For Quick Alerts
ALLOW NOTIFICATIONS  
For Daily Alerts
 

WPL 2025: ನ್ಯಾಟ್‌ ಸ್ಕಿವರ್‌ಗೆ ಆರೆಂಜ್‌, ಅಮೆಲಿಯಾ ಕೆರ್‌ಗೆ ಪರ್ಪಲ್‌ ಕ್ಯಾಪ್‌

ಮಹಿಳಾ ಪ್ರೀಮಿಯರ್ ಲೀಗ್ ಮುಕ್ತಾಯಗೊಂಡಿದೆ. ಫೈನಲ್‌ನಲ್ಲಿ ಮುಂಬೈ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಸ್ಟಾರ್ ಆಟಗಾರರು ಭರ್ಜರಿ ಪ್ರದರ್ಶನ ನೀಡಿ ತಂಡಕ್ಕೆ ಅಗತ್ಯ ಕಾಣಿಕೆ ನೀಡಿದ ಸ್ಟಾರ್ ಆಟಗಾರ್ತಿಯರು, ವೈಯಕ್ತಿಕ ಸಾಧನೆಯನ್ನು ಸಹ ಮಾಡಿದ್ದಾರೆ. ಈ ವೇಳೆ ಮುಂಬೈ ಇಂಡಿಯನ್ಸ್ ತಂಡದ ಆಟಗಾರ್ತಿಯರು ಅಮೋಘ ಪ್ರದರ್ಶನ ನೀಡಿ ಹಲವು ಪ್ರಶಸ್ತಿಗಳಿಗೆ ತಮ್ಮ ಹೆಸರನ್ನು ನಮೂದಿಸಿಕೊಂಡಿದ್ದಾರೆ.

ಟೂರ್ನಿಯುದಕ್ಕೂ ಮುಂಬೈ ತಂಡಕ್ಕೆ ಆಧಾರವಾದ ಪ್ಲೇಯರ್ ನ್ಯಾಟ್‌ ಸ್ಕೀವರ್ ಬ್ರಂಟ್‌. ಇವರು ಫೈನಲ್‌ ಪಂದ್ಯದಲ್ಲಿ ಅಮೊಘ ಬ್ಯಾಟಿಂಗ್ ಪ್ರದರ್ಶನ ನೀಡಿ 30 ರನ್‌ ಕಲೆ ಹಾಕಿದರು. ಈ ಮೂಲಕ ಪ್ರಸಕ್ತ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ ನ್ಯಾಟ್ ಬ್ರಂಟ್ 3 ರನ್ ಗಳಿಸಿದ ತಕ್ಷಣ, ಅವರು ಈ ಲೀಗ್ ಇತಿಹಾಸದಲ್ಲಿ 1000 ರನ್ ಗಳಿಸಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಸಾಧನೆಯನ್ನು ಇದುವರೆಗೆ ಯಾವ ಆಟಗಾರ್ತಿಯೂ ಮಾಡಿಲ್ಲ.

WPL 2025 Nat Sciver Brunt Wins Orange Cap Amelia Kerr Clinches Purple Cap

ಅತಿ ಹೆಚ್ಚು ರನ್‌ ಕಲೆ ಹಾಕಿದ ಆಟಗಾರ್ತಿಯ ಪಟ್ಟಿಯಲ್ಲಿ ಆರ್‌ಸಿಬಿ ತಂಡದ ಎಲ್ಲಿಸ್‌ ಪೆರ್ರಿ ಎರಡನೇ ಸ್ಥಾನದಲ್ಲಿದ್ದಾರೆ. ಆರ್‌ಸಿಬಿ ಲೀಗ್‌ ಹಂತದಲ್ಲಿ ಟೂರ್ನಿಗೆ ಗುಡ್‌ ಬಾಯ್ ಹೇಳಿದರೂ ಸಹ ಪೆರ್ರಿ ಅಮೋಘ ಪ್ರದರ್ಶನ ನೀಡಿದರು. ಇವರು ಆಡಿದ 8 ಪಂದ್ಯಗಳಲ್ಲಿ 372 ರನ್‌ ಸಿಡಿಸಿದ್ದಾರೆ.

