Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2025: ಇವರೇ ನೋಡಿ RCB ಬ್ಯಾಟಿಂಗ್ ದೈತ್ಯ ಶಕ್ತಿ

ಮಹಿಳಾ ಪ್ರೀಮಿಯರ್‌ ಲೀಗ್‌ ಮೂರನೇ ಆವೃತ್ತಿಗೆ ಸಿದ್ಧತೆಗಳು ಭರದಿಂದ ಸಾಗಿವೆ. ಈ ವೇಳೆ ಸ್ಟಾರ್ ಆಟಗಾರ್ತಿಯರ ಆಟವನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಸಹ ಸಿದ್ಧರಾಗಿದ್ದಾರೆ. ಐದು ತಂಡಗಳು ಈ ಬಾರಿ ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಹಾಲಿ ಚಾಂಪಿಯನ್‌ ಪಟ್ಟವನ್ನು ಹೊತ್ತಿರುವ ಆರ್‌ಸಿಬಿ ಅಂಗಳ ಪ್ರವೇಶಿಸಲಿದೆ. ಸ್ಟಾರ್‌ ಆಟಗಾರ್ತಿಯರನ್ನೇ ಹೊಂದಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮತ್ತೊಮ್ಮೆ ಪ್ರಶಸ್ತಿ ಗೆಲುವಿನ ಕನಸು ಕಾಣುತ್ತಿದೆ.

ಮಹಿಳಾ ಲೀಗ್‌ನಲ್ಲೂ ಅತ್ಯಂತ ಜನಪ್ರೀಯ ತಂಡಗಳಲ್ಲಿ ಆರ್‌ಸಿಬಿಗೆ ಅಗ್ರ ಸ್ಥಾನ. ಇನ್ನು ಕಳೆದ ಬಾರಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದ ಮೇಲೆ ಈ ಆಟಗಾರ್ತಿಯರು ಅಭಿಮಾನಿಗಳ ಚಿತ್ತ ಕದ್ದಿದ್ದಾರೆ. ಆರ್‌ಸಿಬಿ ಪರ ಅಮೋಘ ಬ್ಯಾಟಿಂಗ್ ನಡೆಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಟಾಪ್ 5 ಆಟಗಾರರ ಪಟ್ಟಿ ಇಲ್ಲಿದೆ.

WPL 2025 RCB s Top Batting Stars Ready to Defend Their Title

ಆಸೀಸ್‌ ಆಟಗಾರ್ತಿ ಮ್ಯಾಜಿಕ್‌

ಟಿ20 ಕ್ರಿಕೆಟ್‌ನಲ್ಲಿ ಆಲ್‌ರೌಂಡರ್‌ಗಳಿಗೆ ಹೆಚ್ಚಿನ ಆದ್ಯತೆ. ಈ ವೇಳೆ ಆರ್‌ಸಿಬಿ ಪರ ಆಡುವ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್‌ ಎಲ್ಲಿಸಾ ಪೆರ್ರಿ ತಮ್ಮ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಿಂದ ತಂಡಕ್ಕೆ ಆಧಾರವಾದ ಆಟಗಾರ್ತಿ. ಇವರು ಆರ್‌ಸಿಬಿ ಪರ 17 ಪಂದ್ಯಗಳನ್ನು ಆಡಿದ್ದು, 54ರ ಸರಾಸರಿಯಲ್ಲಿ 600 ರನ್‌ ಕಲೆ ಹಾಕಿದ್ದಾರೆ. ಈ ವೇಳೆ 4 ಅರ್ಧಶತಕಗಳು ಸೇರಿವೆ.

