WPL 2025 MI vs GG: ಗುಜರಾತ್ ಮಣಿಸಿದ ಮುಂಬೈಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ
ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಅಮೋಘ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್, 9 ರನ್‌ಗಳಿಂದ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿತು. ಈ ಗೆಲುವಿನ ಮೂಲಕ ಮುಂಬೈ ತಂಡ ಮೂರನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ 5 ಜಯ ಸಾಧಿಸುವ ಮೂಲಕ, 10 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಈ ಪಂದ್ಯದಲ್ಲಿ ಸೋಲು ಕಂಡಿರುವ ಗುಜರಾತ್ ಮೂರನೇ ಸ್ಥಾನಕ್ಕೆ ಕುಸಿದಿದೆ.
ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 179 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಗುಜರಾತ್ ಜೈಂಟ್ಸ್ ತಂಡ 20 ಓವರ್‌ಗಳಲ್ಲಿ 170 ರನ್‌ಗೆ ಆಲೌಟ್ ಆಯಿತು.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕರಾದ ಅಮೇಲಿಯಾ ಕೆರ್ 5 ರನ್‌ಗಳಿಗೆ ಆಟ ಮುಗಿಸಿದರು. ಭರವಸೆಯ ಆರಂಭಿಕ ಆಟಗಾರ್ತಿ ಹ್ಯಾಲಿ ಮ್ಯಾಥ್ಯೂಸ್ 22 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ 27 ರನ್ ಬಾರಿಸಿ ಅಬ್ಬರಿಸಿದರು. ಇವರು ಇಲ್ಲದ ಹೊಡೆತಕ್ಕೆ ಮುಂದಾಗಿ ಪ್ರಿಯಾ ಮಿಶ್ರಾ ಎಸೆತದಲ್ಲಿ ಔಟ್ ಆದರು.
ಹರ್ಮನ್ ಪ್ರೀತ್ ಅರ್ಧಶತಕ
ಮೂರನೇ ವಿಕೆಟ್‌ಗೆ ನ್ಯಾಟ್ ಸ್ಕೀವರ್ ಬ್ರಂಟ್ ಹಾಗೂ ನಾಯಕಿ ಹರ್ಮನ್ ಪ್ರಿತ್ ಕೌರ್ ಜೋಡಿ ಮಿಡ್ಲ್ ಓವರ್‌ಗಳಲ್ಲಿ ವಿಕೆಟ್ ಬೀಳದಂತೆ ಕಾಯ್ದುಕೊಳ್ಳುವಲ್ಲಿ ಸಫಲರಾದರು. ಇವರು ಗುಜರಾತ್ ಬೌಲರ್‌ಗಳ ತಂತ್ರವನ್ನು ಮೆಟ್ಟಿನಿಂತು ರನ್ ಕಲೆ ಹಾಕಿತು. ಸ್ಕೀವರ್ ಬ್ರಂಟ್ ಹಾಗೂ ಹರ್ಮನ್ ಪ್ರೀತ್ ಜೋಡಿ 40 ಎಸೆತಗಳಲ್ಲಿ 59 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ನ್ಯಾಟ್ ಸ್ಕೀವರ್ ಬ್ರಂಟ್ 6 ಬೌಂಡರಿ ಸಹಾಯದಿಂದ 38 ರನ್ ಸೇರಿಸಿದರು.

4ನೇ ವಿಕೆಟ್‌ಗೆ ಹರ್ಮನ್ ಪ್ರೀತ್ ಕೌರ್ ಹಾಗೂ ಅಮನ್‌ಜೋತ್ ಸಿಂಗ್ ಜೋಡಿ 19 ಎಸೆತಗಳಲ್ಲಿ 33 ರನ್ ಸೇರಿಸಿ ತಂಡಕ್ಕೆ ಆಧಾರವಾದ್ರು. ಅಮನ್‌ಜೋತ್ 15 ಬೌಂಡರಿ ನೆರವಿನಿಂದ 27 ರನ್ ಸಿಡಿಸಿದರು. ಇನ್ನು ನಾಯಕಿ ಹರ್ಮನ್ ಪ್ರೀತ್ ಕೌರ್ 33 ಎಎಸೆತಗಳಲ್ಲಿ 9 ಬೌಂಡರಿ ಸಹಾಯದಿಂದ 54 ರನ್ ಸಿಡಿಸಿದರು. ಉಳಿದಂತೆ ಸಜೀವನ್ ಸಾಜನ್ 11, ಯಾಸ್ತಿಕಾ ಭಾಟಿಯಾ 13 ರನ್ ಸೇರಿಸಿ ತಂಡದ ಮೊತ್ತ ಹಿಗ್ಗಿಸಿದರು.
ಫಲ ನೀಡದ ಬದಲಾವಣೆ
ಗುಜರಾತ್ ಜೈಂಟ್ಸ್ ತಂಡ ಮಹತ್ವದ ಪಂದ್ಯದಲ್ಲಿ ಆರಂಭಿಕ ಸ್ಥಾನದಲ್ಲಿ ಕಾಶ್ವಿ ಗೌತಮ್ (10) ಅವರಿಗೆ ಅವಕಾಶ ನೀಡಿತು. ಆದರೆ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಳ್ಳುವಲ್ಲಿ ಕಾಶ್ವಿ ವಿಫಲರಾದರು. ಸ್ಟಾರ್ ಆಟಗಾರ್ತಿ ಬೆತ್ ಮೂನಿ (7) ನಿರಾಸೆ ಅನುಭವಿಸಿದರು. ತಂಡದ ನಾಯಕಿ ಆಶ್ಲೀ ಗಾರ್ಡ್ನರ್ ಸೊನ್ನೆ ಸುತ್ತಿದರು. ಉಳಿದಂತೆ ಫೋಬೆ ಲಿಚ್‌ಫೀಲ್ಡ್ (22), ಡ್ಯಾಂಡ್ರಾ ಡಾಟಿನ್ (10) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ.
ಗುಜರಾತ್ ತಂಡದ ಪರ ಭಾರತಿ ಫುಲ್‌ಮುಲೆ ಬಿರುಸಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 25 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸರ್ ಸಹಾಯದಿಂದ 61 ರನ್ ಬಾರಿಸಿ ಸೋಲಿನಲ್ಲಿ ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications