Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2025 MI vs UP: ಹ್ಯಾಟ್ರಿಕ್‌ ಜಯ ಸಾಧಿಸಿದ ಮುಂಬೈಗೆ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ

ಮೂರನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಮುಂಬೈ ಇಂಡಿಯನ್ಸ್‌ ಹ್ಯಾಟ್ರಿಕ್‌ ಗೆಲುವಿನ ನಗೆ ಬೀರಿದೆ. ಬುಧವಾರ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ 8 ವಿಕೆಟ್‌ಗಳಿಂದ ಯುಪಿ ವಾರಿಯರ್ಸ್ ತಂಡವನ್ನು ಮಣಿಸಿ ಅಬ್ಬರಿಸಿದೆ. ಈ ಮೂಲಕ ಆಡಿದ 4 ಪಂದ್ಯಗಳಲ್ಲಿ 3 ಜಯ 1 ಸೋಲು ಕಂಡಿದ್ದು 6 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಮುಂಬೈ ಇಂಡಿಯನ್ಸ್‌ ಟಾಸ್‌ ಗೆದ್ದು ಫೀಲ್ಡಿಂಗ್ ಮಾಡಿತು. ಮೊದಲು ಬ್ಯಾಟ್ ಮಾಡಿದ ಯುಪಿ 20 ಓವರ್‌ಗಳಲ್ಲಿ 9 ವಿಕೆಟ್‌ಗಳಲ್ಲಿ 142 ರನ್‌ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್‌ 17 ಓವರ್‌ಗಳಲ್ಲಿ 2 ವಿಕೆಟ್‌ಗೆ 143 ರನ್‌ ಸೇರಿಸಿ ಜಯ ಸಾಧಿಸಿತು. ಯುಪಿ ವಾರಿಯರ್ಸ್‌ ಸತತ ಮೂರನೇ ಗೆಲುವಿನ ಆಸೆ ಮಣ್ಣು ಪಾಲಾಯಿತು.

WPL 2025 Mumbai Indians Secure Hat-Trick of Wins Defeat UP Warriorz by 8 Wickets

ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ಯುಪಿ ವಾರಿಯರ್ಸ್ ನೀಡಿದ ಸ್ಪರ್ಧಾತ್ಮಕ ಗುರಿಯನ್ನು ಹಿಂಬಾಲಿಸಿದ ಮುಂಬೈ ಇಂಡಿಯನ್ಸ್ ಆರಂಭ ಕಳಪೆಯಾಗಿತ್ತು. ಮುಂಬೈ ತಂಡದ ಆರಂಭಿಕ ಆಟಗಾರ್ತಿ ಯಾಸ್ತಿಕಾ ಭಾಟಿಯಾ ಸೊನ್ನೆ ಸುತ್ತಿ ನಿರಾಸೆ ಅನುಭವಿಸಿದರು. ಎರಡನೇ ವಿಕೆಟ್‌ಗೆ ಹ್ಯಾಲಿ ಮ್ಯಾಥ್ಯೂಸ್‌ ಹಾಗು ನ್ಯಾಟ್‌ ಸ್ಕೀವರ್ ಬ್ರಂಟ್‌ ಉತ್ತಮ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ಆಧಾರವಾದರು. ಈ ಜೋಡಿ ಯುಪಿ ತಂಡದ ಕರಾರುವಕ್ ದಾಳಿಯನ್ನು ಮೆಟ್ಟಿನಿಂತು ಬ್ಯಾಟ್ ಮಾಡಿತು.

ಪವರ್‌ ಪ್ಲೇನಲ್ಲಿ ತಂಡಕ್ಕೆ ಬಿದ್ದ ಪೆಟ್ಟನ್ನು, ಗಮನದಲ್ಲಿಟ್ಟುಕೊಂಡು ಬ್ಯಾಟ್ ಮಾಡಿದ ಹ್ಯಾಲಿ ಮ್ಯಾಥ್ಯೂಸ್ ಹಾಗೂ ನ್ಯಾಟ್‌ ಸ್ಕೀವರ್ ಬ್ರಂಟ್ ಜೋಡಿ ಆರ್ಭಟಿಸಿತು. ಈ ಜೋಡಿ ಎರಡನೇ ವಿಕೆಟ್‌ಗೆ ಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ನೆರವಾಯಿತು. ಈ ಜೋಡಿ 82 ಎಸೆತಗಳಲ್ಲಿ 133 ರನ್‌ ಸೇರಿಸಿ ತಂಡಕ್ಕೆ ಆಧಾರವಾಯಿತು. ತಂಡ ಗೆಲುವಿನ ಅಂಚಿನಲ್ಲಿದ್ದಾಗ ಆರಂಭಿಕ ಆಟಗಾರ್ತಿ ಹ್ಯಾಲಿ ಮ್ಯಾಥ್ಯೂಸ್ 7 ಬೌಂಡರಿ, 2 ಸಿಕ್ಸರ್‌ ನೆರವಿನಿಂದ 59 ರನ್‌ ಸಿಡಿಸಿ ಔಟ್ ಆದರು.

