Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2025 MI vs GG: ಮುಂಬೈಗೆ ಬಲಿಷ್ಠ ಗುಜರಾತ್ ಸವಾಲು

ಮಹಿಳಾ ಪ್ರೀಮಿಯರ್ ಲೀಗ್ ಕಾವು ದಿನೇ ದಿನೇ ಏರುತ್ತಿದೆ. ಸೋಮವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಪ್ರದರ್ಶನ ನೀಡಿ ಏಕಪಕ್ಷೀಯ ಜಯ ದಾಖಲಿಸಿದೆ. ಮಂಗಳವಾರ ಮೈದಾನದಲ್ಲಿ ಮಾಜಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ಹಾಗೂ ಆತಿಥೇಯ ಗುಜರಾತ್ ಜೈಂಟ್ಸ್ ತಂಡಗಳು ಕಾದಾಟ ನಡೆಸಲಿವೆ. ಗುಜರಾತ್ ಗೆಲುವಿನ ಟ್ರ್ಯಾಕ್‌ಗೆ ಮರಳುವ ಕನಸು ಕಾಣುತ್ತಿದ್ದರೆ, ಹರ್ಮನ್ ಪ್ರೀತ್‌ ಪಡೆ ಮೊದಲ ಗೆಲುವಿನ ಲೆಕ್ಕಾಚಾರವನ್ನು ಹಾಕಿಕೊಂಡಿದೆ. ಸ್ಟಾರ್ ಆಟಗಾರ್ತಿಯರು ಉಭಯ ತಂಡದಲ್ಲಿದ್ದು, ರೋಚಕತೆ ಮನೆ ಮಾಡಿದೆ.

ವಡೋಧರಾದಲ್ಲಿ ನಡೆಯುವ ಗುಜರಾತ್, ಮುಂಬೈ ಪಂದ್ಯದಲ್ಲಿ ಎಲ್ಲರ ಚಿತ್ತ ಟಾಸ್‌ ಮೇಲೆ ನೆಟ್ಟಿರಲಿದೆ. ಈ ಅಂಗಳದಲ್ಲಿ ಈಗಾಗಲೇ ನಾಲ್ಕು ಪಂದ್ಯಗಳು ಆಗಿದ್ದು, ಚೇಸ್ ಮಾಡಿದ ತಂಡವೇ ಗೆಲುವು ದಾಖಲಿಸಿದೆ. ಹೀಗಾಗಿ ಈ ಪಂದ್ಯದಲ್ಲಿ ಟಾಸ್‌ ಮಹತ್ವದ ಪಾತ್ರವನ್ನು ವಹಿಸಲಿದೆ. ಗುಜರಾತ್‌ ತನ್ನ ಮನೆಯ ಅಂಗಳದಲ್ಲಿ ಕೊನೆಯ ಪಂದ್ಯವನ್ನು ಆಡಲಿದೆ.

WPL 2025 MI vs GG Mumbai Indians Face a Tough Test Against Gujarat Giants in Vadodara

ನಾಯಕಿ ಶಕ್ತಿ

ಗುಜರಾತ್ ತಂಡದ ನಾಯಕಿ ಆಶ್ಲೀ ಗಾರ್ಡ್ನರ್ ತಂಡಕ್ಕೆ ದೊಡ್ಡ ಶಕ್ತಿ ಆಗಿದ್ದಾರೆ. ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲೂ ಮಿಂಚಬಲ್ಲ ಪ್ಲೇಯರ್. ಪ್ರಸಕ್ತ ಲೀಗ್‌ನಲ್ಲಿ ಇವರು 131 ರನ್‌ ಕಲೆ ಹಾಕಿದ್ದು, ಬೌಲಿಂಗ್‌ನಲ್ಲಿ 4 ವಿಕೆಟ್‌ ಸಹ ಕಬಳಿಸಿದ್ದಾರೆ. ಈ ಸ್ಟಾರ್ ಆಟಗಾರ್ತಿಯ ಮೇಲೆ ಅಭಿಮಾನಿಗಳ ಕಣ್ಣು ನೆಟ್ಟಿರಲಿದೆ. ಉಳಿದಂತೆ ವೆಸ್ಟ್‌ ಇಂಡೀಸ್‌ ತಂಡದ ಸ್ಟಾರ್ ಆಟಗಾರ್ತಿ ಡಿಯಾಂಡ್ರಾ ಡಾಟಿನ್ ಹಾಗೂ ಬೆತ್‌ ಮೂನಿ ಅವರು ಭರವಸೆ ಮೂಡಿಸಿದ್ದಾರೆ. ಇವರು ತಮ್ಮ ಕಮಾಲ್‌ ಬ್ಯಾಟಿಂಗ್ ಪ್ರದರ್ಶನದಿಂದ ತಂಡಕ್ಕೆ ನೆರವಾಗಿದ್ದಾರೆ.

