WPL 2025: ಯುಪಿ ಎದುರು ಗೆದ್ದು ಎರಡನೇ ಸ್ಥಾನಕ್ಕೇರಿದ ಗುಜರಾತ್
ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) 2025ರ 15ನೇ ಪಂದ್ಯ ಯುಪಿ ವಾರಿಯರ್ಸ್ ಮತ್ತು ಗುಜರಾತ್ ಜೈಂಟ್ಸ್ ಮಹಿಳಾ ತಂಡಗಳ ನಡುವೆ ನಡೆಯಿತು. ಈ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಗುಜರಾತ್ ಜೈಂಟ್ಸ್ ವನಿತೆಯರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಯುಪಿ ವಾರಿಯರ್ಸ್ ತಂಡವನ್ನು 81 ರನ್‌ಗಳ ಅಂತರದಿಂದ ಸೋಲಿಸುವ ಮೂಲಕ ಗುಜರಾತ್ ಜೈಂಟ್ಸ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ ಪರ ಬೆತ್ ಮೂನಿ ಅಬ್ಬರ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಬೆತ್ ಮೂನಿ ಅವರು 96 ರನ್‌ಗಳ ಇನ್ನಿಂಗ್ಸ್ ನೆರವನಿಂದ ಗುಜರಾತ್ ಜೈಂಟ್ಸ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು.

ಗುಜರಾತ್ ನೀಡಿದ 187 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್ ತಂಡ ಗುಜರಾತ್ ಜೈಂಟ್ಸ್ ಬೌಲಿಂಗ್ ದಾಳಿಗೆ ತತ್ತರಿಸಿತು. ಯುಪಿ ಕೇವಲ 17.1 ಓವರ್‌ಗಳಲ್ಲಿ 105 ರನ್‌ಗಳಿಗೆ ಸರ್ವಪತನವಾಯಿತು. ಇದರೊಂದಿಗೆ ಗುಜರಾತ್ 81 ರನ್‌ಗಳ ಅಮೋಘ ಗೆಲುವು ಸಾಧಿಸಿತು.
ಬೃಹತ್ ಮೊತ್ತ ಬೆನ್ನಟ್ಟಿದ ಯುಪಿ ವಾರಿಯರ್ಸ್ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಶುರುವಿನಲ್ಲೇ ಯುಪಿ ಪ್ರಮುಖ 2 ವಿಕೆಟ್ ಕಳೆದುಕೊಂಡಿತು. ಕಿರಣ್ ನವ್‌ಗಿರೆ ಮತ್ತು ಜಾರ್ಜಿಯಾ ವೋಲ್ ಶೂನ್ಯ ಔಟಾದರು. ಇದಾದ ಪವರ್‌ಪ್ಲೇನಲ್ಲಿ ಯುಪಿ ತಂಡ 50 ರನ್ ಗಳಿಸುವುದರೊಳಗೆ 4 ವಿಕೆಟ್ ಕಳೆದುಕೊಂಡಿತು. ಬಳಿಕ ಬಂದ ಚಿನೆಲ್ಲೆ ಹೆನ್ರಿ (28) ಮತ್ತು ಗ್ರೇಸ್ ಹ್ಯಾರಿಸ್ (25) ಯುಪಿ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಈ ಇಬ್ಬರನ್ನೂ ಹೊರೆತುಪಡಿಸಿ 7 ಮಂದಿ ಒಂದಿಂಕಿಗೆ ಔಟಾದರು. ಪರಿಣಾಮ ಸತತ ಎರಡನೇ ಸೋಲು ಕಂಡ ಯುಪಿ ಪ್ಲೇಆಫ್ ಹಾದಿ ಕಠಿಣವಾಗಿದೆ.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಗುಜರಾತ್ ಪರ ಬೆತ್ ಮೂನಿ ಮತ್ತು ಹರ್ಲೀನ್ ಡಿಯೋಲ್ ಎರಡನೇ ವಿಕೆಟ್‌ಗೆ ಶತಕದ ಜೊತೆಯಾಟ ಆಡಿದರು. ಹರ್ಲೀನ್ 45 ರನ್ ಗಳಿಸಿ ಔಟಾದರೆ, ಆಶ್ಲೀಗ್ ಗಾರ್ಡ್ನರ್ (11), ಡಿಯಾಂಡ್ರಾ ಡಾಟಿನ್ (17), ಫೀಬಿ ಲಿಚ್ ಫೀಲ್ಡ್ (8) ರನ್ ಸಿಡಿಸಿ ಔಟಾದರು. ಆದರೆ ಬಿರುಸಿನ ಬ್ಯಾಟಿಂಗ್ ಮಾಡಿದ ಬೆತ್ ಮೂನಿ 56 ಎಸೆತಗಳಲ್ಲಿ 17 ಬೌಂಡರಿಗಳ ನೆರವಿನಿಂದ ಅಜೇಯ 96 ರನ್ ಗಳಿಸಿ ತಂಡ ಬಿಗ್ ಸ್ಕೋರ್ ಕಲೆ ಹಾಕಲು ಸಹಾಯ ಮಾಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications