Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2025 Auction: ಮಿನಿ ಹರಾಜು ಪ್ರಕ್ರಿಯೆಗೆ ತೆರೆ; ಬಿಡ್ ಮಾಡಿದ ಆಟಗಾರರ ಪಟ್ಟಿ ಇಲ್ಲಿದೆ

ಬೆಂಗಳೂರಿನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ ನ (ಡಬ್ಲ್ಯೂಪಿಎಲ್) ಮಿನಿ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ಒಟ್ಟು 19 ಆಟಗಾರರನ್ನು ಬಿಡ್ ಮಾಡಲಾಗಿದೆ. ಭಾರತದ ಅನ್‌ಕ್ಯಾಪ್ಡ್ ಆಟಗಾರ್ತಿ ಸಿಮ್ರಾನ್ ಶೇಖ್ ಅವರನ್ನು ಗುಜರಾತ್ ಜೈಂಟ್ಸ್ ತಂಡವು 1.90 ಕೋಟಿ ರೂ.ಗಳಿಗೆ ಬಿಡ್ ಮಾಡಿದೆ. ಇದರೊಂದಿಗೆ ಸಿಮ್ರಾನ್ ಶೇಖ್ ಡಬ್ಲ್ಯೂಪಿಎಲ್ 2024ರ ಮಿನಿ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಡ್ ಆದ ಆಟಗಾರ್ತಿ ಎನಿಸಿಕೊಂಡಿದ್ದಾರೆ.

ತಮಿಳುನಾಡಿನ 16 ವರ್ಷದ ಜಿ ಕಮಲಿನಿ ಅವರನ್ನು ಮುಂಬೈ ಇಂಡಿಯನ್ಸ್ ರೂ 1.6 ಕೋಟಿ ರೂ.ಗಳಿಗೆ ಬಿಡ್ ಮಾಡಿದೆ. ಕಮಿಲಿನ ಅವರು ಮಿನಿ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಡ್ ಆದ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

WPL 2025 Mini Auction concludes

ಇದಲ್ಲದೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರೇಮಾ ರಾವತ್ ಅವರನ್ನು 1.2 ಕೋಟಿ ರೂ.ಗೆ ಖರೀದಿಸಿದೆ. ಲೆಗ್ ಸ್ಪಿನ್ ಬೌಲರ್ ಪ್ರೇಮಾ ಈ ವರ್ಷ ಉತ್ತರಾಖಂಡ ಪ್ರೀಮಿಯರ್ ಲೀಗ್ (ಯುಪಿಎಲ್) ನಲ್ಲಿ ಮಸ್ಸೂರಿ ಥಂಡರ್ಸ್ ತಮ್ಮ ಮೊದಲ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಬಿಡ್ ಮಾಡಿದ ಆಟಗಾರರ ಪಟ್ಟಿ

