RCB vs MI WPL 2025: ಟಾಸ್ ಗೆದ್ ಮುಂಬೈ ಬೌಲಿಂಗ್ ಆಯ್ಕೆ
ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್) 2024ರ 7ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಮುಂಬೈ ಇಂಡಿಯನ್ಸ್ (ಎಂಐ) ತಂಡಗಳು ನಡುವೆ ಆರಂಭವಾಗಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿವೆ. ಈ ರೋಚಕ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಮಾಡಲು ನಿರ್ಧರಿಸಿದೆ. ಹೀಗಾಗಿ ಆರ್‌ಸಿಬಿ ತಂಡ ಮೊದಲು ಬ್ಯಾಟಿಂಗ್ ಮಾಡಲಿದೆ.
ತವರಿನಲ್ಲಿ ಸ್ಮೃತಿ ಮಂದಾನ ನೇತೃತ್ವದ ಆರ್‌ಸಿಬಿ ವನಿತೆಯರ ತಂಡ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ ಮುಂಬೈ ತಂಡ ಹರ್ಮನ್‌ಪ್ರೀತ್ ಕೌರ್ ನೇತೃತ್ವದಲ್ಲಿ ಎರಡನೇ ಗೆಲುವಿನ ಆಸೆಯನ್ನು ಹೊತ್ತು ಮೈದಾನಕ್ಕಿಳಿದಿದೆ.

ಡಬ್ಲ್ಯೂಪಿಸಿ 2025ರಲ್ಲಿ ಆರ್‌ಸಿಬಿ ತಂಡ ಅದ್ಭುತ ಪ್ರದರ್ಶನ ನೀಡುತ್ತಿದೆ. ಆಡಿದ 2 ಪಂದ್ಯಗಳಲ್ಲಿ ಆರ್‌ಸಿಬಿ ಎರಡೂ ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿ 4 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದೆ. ಇನ್ನು ಮುಂಬೈ ಇಂಡಿಯನ್ಸ್ 2 ಪಂದ್ಯಗಳಲ್ಲಿ 1 ಸೋಲು, 1 ಗೆಲುವು ದಾಖಲಿಸಿದ್ದು, 2 ಅಂಕಗಳನ್ನು ಗಳಿಸಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಪ್ಲೇ ಆಫ್‌ಗೆ ಎಂಟ್ರಿ ಕೊಡಲು ಆರ್‌ಸಿಬಿ ಪಣ ತೊಟ್ಟಿದೆ.
ಉಭಯ ಪ್ಲೇಯಿಂಗ್-11
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನ (ನಾಯಕ) , ಡೇನಿಯಲ್ ವ್ಯಾಟ್-ಹಾಡ್ಜ್ , ಎಲ್ಲಿಸ್ ಪೆರ್ರಿ , ರಿಚಾ ಘೋಷ್ (ವಿಕೆಟ್‌ಕೀಪರ್) , ರಾಘ್ವಿ ಬಿಸ್ಟ್ , ಕನಿಕಾ ಅಹುಜಾ , ಜಾರ್ಜಿಯಾ ವೇರ್ಹಮ್ , ಕಿಮ್ ಗಾರ್ತ್ , ಏಕ್ತಾ ಬಿಶ್ತ್ , ಜೋಶಿತಾ ವಿಜೆ , ರೇಣುಕಾ ಸಿಂಗ್ ಠಾಕೂರ್.
ಮುಂಬೈ ಇಂಡಿಯನ್ಸ್: ಹೇಲಿ ಮ್ಯಾಥ್ಯೂಸ್ , ಯಾಸ್ತಿಕಾ ಭಾಟಿಯಾ (ವಿಕೆಟ್‌ಕೀಪರ್) , ನ್ಯಾಟ್ ಸಿವರ್-ಬ್ರಂಟ್ , ಹರ್ಮನ್‌ಪ್ರೀತ್ ಕೌರ್ (ನಾಯಕ) , ಅಮೆಲಿಯಾ ಕೆರ್ , ಸಜೀವನ್ ಸಜನಾ , ಜಿ ಕಮಲಿನಿ , ಅಮನ್ಜೋತ್ ಕೌರ್ , ಸಂಸ್ಕೃತಿ ಗುಪ್ತಾ , ಶಬ್ನಿಮ್ ಇಸ್ಮಾಯಿಲ್ , ಪರುನಿಕಾ ಸಿಸೋಡಿಯಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications