗಳಲ್ಲಿ 5 ಜಯ ಹಾಗೂ 2 ಸೋಲು ಕಂಡಿದ್ದು, 10 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದೆ. ಅಲ್ಲದೆ ಈ ತಂಡ ಈಗಾಗಲೇ ಪ್ಲೇ ಆಫ್‌ಗೆ ಕ್ವಾಲಿಫೈ ಆಗಿದೆ. ಗುಜರಾತ್ ಜೈಂಟ್ಸ್ ಹಾಗೂ ಮುಂಬೈ ತಂಡಗಳು ಮೂರು ಗೆಲುವುಗಳೊಂದಿಗೆ 6 ಅಂಕ ಕಲೆ ಹಾಕಿದ್ದು, ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ. ನಾಲ್ಕನೇ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವಿದೆ. ಈ ತಂಡ 4 ಅಂಕಗಳನ್ನು ಕಲೆ ಹಾಕಿದೆ. ಯುಪಿ ವಾರಿಯರ್ಸ್ ಸಹ ಇಷ್ಟೇ ಅಂಕಗಳನ್ನು ಕಲೆ ಹಾಕಿದ್ದು ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಪೆರ್ರಿ ಅಬ್ಬರ
ಪ್ರಸಕ್ತ ಲೀಗ್‌ನಲ್ಲಿ ಆರ್‌ಸಿಬಿ ತಂಡದ ಬ್ಯಾಟಿಂಗ್ ಶಕ್ತಿಯಾಗಿರುವ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಎಲ್ಲಿಸ್ ಪೆರ್ರಿ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇವರು ಆಡಿರುವ 6 ಪಂದ್ಯಗಳಲ್ಲಿ 4 ಅರ್ಧಶತಕಗಳನ್ನು ಒಳಗೊಂಡಂತೆ 295 ರನ್ ಸೇರಿಸಿದ್ದಾರೆ. ಈ ವೇಳೆ 90 ರನ್ ಗರಿಷ್ಠ ರನ್ ಆಗಿದೆ. ಅಲ್ಲದೆ ಇವರ ಸ್ಟ್ರೈಕ್ ರೇಟ್ 149 ಆಗಿದೆ.
ಆರೆಂಜ್ ಕ್ಯಾಪ್ ರೇಸ್‌ನಲ್ಲಿರುವ ಆಟಗಾರ್ತಿಯರು
ಎಲ್ಲಿಸ್ ಪೆರ್ರಿ, ಆರ್‌ಸಿಬಿ, 6 ಪಂದ್ಯ, 295 ರನ್
ನ್ಯಾಟ್ ಸ್ಕಿವರ್ ಬ್ರಂಟ್, ಮುಂಬೈ, 5 ಪಂದ್ಯ, 272 ರನ್
ಶೆಫಾಲಿ ವರ್ಮಾ, ಡೆಲ್ಲಿ, 7 ಪಂದ್ಯ, 260 ರನ್
ಆಶ್ಲೀ ಗಾರ್ಡ್ನರ್, ಗುಜರಾತ್, 6 ಪಂದ್ಯ, 213 ರನ್
ಬೆತ್ ಮೂನಿ, ಗುಜರಾತ್, 6 ಪಂದ್ಯ, 180 ರನ್

ರೇಣುಕಾ ಬಳಿ ಇದೆ ಪರ್ಪಲ್ ಕ್ಯಾಪ್
ಆರ್‌ಸಿಬಿ ತಂಡದ ಅನುಭವಿ ವೇಗದ ಬೌಲರ್ ರೇಣುಕಾ ಸಿಂಗ್ ಅವರು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇವರು 6 ಪಂದ್ಯಗಳನ್ನು ಆಡಿದ್ದು 7.12 ಎಕನಾಮಿಯೊಂದಿಗೆ 10 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೂರು ವಿಕೆಟ್ ಕಬಳಿಸಿದ ಹೆಗ್ಗಳಿಕೆ ಹೊಂದಿದ್ದಾರೆ.
ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಯಾರು?
ರೇಣುಕಾ ಸಿಂಗ್, ಆರ್‌ಸಿಬಿ, 6 ಪಂದ್ಯ, 10 ವಿಕೆಟ್
ಕಾಶ್ವೀ ಗೌತಮ್, ಗುಜರಾತ್, 6 ಪಂದ್ಯ, 9 ವಿಕೆಟ್
ಜೆಸ್ ಜೊನಾಸೆನ್, ಡೆಲ್ಲಿ, 6 ಪಂದ್ಯ, 9 ವಿಕೆಟ್
ಶಿಖಾ ಪಾಂಡೆ, ಡೆಲ್ಲಿ, 6 ಪಂದ್ಯ, 9 ವಿಕೆಟ್
ಜಾರ್ಜಿಯಾ ವೇರ್ಹ್ಯಾಮ್, ಆರ್‌ಸಿಬಿ, 6 ಪಂದ್ಯ, 9 ವಿಕೆಟ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications