For Quick Alerts
ALLOW NOTIFICATIONS  
For Daily Alerts
 

WPL 2025: ಹ್ಯಾಟ್ರಿಕ್ ಗೆಲುವು ಮಿಸ್ ಮಾಡಿಕೊಂಡ ಆರ್‌ಸಿಬಿ ವನಿತೆಯರು

ವುಮೆನ್ಸ್ ಪ್ರೀಮಿಯರ್ ಲೀಗ್‌ (ಡಬ್ಲ್ಯೂಪಿಎಲ್) 2025ರ ಟೂರ್ನಿಯಲ್ಲಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ವನಿತೆಯರ ತಂಡ ಹ್ಯಾಟ್ರಿಕ್ ಗೆಲುವು ಸಾಧಿಸುವ ಅವಕಾಶವನ್ನು ಕಳೆದುಕೊಂಡಿತು. ಶುಕ್ರವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 4 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಆರ್‌ಸಿಬಿಗೆ ಎಲ್ಲಿಸ್ ಪೆರ್‍ರಿ ಮತ್ತು ಜಾರ್ಜಿಯಾ ವೇರಂ ಅರ್ಧಶತಕದ ಹೋರಾಟ ವ್ಯರ್ಥವಾಯಿತು.

ರೋಚಕ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕಿ ಹರ್ಮನ್‌ಪ್ರೀತ್ ಕೌರ್ ಬೌಲಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ವನಿತೆಯರು 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 167 ರನ್ ಕಲೆಹಾಕಿತು.

WPL 2025 Mumbai Indians win against Royal Challengers Bengaluru Women

ಆರ್‌ಸಿಬಿ ನೀಡಿದ 168 ರನ್‌ಗಳ ಗುರಿ ಮುಂಬೈ ಆರಂಭಿಕ ಆಘಾತದ ನಡುವೆಯೂ ಸ್ಫೋಟಕ ಆರಂಭ ಪಡೆಯಿತು. ಪರಿಣಾಮ ಒಂದು ಎಸೆತ ಬಾಕಿ ಇರುವಂತೆಯೇ ಮುಂಬೈ 6 ವಿಕೆಟ್ ನಷ್ಟಕ್ಕೆ 170 ರನ್‌ಗಳಿ ಗೆಲುವು ಕಂಡಿತು.

ಟಾಸ್ ಸೋತು ಬ್ಯಾಟಿಂಗ್ ಇಳಿದ ಆರ್‌ಸಿಬಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ನಾಯಕಿ ಸ್ಮೃತಿ ಮಂಧಾನ ಕೇವಲ 26 ರನ್ ಗಳಿಸಿ ಔಟಾದರೆ, ವ್ಯಾಟ್ ಹಾಡ್ಜ್‌ (9), ರಾಘ್ವಿ ಬಿಸ್ಟ್ (1), ಕನಿಕಾ ಅಹುಜಾ (3) ತಂಡಕ್ಕೆ ಆಸರೆಯಾಗಲಿಲ್ಲ. ಸಂಕಷ್ಟದಲ್ಲಿದ ಆರ್‌ಸಿಬಿ ತಂಡಕ್ಕೆ ಎಲ್ಲಿಸ್ ಪೆರ್‍ರಿ ಆಸರೆಯಾದರು. ಅವರು 43 ಎಸೆತಗಳಲ್ಲಿ 11 ಬೌಂಡರಿ 3 ಸಿಕ್ಸರ್‌ಗಳ ನೆರವಿನಿಂದ 81 ರನ್ ಗಳಿಸಿದರು. ಮತ್ತೊಂದೆಡೆ ರಿಚಾ ಘೋಷ್ 28 ರನ್ ಬಾರಿಸಿದರು.

ಮುಂಬೈ ಪರ ಅಮಂಜೋತ್ ಕೌರ್ 3 ವಿಕೆಟ್ ಕಬಳಿಸಿ ಮಿಂಚದರೆ, ಶಭ್ಮನ್ ಇಸ್ಮಾಯಿಲ್, ನ್ಯಾಟ್ ಸಿವರ್ ಬ್ರಂಟ್, ಹೇಲಿ ಮ್ಯಾಥ್ಯೂಸ್ ಮತ್ತು ಸಂಸ್ಕೃತಿ ಗುಪ್ತಾ ತಲಾ 1 ವಿಕೆಟ್ ಪಡೆದರು.