ಸ್ಮೃತಿ ಆಕರ್ಷಣೆ

ಟೀಮ್ ಇಂಡಿಯಾದ ಭರವಸೆಯ ಆಟಗಾರ್ತಿ ಸ್ಮೃತಿ ಮಂಧನಾ ಆರ್‌ಸಿಬಿ ಪರ ಅಮೋಘ ಬ್ಯಾಟಿಂಗ್ ನಡೆಸಿದ್ದಾರೆ. ಇವರು ಆಡಿರುವ 18 ಪಂದ್ಯಗಳಲ್ಲಿ 449 ರನ್‌ ಕಲೆ ಹಾಕಿ ಮಿಂಚಿದ್ದಾರೆ. ಇವರ ಬ್ಯಾಟ್‌ನಿಂದ 2 ಅರ್ಧಶತಕಗಳು ದಾಖಲಾಗಿವೆ. ಅಲ್ಲದೆ ಇವರು ಆರ್‌ಸಿಬಿ ತಂಡವನ್ನು ಮುನ್ನಡೆಸುತ್ತಿರುವುದು ಹೆಮ್ಮೆಯ ಸಂಗತಿ.

WPL 2025 RCB s Top Batting Stars Ready to Defend Their Title

ಸೋಫಿಯಾ ಡಿವೈನ್‌

ನ್ಯೂಜಿಲೆಂಡ್ ತಂಡದ ಸೋಫಿಯಾ ಡಿವೈನ್‌ ಸಹ ಆರ್‌ಸಿಬಿ ಪರ ಆಡಿ ಸೈ ಎನಿಸಿಕೊಂಡಿರುವ ಆಟಗಾರ್ತಿ. ಇವರು ತಮ್ಮ ಸ್ಥಿರ ಬ್ಯಾಟಿಂಗ್‌ನಿಂದ ತಂಡಕ್ಕೆ ಆಧಾರವಾದ ಪ್ಲೇಯರ್. ಇವರು 23ರ ಸರಾಸರಿಯಲ್ಲಿ 17 ಪಂದ್ಯಗಳಲ್ಲಿ 402 ರನ್‌ ಸಿಡಿಸಿದ್ದಾರೆ. ಇದರಲ್ಲಿ 2 ಅರ್ಧಶತಕ ಸಿಡಿಸಿದ್ದಾರೆ.

ರಿಚಾ ಘೋಷ್

ಇದೇ ಪಟ್ಟಿಯಲ್ಲಿ ಸ್ಥಾನ ಪಡೆಯುವ ಇನ್ನೋವ ಆಟಗಾರ್ತಿ ರಿಚಾ ಘೋಷ. ಇವರು ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ತಂಡಕ್ಕೆ ನೆರವಾಗಬಲ್ಲ ಪ್ಲೇಯರ್‌. ಇವರು ಆಡಿದ 18 ಪಂದ್ಯಗಳಲ್ಲಿ 32ರ ಸರಾಸರಿಯಲ್ಲಿ 395 ರನ್‌ ಕಲೆ ಹಾಕಿದ್ದಾರೆ. ಈ ವೇಳೆ ಇವರ ಸ್ಟ್ರೈಕ್‌ ರೇಟ್‌ 140 ಆಗಿದೆ.

ಭಾರತದ ಭರವಸೆಯ ಆಟಗಾರ್ತಿ ಸಬ್ಭಿನೇನಿ ಮೇಘನಾ ಸಹ ಆರ್‌ಸಿಬಿ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಿದ ಪ್ಲೇಯರ್. ಇವರು ತಮ್ಮ ಸ್ಥಿರ ಪ್ರದರ್ಶನದ ಬಲದಿಂದ ತಂಡದ ಮೊತ್ತವನ್ನು ಹಿಗ್ಗಿಸಬಲ್ಲ ಪ್ಲೇಯರ್‌. ಇವರು ಆಡಿದ 7 ಪಂದ್ಯಗಳಲ್ಲಿ 168 ರನ್‌ ಸಿಡಿಸಿ ಅಭಿಮಾನಿಗಳ ಚಿತ್ತ ಕದ್ದಿದ್ದಾರೆ.

Story first published: Sunday, February 9, 2025, 9:00 [IST]
Other articles published on Feb 9, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+