ಡಿಯಾಂಡ್ರಾ ಡಾಟಿನ್ (ವೆಸ್ಟ್ ಇಂಡೀಸ್) - 1.70 ಕೋಟಿ ರೂ. (ಗುಜರಾತ್ ಜೈಂಟ್ಸ್)
ಜಿ ಕಮಲಿನಿ (ಭಾರತ) - 1.60 ಕೋಟಿ ರೂ. (ಮುಂಬೈ ಇಂಡಿಯನ್ಸ್)
ನಡಿನ್ ಡಿ ಕ್ಲರ್ಕ್ (ದಕ್ಷಿಣ ಆಫ್ರಿಕಾ) - 30 ಲಕ್ಷ ರೂ. (ಮುಂಬೈ ಇಂಡಿಯನ್ಸ್)
ಸಿಮ್ರಾನ್ ಶೇಖ್ ( ಭಾರತ) - 1.90 ಕೋಟಿ ರೂ. (ಗುಜರಾತ್ ಜೈಂಟ್ಸ್)
ನಂದಿನಿ ಕಶ್ಯಪ್ (ಭಾರತ) - 10 ಲಕ್ಷ ರೂ. (ಡೆಲ್ಲಿ ಕ್ಯಾಪಿಟಲ್ಸ್)
ಪ್ರೇಮಾ ರಾವತ್ (ಭಾರತ) - 1.20 ಕೋಟಿ ರೂ. (ರಾಯಲ್ ಚಾಲೆಂಜರ್ಸ್ ಬೆಂಗಳೂರು)
ನಲ್ಲಪುರೆಡ್ಡಿ ಚರಣಿ (ಭಾರತ) - 55 ಲಕ್ಷ ರೂ. (ಡೆಲ್ಲಿ ಕ್ಯಾಪಿಟಲ್ಸ್)
ಆರುಷಿ ಗೋಯಲ್ (ಭಾರತ) - 10 ಲಕ್ಷ ರೂ. (ಯುಪಿ ವಾರಿಯರ್ಸ್)
ಕ್ರಾಂತಿ ಗೌರ್ (ಭಾರತ) - 10 ಲಕ್ಷ ರೂ. (ಯುಪಿ ವಾರಿಯರ್ಸ್‌)
ಸಂಸ್ಕೃತಿ ಗುಪ್ತ (ಭಾರತ) - 10 ಲಕ್ಷ ರೂ. (ಮುಂಬೈ ಇಂಡಿಯನ್ಸ್)
ಜೋಸಿತ್ಥಾ ವಿಜೆ (ಭಾರತ) - 10 ಲಕ್ಷ ರೂ. (ರಾಯಲ್ ಚಾಲೆಂಜರ್ಸ್ ಬೆಂಗಳೂರು)
ಸಾರಾ ಬ್ರೈಸ್ (ಸ್ಕಾಟ್ಲೆಂಡ್) - 10 ಲಕ್ಷ ರೂ. (ಡೆಲ್ಲಿ ಕ್ಯಾಪಿಟಲ್ಸ್)
ಅಲಾನಾ ಕಿಂಗ್ (ಆಸ್ಟ್ರೇಲಿಯಾ) - 30 ಲಕ್ಷ ರೂ. (ಯುಪಿ ವಾರಿಯರ್ಸ್)
ರಾಘ್ವಿ ಬಿಷ್ತ್ (ಭಾರತ) - 10 ಲಕ್ಷ ರೂ. (ರಾಯಲ್ ಚಾಲೆಂಜರ್ಸ್ ಬೆಂಗಳೂರು)
ಜಾಗರ್ವಿ ಪವಾರ್ (ಭಾರತ) - 10 ಲಕ್ಷ ರೂ. (ರಾಯಲ್ ಚಾಲೆಂಜರ್ಸ್ ಬೆಂಗಳೂರು)
ನಿಕ್ಕಿ ಪ್ರಸಾದ್ (ಭಾರತ) - 10 ಲಕ್ಷ ರೂ. (ಡೆಲ್ಲಿ ಕ್ಯಾಪಿಟಲ್ಸ್)
ಪ್ರಕಾಶಿಕಾ ನಾಯಕ್ (ಭಾರತ) - 10 ಲಕ್ಷ ರೂ. (ಗುಜರಾತ್ ಜೈಂಟ್ಸ್)
ಡೇನಿಯಲ್ ಗಿಬ್ಸನ್ (ಇಂಗ್ಲೆಂಡ್ ) - 30 ಲಕ್ಷ ರೂ. (ಗುಜರಾತ್ ಜೈಂಟ್ಸ್)
ಅಕ್ಷಿತಾ ಮಹೇಶ್ವರಿ (ಭಾರತ) - 20 ಲಕ್ಷ ರೂ. (ಮುಂಬೈ ಇಂಡಿಯನ್ಸ್‌)

Story first published: Sunday, December 15, 2024, 19:32 [IST]
Other articles published on Dec 15, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+