ಆರ್‌ಸಿಬಿ ನೀಡಿದ 168 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಮುಂಬೈ ಯಾಸ್ತಿಕಾ ಭಾಟಿಯಾ (8) ಮತ್ತು ಹೇಲಿ ಮ್ಯಾಥ್ಯೂಸ್ (15) ವಿಕೆಟ್ ಕಳೆದುಕೊಂಡ ಆರಂಭಿಕ ಆಘಾತ ಅನುಭವಿಸಿತು. ಬಳಿಕ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದ ನಾಯಕಿ ಹರ್ಮನ್‌ ಪ್ರೀತ್ ಕೌರ್ ತಂಡ ಗೆಲುವಿನ ಪ್ರಮುಖ ಪಾತ್ರವಹಿಸಿದರು.

ಹರ್ಮನ್‌ಪ್ರೀತ್ ಕೌರ್ 38 ಎಸೆತಗಳಲ್ಲಿ 50 ರನ್ ಗಳಿಸುವ ಅಬ್ಬರಿಸಿದರು. ಕೊನೆಯಲ್ಲಿ ಅಮಂಜೋತ್ ಕೌರ್ 27 ಎಸೆತಗಳಲ್ಲಿ 2 ಬೌಂಡರಿ 2 ಸಿಕ್ಸರ್ ನೆರವಿನಿಂದ ಅಜೇಯ 34 ರನ್ ಗಳಿಸುವ ಮೂಲಕ ಆರ್‌ಸಿಬಿ ಹ್ಯಾಟ್ರಿಕ್ ಗೆಲುವಿಗೆ ಆಸೆ ಬ್ರೇಕ್ ಹಾಕಿದರು.

ಉಭಯ ಪ್ಲೇಯಿಂಗ್-11

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: ಸ್ಮೃತಿ ಮಂಧಾನ (ನಾಯಕ) , ಡೇನಿಯಲ್ ವ್ಯಾಟ್-ಹಾಡ್ಜ್ , ಎಲ್ಲಿಸ್ ಪೆರ್ರಿ , ರಿಚಾ ಘೋಷ್ (ವಿಕೆಟ್‌ಕೀಪರ್) , ರಾಘ್ವಿ ಬಿಸ್ಟ್ , ಕನಿಕಾ ಅಹುಜಾ , ಜಾರ್ಜಿಯಾ ವೇರ್ಹಮ್ , ಕಿಮ್ ಗಾರ್ತ್ , ಏಕ್ತಾ ಬಿಶ್ತ್ , ಜೋಶಿತಾ ವಿಜೆ , ರೇಣುಕಾ ಸಿಂಗ್ ಠಾಕೂರ್.

ಮುಂಬೈ ಇಂಡಿಯನ್ಸ್: ಹೇಲಿ ಮ್ಯಾಥ್ಯೂಸ್ , ಯಾಸ್ತಿಕಾ ಭಾಟಿಯಾ (ವಿಕೆಟ್‌ಕೀಪರ್) , ನ್ಯಾಟ್ ಸಿವರ್-ಬ್ರಂಟ್ , ಹರ್ಮನ್‌ಪ್ರೀತ್ ಕೌರ್ (ನಾಯಕ) , ಅಮೆಲಿಯಾ ಕೆರ್ , ಸಜೀವನ್ ಸಜನಾ , ಜಿ ಕಮಲಿನಿ , ಅಮನ್ಜೋತ್ ಕೌರ್ , ಸಂಸ್ಕೃತಿ ಗುಪ್ತಾ , ಶಬ್ನಿಮ್ ಇಸ್ಮಾಯಿಲ್ , ಪರುನಿಕಾ ಸಿಸೋಡಿಯಾ.

Story first published: Friday, February 21, 2025, 23:53 [IST]
Other articles published on Feb 21, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+