Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2025 RCB: ಆರ್‌ಸಿಬಿ ತಂಡ ಸೇರಿಕೊಂಡ ಕ್ವೀನ್ ಎಲ್ಲಿಸ್ ಪೆರ್ರಿ; ಅಭಿಮಾನಿಗಳಿಗೆ ಸಂತಸ

ಬಹುನಿರೀಕ್ಷಿತ ವುಮನ್ಸ್ ಪ್ರೀಮಿಯರ್ ಲೀಗ್‌ (ಡಬ್ಲ್ಯೂಪಿಎಲ್) 2025ರ ಟೂರ್ನಿ ಆರಂಭಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಫೆಬ್ರವರಿ 14 ರಿಂದ ಡಬ್ಲ್ಯೂಪಿಎಲ್ ಮೂರನೇ ಆವೃತ್ತಿ ಶುರುವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಗುಜರಾತ್ ಟೈಟಾನ್ಸ್ ವನಿತೆಯರ ತಂಡಗಳು ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನ ಆರ್‌ಸಿಬಿ ತಂಡವನ್ನು ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಎಲ್ಲಿಸ್ ಪೆರ್ರಿ ಸೇರಿಕೊಂಡಿದ್ದಾರೆ. ಎಲ್ಲಿಸ್ ಪೆರ್ರಿ ತಂಡ ಸೇರಿರುವುದು ಆರ್‌ಸಿಬಿ ಅಭಿಮಾನಿಗಳಿಗೆ ಸಂತಸ ತರಿಸಿದೆ.

ಎಲ್ಲಿಸ್ ಪೆರ್ರಿ ಇತ್ತೀಚೆಗೆ ಗಾಯದಿಂದ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಈ ಬಾರಿ ಅವರು ಡಬ್ಲ್ಯೂಪಿಎಲ್ ಅನುಮಾನ ಎನ್ನಲಾಗಿತ್ತು. ಆದರೆ, ಇದೀಗ ಎಲ್ಲಿಸ್ ಪೆರ್ರಿ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿದ್ದು, ಆರ್‌ಸಿಬಿ ಪರ ಈ ಬಾರಿಯೂ ಮಿಂಚಲು ರೆಡಿಯಾಗಿದ್ದಾರೆ. ಈ ಸುದ್ದಿ ಕೇಳಿ ಆರ್‌ಸಿಬಿ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

WPL 2025 Queen Ellyse Perry joins RCB squad

ಎಲ್ಲಿಸ್ ಪೆರ್ರಿ ತಂಡ ಸೇರಿರುವುದನ್ನು ಆರ್‌ಸಿಬಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದು ತಿಳಿಸಿದೆ. ಈಗಾಗಲೇ ನಾಯಕಿ ಸ್ಮೃತಿ ಮಂಧಾನ, ರೇಣುಕಾ ಸಿಂಗ್, ಹೀದರ್ ನೈಟ್, ಜಾರ್ಜಿಯಾ ವೇರ್‌ಹ್ಯಾಮ್ ಮತ್ತು ಕಿಮ್ ಗಾರ್ತ್ ಸೇರಿದಂತೆ ಇತರ ಆಟಗಾರ್ತಿಯರು ಆರ್‌ಸಿಬಿ ತಂಡವನ್ನು ಸೇರಿದ್ದಾರೆ.

ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ಪ್ರಶಸ್ತಿ ಗೆಲುವಿನಲ್ಲಿ ಎಲ್ಲಿಸ್ ಪೆರ್ರಿ ಪ್ರಮುಖ ಪಾತ್ರ ವಹಿಸಿದ್ದರು. ಅದ್ಭುತ ಆಲ್‌ರೌಂಡರ್ ಪ್ರದರ್ಶನ ನೀಡಿದ ಪೆರ್ರಿ ಆರ್‌ಸಿಬಿ ಅಭಿಮಾನಿಗಳ ಚಿತ್ತ ಕದ್ದಿದ್ದರು. ಟೂರ್ನಿಯುದ್ದಕ್ಕೂ ಅಬ್ಬರ ಬ್ಯಾಟಿಂಗ್ ಮಾಡಿದ ಅವರು ಆರೆಂಜ್ ಕ್ಯಾಪ್ ಅನ್ನು ತಮ್ಮದಾಗಿಸಿಕೊಂಡಿದ್ದರು. ಅವರು ಆಡಿದ 9 ಪಂದ್ಯಗಳಲ್ಲಿ 69.40 ರ ಸರಾಸರಿಯಲ್ಲಿ ಮತ್ತು 125.72 ರ ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 347 ರನ್ ಗಳಿಸಿದರು. ಈ ಸಂದರ್ಭದಲ್ಲಿ ಅವರು ಎರಡು ಅರ್ಧಶತಕಗಳನ್ನು ಬಾರಿಸಿದ್ದರು.

ಗಾಯಗೊಂಡಿದ್ದೇಗೆ?

ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಆಶಸ್ ಟೆಸ್ಟ್ ಸರಣಿ ವೇಳೆ ಎಲ್ಲಿಸ್ ಪೆರ್ರಿ ಗಾಯಗೊಂಡಿದ್ದರು. ಪಿಂಕ್-ಬಾಲ್ ಟೆಸ್ಟ್ ಪಂದ್ಯದ ಸಮಯದಲ್ಲಿ ಮೈದಾನದಲ್ಲಿ ಬಿದ್ದು ಎಲಿಸ್ ಪೆರ್ರಿ ಸೊಂಟಕ್ಕೆ ಗಾಯವಾಯಿತು. ಈ ಪೆಟ್ಟಿನಿಂದಾಗಿ ಮೈದಾನದಿಂದ ಅವರು ಹೊರಗುಳಿಯಬೇಕಾಯಿತು. ಇದಾದ ಅವರು 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದರು. ಆದರೆ ನೋವಿನಿಂದ ಬಳಲುತ್ತಿದ್ದ ಅವರು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಇದೀಗ ಗಾಯದಿಂದ ಚೇತರಿಸಿಕೊಂಡಿರುವ ಅವರು 2025ರ ಡಬ್ಲ್ಯೂಪಿಎಲ್ ಆಡುವ ಸಜ್ಜಾಗಿದ್ದಾರೆ. ಈ ಬಾರಿಯೂ ಅವರಿಂದ ಉತ್ತಮ ಪ್ರದರ್ಶನ ನಿರೀಕ್ಷೆಯನ್ನು ಆರ್‌ಸಿಬಿ ಇಟ್ಟುಕೊಂಡಿದೆ.

ಆರ್‌ಸಿಬಿ ತಂಡ

ಸ್ಮೃತಿ ಮಂಧಾನ (ನಾಯಕಿ), ಡ್ಯಾನಿ ವ್ಯಾಟ್-ಹಾಡ್ಜ್, ಎಲ್ಲಿಸ್ ಪೆರ್ರಿ, ಎಸ್ ಮೇಘನಾ, ರಿಚಾ ಘೋಷ್ (ವಿಕೆಟ್‌ಕೀಪರ್), ರಾಘ್ವಿ ಬಿಸ್ಟ್, ಶ್ರೇಯಾಂಕಾ ಪಾಟೀಲ್, ಪ್ರೇಮಾ ರಾವತ್, ಜಾರ್ಜಿಯಾ ವೇರ್‌ಹ್ಯಾಮ್, ಕಿಮ್ ಗಾರ್ತ್, ಕನಿಕಾ ಎ ರೆಹುಜಾ, ಏಕ್ತಾ ಬಿಶ್ತ್, ಚಾರ್ಲಿ ಡೀನ್, ವಿಜೆ ಜೋಶಿತಾ, ಜಾಗರವಿ ಪವಾರ್, ಆಶಾ ಸೋಭಾನಾ, ಹೀದರ್ ಗ್ರಹಾಂ.

Story first published: Tuesday, February 11, 2025, 12:04 [IST]
Other articles published on Feb 11, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+