For Quick Alerts
ALLOW NOTIFICATIONS  
For Daily Alerts
 

WPL 2025 Final: ಪ್ರಶಸ್ತಿಗಾಗಿ ಮುಂಬೈ, ಡೆಲ್ಲಿ ಫೈಟ್‌

ಮಹಿಳಾ ಪ್ರೀಮಿಯರ್‌ ಲೀಗ್‌ ಕೊನೆಯ ಹಂತಕ್ಕೆ ಬಂದು ನಿಂತಿದೆ. ಈ ಲೀಗ್‌ನ ಫೈನಲ್‌ ಪಂದ್ಯ ಇಂದು ಮುಂಬೈನಲ್ಲಿ ನಡೆಯಲಿದೆ. ಈ ಪ್ರತಿಷ್ಠಿತ ಪ್ರಶಸ್ತಿಗಾಗಿ ಮುಂಬೈ ಇಂಡಿಯನ್ಸ್‌ ಹಾಗೂ ಕೋಲ್ಕತ್ತಾ ನೈಟ್‌ ರೈಡರ್ಸ್ ತಂಡಗಳು ಕಾದಾಟ ನಡೆಸಲಿವೆ. ಈಗಾಗಲೇ ಒಮ್ಮೆ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿರುವ ಮುಂಬೈ, ಎರಡನೇ ಬಾರಿಗೆ ಪ್ರಶಸ್ತಿ ಎತ್ತುವ ಕನಸು ಕಾಣುತ್ತಿದೆ. ಇನ್ನು ಡೆಲ್ಲಿ ಕಪ್‌ಗೆ ಮುತ್ತಿಡುವ ಇರಾದೆಯನ್ನು ಹೊಂದಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಡಿದ 8 ಪಂದ್ಯಗಳಲ್ಲಿ 5 ಗೆಲುವು ದಾಖಲಿಸಿ 10 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದೊಂದಿಗೆ ಫೈನಲ್‌ಗೆ ಪ್ರವೇಶಿಸಿತ್ತು. ಮುಂಬೈ ಸಹ ಇಷ್ಟೇ ಅಂಕ ಕಲೆ ಹಾಕಿದ್ರೂ ಸಹ ರನ್‌ ರೇಟ್‌ ವಿಚಾರದಲ್ಲಿ ಹಿಂದೆ ಇದ್ದಿದ್ದರಿಂದ ಎಲಿಮಿನೇಟರ್‌ನಲ್ಲಿ ಗುಜರಾತ್‌ ಜೈಂಟ್ಸ್ ತಂಡವನ್ನು ಎದುರಿಸಿತು. ಎಲಿಮಿನೇಟರ್‌ ಪಂದ್ಯದಲ್ಲಿ 47 ರನ್‌ಗಳಿಂದ ಗುಜರಾತ್ ತಂಡವನ್ನು ಮಣಿಸಿದ ಮುಂಬೈ ಫೈನಲ್‌ಗೆ ಪ್ರವೇಶವನ್ನು ಪಡೆದಿದೆ.

WPL 2025 Final Mumbai Indians and Delhi Capitals Face Off for Glory

ಸತತ ಮೂರನೇ ಬಾರಿಗೆ ಫೈನಲ್‌ ಆಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್‌, ಒಮ್ಮೆಯೂ ಪ್ರಶಸ್ತಿಯನ್ನು ಗೆದ್ದಿಲ್ಲ. ಮೊದಲ ಆವೃತ್ತಿಯಲ್ಲಿ 7 ವಿಕೆಟ್‌ಗಳಿಂದ ಮುಂಬೈ ವಿರುದ್ಧ ಸೋತಿದ್ರೆ, ಎರಡನೇ ಆವೃತ್ತಿಯಲ್ಲಿ 8 ವಿಕೆಟ್‌ಗಳಿಂದ ಆರ್‌ಸಿಬಿ ವಿರುದ್ಧ ನಿರಾಸೆ ಅನುಭವಿಸಿತ್ತು. ಹೀಗಾಗಿ ಮೂರನೇ ಪ್ರಯತ್ನದಲ್ಲಿ ಯಶ ಸಾಧಿಸಿ ಇತಿಹಾಸ ನಿರ್ಮಿಸುವ ಕನಸನ್ನು ಡೆಲ್ಲಿ ಕ್ಯಾಪಿಟಲ್ಸ್‌ ಹೊಂದಿದೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಉಭಯ ತಂಡಗಳು ಬಲಿಷ್ಠವಾಗಿವೆ. ಅಲ್ಲದೆ ಎರಡೂ ತಂಡದಲ್ಲೂ ಸ್ಟಾರ್‌ ಆಟಗಾರ್ತಿಯರು ಇದ್ದು ಪಂದ್ಯ ರೋಚಕತೆ ಹೆಚ್ಚಿಸಿದೆ.


ಯಾರಿಗೆ ನೆರವು?