ಅತಿ ಹೆಚ್ಚು ರನ್ ಬಾರಿಸಿದ ಟಾಪ್‌ 5 ಬ್ಯಾಟರ್ಸ್

ನ್ಯಾಟ್‌ ಸ್ಕೀವರ್ ಬ್ರಂಡ್‌, ಮುಂಬೈ ಇಂಡಿಯನ್ಸ್, 10 ಪಂದ್ಯ, 523 ರನ್, 5 ಅರ್ಧಶತಕ
ಎಲ್ಲಿಸ್ ಪೆರ್ರಿ, 8 ಪಂದ್ಯ, 372 ರನ್, 4 ಅರ್ಧಶತಕ
ಹ್ಯಾಲಿ ಮ್ಯಾಥ್ಯೂಸ್‌, 10 ಪಂದ್ಯ, 307 ರನ್‌, 3 ಅರ್ಧಶತಕ
ಶೆಫಾಲಿ ವರ್ಮಾ, 9 ಪಂದ್ಯ, 304 ರನ್, 1 ಅರ್ಧಶತಕ
ಹರ್ಮನ್ ಪ್ರೀತ್ ಕೌರ್, 10 ಪಂದ್ಯ, 302 ರನ್‌, 3 ಅರ್ಧಶತಕ

WPL 2025 Nat Sciver Brunt Wins Orange Cap Amelia Kerr Clinches Purple Cap

ಮುಂಬೈ ಇಂಡಿಯನ್ಸ್ ತಂಡದ ಪರ ಅನುಭವಿ ಅಮೆಲಿಯಾ ಕೆರ್‌ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಇವರು ಆಡಿದ 10 ಪಂದ್ಯಗಳಲ್ಲಿ 18 ವಿಕೆಟ್‌ ಪಡೆದು ಪರ್ಪಲ್‌ ಕ್ಯಾಪ್‌ ಪಡೆದಿದ್ದಾರೆ. ಇವರು ಫೈನಲ್‌ ಪಂದ್ಯದಲ್ಲಿ ಎರಡು ವಿಕೆಟ್‌ ಪಡೆದು ತಮ್ಮದೇ ತಂಡದ ಹ್ಯಾಲಿ ಮ್ಯಾಥ್ಯೂಸ್‌ ಅವರನ್ನು ಹಿಂದಿಕ್ಕಿ ಪರ್ಪಲ್‌ ಕ್ಯಾಪ್‌ ತಮ್ಮದಾಗಿಸಿಕೊಂಡರು.

ಅತಿ ಹೆಚ್ಚು ವಿಕೆಟ್ ಪಡೆದ ಟಾಪ್‌ 5 ಬೌಲರ್ಸ್

ಅಮೆಲಿಯಾ ಕೆರ್, ಮುಂಬೈ ಇಂಡಿಯನ್ಸ್‌, 10 ಪಂದ್ಯ, 18 ವಿಕೆಟ್‌
ಹ್ಯಾಲಿ ಮ್ಯಾಥ್ಯೂಸ್‌, ಮುಂಬೈ ಇಂಡಿಯನ್ಸ್‌, 10 ಪಂದ್ಯ, 17 ವಿಕೆಟ್‌
ಜೆಸ್ ಜೊನಾಸೆನ್, ಡೆಲ್ಲಿ ಕ್ಯಾಪಿಟಲ್ಸ್‌, 8 ಪಂದ್ಯ, 13 ವಿಕೆಟ್‌
ಜಾರ್ಜಿಯಾ ವೇರ್ಹ್ಯಾಮ್, ಆರ್‌ಸಿಬಿ, 8 ಪಂದ್ಯ, 11 ವಿಕೆಟ್‌
ಕಾಶ್ವೀ ಗೌತಮ್, ಗುಜರಾತ್‌, ಗುಜರಾತ್‌, 9 ಪಂದ್ಯ, 11 ವಿಕೆಟ್‌

Story first published: Saturday, March 15, 2025, 23:55 [IST]
Other articles published on Mar 15, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+