For Quick Alerts
ALLOW NOTIFICATIONS  
For Daily Alerts
 

Mumbai Indians: ಯುವ ಪ್ರತಿಭೆಗಳ ಯಶಸ್ಸಿಗೆ ಮೆಟ್ಟಿಲಾದ ನೀತಾ ಅಂಬಾನಿ

ಬೆಂಗಳೂರಿನಲ್ಲಿ ಭಾನುವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್) 2025ರ ಮಿನಿ ಹರಾಜು ಪ್ರಕ್ರಿಯೆಯಲ್ಲಿ ನಾಲ್ವರು ಹೊಸ ಆಟಗಾರ್ತಿಯರನ್ನು ಮುಂಬೈ ಇಂಡಿಯನ್ಸ್ ಸೇರಿಸಿಕೊಂಡಿದೆ. ಇದಾದ ಬಳಿಕ ತಂಡದ ಬಲಾಬಲದ ಬಗ್ಗೆ ಫ್ರಾಂಚೈಸಿ ಮಾಲೀಕಿ ನೀತಾ ಅಂಬಾನಿ ಮಾತನಾಡಿದ್ದಾರೆ. ಯಾವ ಆಧಾರದ ಮೇಲೆ ತಂಡವನ್ನು ಕಟ್ಟಲಾಗಿದೆ ಎಂಬುದನ್ನು ನೀತಾ ಅಂಬಾನ ವಿವರಿಸಿದ್ದಾರೆ. ಯುವ ಪ್ರತಿಭೆಗಳನ್ನು ಬೆಳೆಸುವುದು ಮುಂಬೈ ಇಂಡಿಯನ್ಸ್ ತಂಡದ ಮೊದಲ ಆದ್ಯತೆ ಎಂದು ಮಾಹಿತಿಯನ್ನು ನೀತಾ ಅಂಬಾನಿ ಹಂಚಿಕೊಂಡಿದ್ದಾರೆ.

ಮುಂಬೈ ಇಂಡಿಯನ್ಸ್ ಡಬ್ಲ್ಯೂಪಿಎಲ್‌ ಉದ್ಘಾಟನಾ ಆವೃತ್ತಿಯ ಚಾಂಪಿಯನ್ ಆಗಿದೆ. ಇದೀಗ ಮುಂದಿನ ಆವೃತ್ತಿಗೆ ಮಿನಿ ಹರಾಜಿನಲ್ಲಿ ತಮಿಳುನಾಡಿನ ವಿಕೆಟ್‌ಕೀಪರ್ ಮತ್ತು ಬ್ಯಾಟರ್ ಜಿ ಕಮಲಿನಿ, ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ನಡಿನ್ ಡಿ ಕ್ಲರ್ಕ್, ಮಧ್ಯಪ್ರದೇಶದ ಆಲ್‌ರೌಂಡರ್ ಸಂಸ್ಕೃತಿ ಗುಪ್ತಾ ಮತ್ತು ರಾಜಸ್ಥಾನದ ವೇಗಿ ಅಕ್ಷಿತಾ ಮಹೇಶ್ವರಿ ಬಿಡ್ ಮಾಡಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ 18 ಸದಸ್ಯರ ಪೂರ್ಣ ಬಲವನ್ನು ಹೊಂದಿದೆ.

WPL 2025 Nita Ambani says Mumbai Indians women s team is trying to develop young talent

ಬೆಂಗಳೂರಿನಲ್ಲಿ ನಡೆದ ಡಬ್ಲ್ಯೂಪಿಎಲ್ ಮಿನಿ ಹರಾಜಿನ ನಂತರ ಮಾತನಾಡಿದ ನೀತಾ ಅಂಬಾನಿ, 'ಇಂದು ನಾವು ಒಟ್ಟುಗೂಡಿಸಿದ ತಂಡದಿಂದ ತೃಪ್ತರಾಗಿದ್ದು, ತುಂಬಾ ಸಂತೋಷವಾಗಿದ್ದೇವೆ. ಹರಾಜು ಪ್ರಕಿಯೆಯಲ್ಲಿ ಭಾಗವಹಿಸಿದ ಆಟಗಾರ್ತಿಯರು ಮತ್ತು ಈಗ ಮುಂಬೈ ಇಂಡಿಯನ್ಸ್ ಕುಟುಂಬದ ಭಾಗವಾಗಿರುವ ಜಿ. ಕಮಲಿನಿ, ನಾಡಿನ್ ಡಿ ಕ್ಲರ್ಕ್, ಸಂಸ್ಕೃತಿ ಗುಪ್ತಾ ಮತ್ತು ಅಕ್ಷಿತಾ ಮಹೇಶ್ವರಿ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ ಎಂದಿದ್ದಾರೆ.