ಮುಂಬೈನ ಬ್ರಬೋರ್ನ್ ಕ್ರೀಡಾಂಗಣದ ಪಿಚ್ ಬ್ಯಾಟ್ಸ್‌ಮನ್‌ ಅನುಕೂಲವಾಗಿದೆ. ಈ ಮೈದಾನದಲ್ಲಿ ಬ್ಯಾಟ್ ಮಾಡಲು ಬ್ಯಾಟರ್‌ಗಳು ಆನಂದಿಸುತ್ತಾರೆ. ಫೈನಲ್‌ ಪಂದ್ಯದ ವೇಳೆಯೂ ಇದನ್ನು ನಾವು ಕಾಣಬಹುದು. ಇನ್ನು ಸ್ಪಿನ್ ಬೌಲರ್‌ಗಳಿಗೂ ಈ ಪಿಚ್‌ ಕೊಂಚ ಸಹಾಯ ಮಾಡಲಿದೆ. ಟಾಸ್‌ ಮಹತ್ವದ ಪಾತ್ರವನ್ನು ವಹಿಸುತ್ತದೆ.

ಇತಿಹಾಸದ ಕನಸು

ಮುಂಬೈ ಇಂಡಿಯನ್ಸ್‌ ತಂಡಕ್ಕೆ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಬಲ ತುಂಬಿರುವ ನ್ಯಾಟ್‌ ಸ್ಕಿವರ್ ಬ್ರಂಟ್‌, ಇತಿಹಾಸ ನಿರ್ಮಿಸುವ ಕನಸಿನಲ್ಲಿದ್ದಾರೆ. ಇವರು ಫೈನಲ್‌ ಪಂದ್ಯದಲ್ಲಿ ಮೂರು ರನ್‌ ಸಿಡಿಸಿದರೆ, ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ 1000 ರನ್‌ ಕಲೆ ಹಾಕಿದ ದಾಖಲೆಯನ್ನು ಬರೆಯಲಿದ್ದಾರೆ. ಇನ್ನು ಇದೇ ದಾಖಲೆಯನ್ನು ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಮೆಗ್‌ ಲ್ಯಾನಿಂಗ್ ಮಾಡುವ ಇರಾದೆಯನ್ನು ಹೊಂದಿದ್ದಾರೆ. ಇವರು 61 ರನ್‌ ಸಿಡಿಸಿದರೆ, ಈ ಸಾಧನೆ ಮಾಡಬಹುದು. ಈ ಸಾಧನೆಯನ್ನು ಯಾರು ಮೊದಲು ಮಾಡುತ್ತಾರೆ ಎಂಬ ಕುತೂಹಲ ಹೆಚ್ಚಿದೆ.

ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡ: ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಜೆಸ್ ಜೊನಾಸೆನ್, ಜೆಮಿಮಾ ರೊಡ್ರಿಗಸ್, ಅನ್ನಾಬೆಲ್ ಸದರ್ಲ್ಯಾಂಡ್, ಮರಿಜಾನ್ನೆ ಕಪ್, ಸಾರಾ ಬ್ರೈಸ್, ನಿಕಿ ಪ್ರಸಾದ್, ಮಿನ್ನು ಮಣಿ, ಶಿಖಾ ಪಾಂಡೆ, ಟೈಟಾಸ್ ಸಾಧು, ರಾಧಾ ಯಾದವ್, ಅರುಂಧತಿ ರೆಡ್ಡಿ, ಆಲಿಸ್ ಕ್ಯಾಪ್ಸಿ, ತಾನಿಯಾ ಭಾಟಿಯಾ, ಸ್ನೇಹ ದೀಪ್ತಿ, ನಂದಿನಿ ಕಶ್ಯಪ್, ನಲ್ಲಪುರರೆಡ್ಡಿ ಚರಣಿ.

ಮುಂಬೈ ಇಂಡಿಯನ್ಸ್ ಮಹಿಳಾ ತಂಡ: ಯಸ್ತಿಕಾ ಭಾಟಿಯಾ, ಹೇಲಿ ಮ್ಯಾಥ್ಯೂಸ್, ನ್ಯಾಟ್ ಸ್ಕಿವರ್-ಬ್ರಂಟ್, ಹರ್ಮನ್ಪ್ರೀತ್ ಕೌರ್ (ನಾಯಕಿ), ಸಜೀವನ್ ಸಜ್ನಾ, ಅಮೇಲಿಯಾ ಕೆರ್, ಅಮನ್‌ಜೋತ್ ಕೌರ್, ಜಿ ಕಮಲಿನಿ, ಸಂಸ್ಕೃತಿ ಗುಪ್ತಾ, ಶಬ್ನಿಮ್ ಇಸ್ಮಾಯಿಲ್, ಸೈಕಾ ಇಶಾಕ್, ಕ್ಲೋಯ್ ಟ್ರಯಾನ್, ನಾಡಿನ್ ಡಿ ಕ್ಲರ್ಕ್, ಕೀರ್ತನ್ ಬಾಲಕೃಷ್ಣನ್, ಜಿಂಟಿಮಣಿ ಕಲಿತಾ, ಪರುಣಿಕಾ ಸಿಸೋಡಿಯಾ, ಅಮನ್‌ದೀಪ್ ಕೌರ್, ಅಕ್ಷಿತಾ ಮಹೇಶ್ವರಿ.

Story first published: Saturday, March 15, 2025, 13:02 [IST]
Other articles published on Mar 15, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+