Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2025: ಯುಪಿ ವಾರಿಯರ್ಸ್ ಮಣಿಸಿದ ಗುಜರಾತ್ ಜೈಂಟ್ಸ್

ವಡೋದರಾದಲ್ಲಿ ನಡೆದ ವುಮನ್ಸ್ ಪ್ರೀಮಿಯರ್ ಲೀಗ್‌ನ (ಡಬ್ಲ್ಯೂಪಿಎಲ್) 3ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡದ ವಿರುದ್ಧ ಗುಜರಾತ್ ಜೈಂಟ್ಸ್ 6 ವಿಕೆಟ್‌ಗಳ ಭರ್ಜರಿ ಜಯಗಳಿಸಿದೆ. ರೋಚಕ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ತಂಡ ಬೌಲಿಂಗ್ ಮಾಡಲಿ ನಿರ್ಧರಿಸಿತು. ಮೊದಲು ಬ್ಯಾಂಟಿಂಗ್‌ ಮಾಡಿದ ಯುಪಿ ವಾರಿಯರ್ಸ್ ತಂಡ 9 ವಿಕೆಟ್ ಕಳೆದುಕೊಂಡು 143 ರನ್ ಕಲೆ ಹಾಕಿತು. ಈ ಗುರಿ ಬೆನ್ನಟ್ಟಿದ ಗುಜರಾತ್ ತಂಡ 4 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿ ಗೆದ್ದು ಬೀಗಿತು.

ಗುಜರಾತ್ ಪರ ನಾಯಕಿ ಆಶ್ಲೀಗ್ ಗಾರ್ಡ್ನರ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಕೇವಲ 29 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಅವರು 32 ಎಸೆತಗಳಿಗೆ 5 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 52 ರನ್ ಗಳಿಸಿ ಅಬ್ಬರಿಸಿದರು. ಕೊನೆಯಲ್ಲಿ ಹರ್ಲಿನ್‌ ಡಿಯೋಲ್‌ (34), ಡಿಯಾಂಡ್ರ ಡಾಟಿನ್ (33) ಜವಾಬ್ದಾರಿಯುತ ಬ್ಯಾಟಿಂಗ್‌ನೊಂದಿಗೆ ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರು.

WPL 2025 Gujarat Giants win against UP Warriors

ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಯುಪಿ ವಾರಿಯರ್ಸ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ತಂಡದ ನಾಯಕಿ ದೀಪ್ತಿ ಶರ್ಮ ಬಿಗ್ ಸ್ಕೋರ್ ಕಲೆ ಹಾಕುವ ನಿರೀಕ್ಷೆ ತೋರಿದರು. ಆದರೆ, ಅವರು 27 ಎಸೆತಗಳಿಗೆ 6 ಬೌಂಡರಿ ಮೂಲಕ 39 ರನ್ ಗಳಿಸಿ ಔಟಾದರು. ಉಮಾ ಚೇಟ್ರಿ 27 ಎಸೆತಗಳಿಗೆ 4 ಬೌಂಡರಿ ನೆರವಿನಿಂದ 24 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಅಲಾನ ಕಿಂಗ್ 14 ಬಾಲ್‌ಗಳಿಗೆ ಅಜೇಯ 19 ರನ್‌ಗಳಿಸಿ ತಂಡಕ್ಕೆ ನೆರವಾದರು.

ಗುಜರಾತ್ ಪರ ಪ್ರಿಯಾ ಮಿಶ್ರಾ 3 ವಿಕೆಟ್ ಕಬಳಿಸಿ ಮಿಂಚಿದರೆ, ಆಶ್ಲೀಗ್ ಗಾರ್ಡ್ನರ್ ಮತ್ತು ಡಿಯಾಂಡ್ರಾ ಡಾಟಿನ್ ತಲಾ 2 ವಿಕೆಟ್ ಪಡೆದರು. ಕಾಶ್ವೀ ಗೌತಮ್ ಒಂದು ವಿಕೆಟ್ ಉರುಳಿಸಿದರು.

ಉಭಯ ತಂಡಗಳು

ಗುಜರಾತ್ ಜೈಂಟ್ಸ್: ಬೆತ್ ಮೂನಿ (ವಿಕೆಟ್‌ಕೀಪರ್), ಲಾರಾ ವೊಲ್ವಾರ್ಡ್ಟ್, ದಯಾಲನ್ ಹೇಮಲತಾ, ಆಶ್ಲೀಗ್ ಗಾರ್ಡ್ನರ್ (ನಾಯಕಿ), ಡಿಯಾಂಡ್ರಾ ಡಾಟಿನ್, ಸಿಮ್ರಾನ್ ಶೇಖ್, ಹರ್ಲೀನ್ ಡಿಯೋಲ್, ತನುಜಾ ಕನ್ವರ್, ಸಯಾಲಿ ಸತ್ಘರೆ, ಕಾಶ್ವೀ ಗೌತಮ್, ಪ್ರಿಯಾ ಮಿಶ್ರಾ.

ಯುಪಿ ವಾರಿಯರ್ಸ್: ಉಮಾ ಚೆಟ್ರಿ (ವಿಕೆಟ್‌ಕೀಪರ್), ವೃಂದಾ ದಿನೇಶ್, ಗ್ರೇಸ್ ಹ್ಯಾರಿಸ್, ದೀಪ್ತಿ ಶರ್ಮಾ (ನಾಯಕಿ), ತಹ್ಲಿಯಾ ಮೆಕ್‌ಗ್ರಾತ್, ಕಿರಣ್ ನವಗಿರೆ, ಶ್ವೇತಾ ಸೆಹ್ರಾವತ್, ಸೋಫಿ ಎಕ್ಲೆಸ್ಟೋನ್, ಅಲಾನಾ ಕಿಂಗ್, ಸೈಮಾ ಠಾಕೋರ್, ಕ್ರಾಂತಿ ಗೌಡ್.

Story first published: Sunday, February 16, 2025, 23:35 [IST]
Other articles published on Feb 16, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+