ಯುವ ಪ್ರತಿಭೆಗಳ ಯಶಸ್ಸಿಗೆ ಮೆಟ್ಟಿಲು

ಡಬ್ಲ್ಯೂಪಿಎಲ್ ಮಿನಿ ಹರಾಜಿನಲ್ಲಿ ಬಿಡ್ ಮಾಡಿದ ನಾಲ್ಕು ಹೊಸ ಆಟಗಾರ್ತಿಯರನ್ನು ನೀತಾ ಅಂಬಾನಿ ಅವರು ವಿಶೇಷ ಸಂದೇಶದ ಮೂಲಕ ಸ್ವಾಗತಿಸಿದರು. 'ಮುಂಬೈ ಇಂಡಿಯನ್ಸ್ ಕುಟುಂಬಕ್ಕೆ ನಾವು ನಿಮ್ಮನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ಮುಂಬೈ ಇಂಡಿಯನ್ಸ್ ಯಾವಾಗಲೂ ಯುವ ಪ್ರತಿಭೆಗಳನ್ನು ಹುಡುಕಿ, ಪೋಷಿಸಿ ಮತ್ತು ಬೆಳೆಸಲು ಪ್ರಯತ್ನಿಸುತ್ತದೆ. ನಾವು ಇದನ್ನು ನಮ್ಮ ಪುರುಷರ ತಂಡದೊಂದಿಗೂ ಮಾಡಿದ್ದೇವೆ. ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಮತ್ತು ತಿಲಕ್ ವರ್ಮಾ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇದನ್ನ ನೋಡುವಾಗ ನಮಗೆ ಹೆಮ್ಮೆಯ ಭಾವನೆ ಬರುತ್ತದೆ. ನಾವು ನಮ್ಮ ಹುಡುಗಿಯರೊಂದಿಗೆ ಅದೇ ಕೆಲಸವನ್ನು ಮಾಡಲು ಪ್ರಯತ್ನಿಸುತ್ತಿದ್ದೇವೆ. ಕಳೆದ ವರ್ಷ ನಾವು ಸಜನಾ ಅವರನ್ನು ಹರಾಜಿನಲ್ಲಿ ಬಿಡ್ ಮಾಡಿದ್ದೇವೆ. ಈಗ ಅವರು ಟೀಮ್ ಇಂಡಿಯಾ ಪರ ಆಡುತ್ತಿರುವುದನ್ನು ನೋಡಲು ಅದ್ಭುತವೆನಿಸುತ್ತದೆ' ಎಂದು ನೀತಾ ಅಂಬಾನಿ ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್ ಈ ಬಾರಿಯ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಜಿ ಕಮಲಿನಿ ಅವರನ್ನು 1.60 ಕೋಟಿ ರೂ. ಗಳಿಗೆ ಬಿಡ್ ಮಾಡುವ ಮೂಲಕ ಅಚ್ಚರಿ ಮೂಡಿಸಿತ್ತು. ತಮಿಳುನಾಡಿನ 16 ವರ್ಷದ ಯುವ ಬ್ಯಾಟರ್ ಕಮಲಿನಿ ಅವರು ಭಾನುವಾರವೇ ಅಂಡರ್-19 ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಪರ ತನ್ನ ಚೊಚ್ಚಲ ಪಂದ್ಯವನ್ನು ಆಡಿದರು. ಈ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿದ ಕಮಲಿನಿ 29 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್‌ ನೆರವಿನಿಂದ ಅಜೇಯ 44 ರನ್‌ಗಳ ಕಲೆ ಹಾಕಿದ್ದರು.

ಇದೇ ವೇಳೆ ಕಮಲಿನಿ ಅವರನ್ನು ಬಿಡ್ ಮಾಡಿದ ಬಗ್ಗೆ ಮಾತನಾಡಿದ ನೀತಾ ಅಂಬಾನಿ, 'ಈ ವರ್ಷ ನಾವು 16 ವರ್ಷದ ಕಮಲಿನಿ ಅವರ ಸೇರ್ಪಡೆಯಿಂದ ತುಂಬಾ ಉತ್ಸುಕರಾಗಿದ್ದೇವೆ. ನಮ್ಮ ಟ್ಯಾಲೆಂಟ್ ಸ್ಕೌಟ್ಸ್ ಕಮಲಿನಿ ಆಟವನ್ನು ಗಮನಿಸುತ್ತಿದ್ದರು. ಅವರಲ್ಲಿ ಅದ್ಭುತ ಪ್ರತಿಭೆಯಿದೆ ಎಂದು ಹೇಳಿದ್ದಾರೆ.

Story first published: Monday, December 16, 2024, 17:05 [IST]
Other articles published on Dec 16, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+