ಬ್ರಂಟ್‌ ಆರ್ಭಟ

ಮುಂಬೈ ತಂಡದ ಅನುಭವಿ ಆಲ್‌ರೌಂಡರ್ ನ್ಯಾಟ್ ಸ್ಕೀವರ್ ಬ್ರಂಟ್‌ ಅಬ್ಬರಿಸಿದರು. ಯುಪಿ ಬೌಲರ್‌ಗಳ ಸವಾಲನ್ನು ಮೆಟ್ಟಿನಿಂತು ಬ್ಯಾಟ್ ಮಾಡಿದ ಇವರು ತಂಡದ ಜಯದಲ್ಲಿ ಮಿಂಚಿದರು. ನ್ಯಾಟ್ ಸ್ಕೀವರ್‌ ಬ್ರಂಟ್‌ 44 ಎಸೆತಗಳಲ್ಲಿ 13 ಬೌಂಡರಿ ನೆರವಿನಿಂದ ಅಜೇಯ 75 ರನ್‌ ಸಿಡಿಸಿ ಅಬ್ಬರಿಸಿದರು.

WPL 2025 Mumbai Indians Secure Hat-Trick of Wins Defeat UP Warriorz by 8 Wickets

2ನೇ ವಿಕೆಟ್‌ಗೆ ಉತ್ತಮ ಜೊತೆಯಾಟ

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಯುಪಿ ತಂಡದ ಆರಂಭ ಕಳಪೆಯಾಗಿತ್ತು. ತಂಡದ ಮೊತ್ತ 2 ರನ್‌ ಆಗುವಷ್ಟರಲ್ಲಿ ಆರಂಭಿಕ ಆಟಗಾರ್ತಿ ಕಿರನ್‌ ಪೆವಿಲಿಯನ್‌ ಸೇರಿದರು. ಎರಡನೇ ವಿಕೆಟ್‌ಗೆ ಗ್ರೇಸ್ ಹ್ಯಾರಿಸ್‌ ಹಾಗೂ ದಿನೇಶ್‌ ವೃಂದಾ ಜೋಡಿ ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಎರಡನೇ ವಿಕೆಟ್‌ಗೆ 52 ಎಸೆತಗಳಲ್ಲಿ 79 ರನ್‌ ಸಿಡಿಸಿ ಆಧಾರವಾಯಿತು. ಗ್ರೇಸ್ ಹ್ಯಾರಿಸ್‌ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ 45 ರನ್‌ ಬಾರಿಸಿ ಔಟ್ ಆದರು. ದಿನೇಶ್ ವೃಂದಾ 33 ರನ್‌ ಸಿಡಿಸಿದರು.

ಮಧ್ಯಮ ಕ್ರಮಾಂಕದಲ್ಲಿ ಶ್ವೇತಾ ಶೇರವಾತ್‌ 19, ಉಮಾ ಚೆಟ್ರಿ 13 ರನ್‌ ಸಿಡಿಸಿ ಔಟ್ ಆದರು.

ಮುಂಬೈ ಪರ ನ್ಯಾಟ್ ಸ್ಕಿವರ್ ಬ್ರಂಟ್‌ 3, ಶಬ್ನಮ್‌ ಇಸ್ಮಾಯಿಲ್‌ ಹಾಗೂ ಸಂಸ್ಕೃತಿ ಗುಪ್ತಾ ತಲಾ ಎರಡು ವಿಕೆಟ್‌ ಪಡೆದರು.

Story first published: Wednesday, February 26, 2025, 23:48 [IST]
Other articles published on Feb 26, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+