ಗುಜರಾತ್‌ ಸದ್ಯ ಅಂಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿ ಪೂರ್ಣ ಅಂಕವನ್ನು ಕಲೆ ಹಾಕಿ, ಈ ಸ್ಥಾನವನ್ನು ಭಧ್ರ ಮಾಡಿಕೊಳ್ಳುವ ಇರಾದೆ ಹೊಂದಿದೆ. ಈ ಆಸೆ ನೆರವೇರಬೇಕಾದಲ್ಲಿ ಜೈಂಟ್ಸ್ ತಂಡದ ಬೌಲರ್‌ಗಳು ಸಹ ಬಿಗುವಿನ ದಾಳಿ ನಡೆಸಿ ತಂಡಕ್ಕೆ ನೆರವಾಗಬೇಕಿದೆ.

WPL 2025 MI vs GG Mumbai Indians Face a Tough Test Against Gujarat Giants in Vadodara

ಗೆಲುವೊಂದೇ ಟಾರ್ಗೆಟ್‌

ಮುಂಬೈ ಇಂಡಿಯನ್ಸ್ ತಾನಾಡಿದ ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದು ಗೆಲುವಿನ ಟ್ರ್ಯಾಕ್‌ಗೆ ಮರಳಲು ಪ್ಲ್ಯಾನ್ ಮಾಡಿಕೊಂಡಿದೆ. ಮುಂಬೈ ತಂಡದ ನಾಯಕಿ ಹರ್ಮನ್‌ ಪ್ರೀತ್ ಕೌರ್‌ ಉತ್ತಮ ಟಚ್‌ನಲ್ಲಿದ್ದಾರೆ. ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ನ್ಯಾಟ್‌ ಸ್ಕೀವರ್ ಬ್ರಂಟ್‌ (ಅಜೇಯ 80) ಇವರ ಮೇಲೆ ಜವಾಬ್ದಾರಿ ಹೆಚ್ಚಿದೆ. ಮಧ್ಯಮ ಹಾಗೂ ಕೆಳ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಲಯಕ್ಕೆ ಮರಳ ಬೇಕಿದೆ.

ಮುಂಬೈ ಪರ ಕಳೆದ ಪಂದ್ಯದಲ್ಲಿ ಬಿಗುವಿ ದಾಳಿ ನಡೆಸಿದ್ದ ಹೇಲಿ ಮ್ಯಾಥ್ಯೂಸ್, ಅಮೆಲಿಯಾ ಕೆರ್ ಅವರಿಗೆ ಉಳಿದ ಬೌಲರ್‌ಗಳು ಉತ್ತಮ ಸಾಥ್ ನೀಡಬೇಕಿದೆ. ಮುಂಬೈ ಈ ಪಂದ್ಯದಲ್ಲಿ ಜಯ ಸಾಧಿಸಿ ಲೀಗ್‌ನಲ್ಲಿ ಗೆಲುವಿನ ಖಾತೆ ಓಪನ್ ಮಾಡುವ ಆಸೆ ಹೊಂದಿದೆ.

Story first published: Tuesday, February 18, 2025, 7:00 [IST]
Other articles published on Feb 18, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+