ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ() ವನಿತೆಯರ ತಂಡ ಹ್ಯಾಟ್ರಿಕ್ ಸೋಲು ಕಂಡಿದೆ. ಗುರುವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಗುಜರಾತ್ ಜೈಂಟ್ಸ್ 6 ವಿಕೆಟ್‌ಗಳ ಸುಲಭ ಗೆಲುವು ಸಾಧಿಸಿತು. ತವರಿನಲ್ಲಿ ಕಳೆದೆ ಎರಡು ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಆರ್‌ಸಿಬಿ ತಂಡ ಗುಜರಾತ್ ಜೈಂಟ್ಸ್ ಎದುರು ಮಂಕಾಯಿತು.
ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ನಾಯಕಿ ಆಶ್ಲೀಗ್ ಗಾರ್ಡ್ನರ್ ಬೌಲಿಂಗ್ ಮಾಡಲು ನಿರ್ಧರಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಕೇವಲ 125 ರನ್ ಕಲೆಹಾಕಿತು. 126 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಜೈಂಟ್ಸ್ ನಿಧಾನಗತಿಯ ಆರಂಭ ಪಡೆದರು ಗೆಲುವು ಕಂಡಿತು. ಕೇವಲ 16.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುಜರಾತ್ ಜೈಂಟ್ಸ್ ಗೆಲುವಿನ ಗುರಿ ತಲುಪಿತು.

ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ತಮ್ಮ ಹಳೆಯ ಖದರ್ ತೋರುವಲ್ಲಿ ವಿಫಲವಾದರು. 20 ಎಸೆತಗಳಲ್ಲಿ ಕೇವಲ 10 ರನ್ ಗಳಿಸಿ ಔಟಾದರು. ವ್ಯಾಟ್ ಹಾಡ್ಜ್ 4 ರನ್ ಗಳಿಸಿದರೆ, ಕಳೆದ ಎರಡು ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದ ಎಲ್ಲಿಸ್ ಪೆರ್‍ರಿ ರನ್ ಖಾತೆ ತೆರೆಯುವ ಮುನ್ನವೇ ವಿಕೆಟ್ ಕಳೆದುಕೊಂಡರು.
ರಾಘ್ವಿ ಬಿಸ್ಟ್ 22 ರನ್ ಗಳಿಸಿದರೆ, ಕನಿಕಾ ಅಹುಜಾ 33 ರನ್ ಗಳಿಸಿ ಆರ್‌ಸಿಬಿ ತಂಡಕ್ಕೆ ಆಸರೆಯಾದರು. ರಿಚಾ ಘೋಷ್ 9 ರನ್, ಜಾರ್ಜಿಯಾ ವೇರಂ 20 ರನ್, ಮತ್ತು ಕಿಮಾ ಗಾರ್ತ್ 14 ರನ್ ಗಳಿಸಿದರು. ಗುಜರಾತ್ ಪರ ತನುಜಾ ಕನ್ವರ್, ಡಿಯೇಂದ್ರ ಡಾಟಿನ್ ತಲಾ 2 ವಿಕೆಟ್ ಉರುಳಿಸಿದರೆ,ಆಶ್ಲೀಗ್ ಗಾರ್ಡ್ನರ್ ಮತ್ತು ಕಾಶ್ವೀ ಗೌತಮ್ ತಲಾ 1 ವಿಕೆಟ್ ಪಡೆದರು.
ಗುಜರಾತ್ ತಂಡಕ್ಕೆ ದಯಾಳ್ ಹೇಮಲತಾ (11) ಮತ್ತು ಬೆತ್ ಮೂನಿ (17) ಉತ್ತಮ ಆರಂಭ ನೀಡಲಿಲ್ಲ. ಬಳಿಕ ಹರ್ಲೀನ್ ಡಿಯೋಲ್ ಕೇವಲ 5 ರನ್ ಗಳಿಸಿ ಔಟಾದರು. ಇದಾದ ನಂತರ ಕ್ರೀಸ್‌ಗೆ ಬಂದ ನಾಯಕಿ ಆಶ್ಲೀಗ್ ಗಾರ್ಡ್ನರ್ 31 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 58 ರನ್ ಗಳಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಕೊನೆಯಲ್ಲಿ ಲಿಚ್‌ಫೀಲ್ಡ್ 21 ಎಸೆತಗಳಲ್ಲಿ ಅಜೇಯ 30 ರನ್ ಬಾರಿಸಿ ತಂಡಕ್ಕೆ ನೆರವಾದರು.
ಗುಜರಾತ್ ಜೈಂಟ್ಸ್: ಬೆತ್ ಮೂನಿ (ವಿಕೆಟ್‌ಕೀಪರ್), ಹರ್ಲೀನ್ ಡಿಯೋಲ್, ಫೋಬೆ ಲಿಚ್‌ಫೀಲ್ಡ್, ದಯಾಲನ್ ಹೇಮಲತಾ, ಆಶ್ಲೀಗ್ ಗಾರ್ಡ್ನರ್ (ನಾಯಕಿ), ಡಿಯಾಂಡ್ರಾ ಡಾಟಿನ್, ಕಾಶ್ವೀ ಗೌತಮ್, ಭಾರತಿ ಫುಲ್ಮಾಲಿ, ಮೇಘನಾ ಸಿಂಗ್, ತನುಜಾ ಕನ್ವರ್, ಪ್ರಿಯಾ ಮಿಶ್ರಾ
ಆರ್‌ಸಿಬಿ: ಸ್ಮೃತಿ ಮಂಧಾನ (ನಾಯಕಿ), ಡೇನಿಯಲ್ ವ್ಯಾಟ್-ಹಾಡ್ಜ್, ಎಲ್ಲಿಸ್ ಪೆರ್ರಿ, ರಿಚಾ ಘೋಷ್ (ವಿಕೆಟ್‌ಕೀಪರ್), ರಾಘ್ವಿ ಬಿಸ್ಟ್, ಕನಿಕಾ ಅಹುಜಾ, ಜಾರ್ಜಿಯಾ ವಾರೆಹಮ್, ಸ್ನೇಹ ರಾಣಾ, ಕಿಮ್ ಗಾರ್ತ್, ಪ್ರೇಮಾ ರಾವತ್, ರೇಣುಕಾ ಸಿಂಗ್ ಠಾಕೂರ್