Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL Retentions 2025: ಕನ್ನಡತಿ ಶ್ರೇಯಾಂಕಾ ಪಾಟೀಲ್‌ ಉಳಿಸಿಕೊಂಡ RCB: ರಿಟೇನ್ಷನ್‌ ಫುಲ್‌ ಲೀಸ್ಟ್‌ ಇಲ್ಲಿದೆ

ಐಪಿಎಲ್‌ ರಿಟೇನ್ಷನ್‌ ಲೀಸ್ಟ್‌ ಗೊಂದಲ ಮುಗಿದಿದೆ. ಮಹಿಳಾ ಪ್ರೀಮಿಯರ್ ಲೀಗ್‌ ರಿಟೇನ್ಷನ್‌ ಲೀಸ್ಟ್‌ ಹೊರ ಬಿದ್ದಿದೆ. ಗುರುವಾರ ಮಹಿಳಾ ಪ್ರೀಮಿಯರ್ ಲೀಗ್‌ ಮಾಲೀಕರು ತಾವು ಕೈ ಬಿಟ್ಟ ಹಾಗೂ ಉಳಿಸಿಕೊಂಡ ಆಟಗಾರರ ಲೀಸ್ಟ್‌ನ್ನು ಬಿಸಿಸಿಐಗೆ ಸಲ್ಲಿಸಿದ್ದಾರೆ. ಹಾಲಿ ಚಾಂಪಿಯನ್‌ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಏಳು ಆಟಗಾರರನ್ನು ರಿಲೀಸ್ ಮಾಡಿದೆ. ಎಲ್ಲಾ ಫ್ರಾಂಚೈಸಿಗಳು ಮಹಿಳಾ ಪ್ರೀಮಿಯರ್ ಲೀಗ್ 2025 ಮಿನಿ ಹರಾಜಿನ ಮೊದಲು ತಮ್ಮ ರಿಟೇನ್ಷನ್‌ ಲೀಸ್ಟ್‌ನ್ನು ನೀಡಿವೆ. ಆರ್‌ಸಿಬಿ ತಂಡವು 7 ಆಟಗಾರರನ್ನು ಬಿಡುಗಡೆ ಮಾಡಿದೆ. ಆರ್‌ಸಿಬಿ ತಂಡ ಸ್ಟಾರ್ ಆಟಗಾರರನ್ನು ಉಳಿಸಿಕೊಂಡಿದ್ದು, ಕೆಲವು ವಿದೇಶಿ ಆಟಗಾರರನ್ನು ರಿಲೀಸ್‌ ಮಾಡಿದೆ.

ಹಾಲಿ ಚಾಂಪಿಯನ್‌ ಆರ್‌ಸಿಬಿ 14 ಆಟಗಾರರನ್ನು ಉಳಿಸಿಕೊಂಡಿದೆ. ಉಳಿಸಿಕೊಂಡ ಆಟಗಾರರು ಎಂದರೆ, ಸ್ಮೃತಿ ಮಂಧಾನ, ರಿಚಾ ಘೋಷ್, ರೇಣುಕಾ ಠಾಕೂರ್, ಆಶಾ ಶೋಭನಾ, ಸೋಫಿ ಡಿವೈನ್, ಶ್ರೇಯಾಂಕಾ ಪಾಟೀಲ್‌, ಏಕ್ತಾ ಬಿಶ್ತ್, ಎಸ್‌.ಮೇಘನಾ, ಆಸ್ಟ್ರೇಲಿಯಾದ ಸ್ಟಾರ್‌ ಆಲ್‌ರೌಂಡರ್‌ ಎಲ್ಲಿಸ್‌ ಪೆರ್ರಿ, ಜಾರ್ಜಿಯಾ ವೇರ್‌ಹ್ಯಾಮ್, ಸೋಫಿ ಮೊಲಿನೆಕ್ಸ್, ಕನಿಕಾ ಎಹುಜಾಸ್ ಹಾಗೂ ಟ್ರೇಡ್ ಮಾಡಲಾಗಿರುವ ಡ್ಯಾನಿ ವ್ಯಾಟ್-ಹಾಡ್ಜ್ ಅವರನ್ನು ತಂಡದಲ್ಲಿ ಉಳಿಸಿಕೊಂಡಿದೆ. ಕನ್ನಡತಿ ಶ್ರೇಯಾಂಕಾ ಪಾಟೀಲ್‌ ಅವರಿಗೂ ತಂಡ ಮಣೆ ಹಾಕಿದೆ.

WPL 2025 Retentions RCB Retains Kannadiga Star Ranka Patil Full Retention List Announced

7 ಆಟಗಾರರಿಗೆ ಗೇಟ್‌ ಪಾಸ್ ನೀಡಿರುವ ಆರ್‌ಸಿಬಿ

ಇನ್ನು ಆರ್‌ಸಿಬಿ ಏಳು ಆಟಗಾರರನ್ನು ರಿಲೀಸ್ ಮಾಡಿದೆ. ದಿಶಾ ಕ್ಯಾಸಟ್, ಇಂದ್ರಾಣಿ ರಾಯ್, ನಡಿನ್ ಡಿ ಕ್ಲರ್ಕ್, ಶುಭಾ ಸತೀಶ್, ಶ್ರದ್ಧಾ ಪೋಕ್ಕರ್, ಸಿಮ್ರಾನ್ ಬಹದ್ದೂರ್, ಹೀದರ್ ನೈಟ್ ಅವರನ್ನು ಆರ್‌ಸಿಬಿ ಟೀಮ್ ಮ್ಯಾನೇಜ್ಮೆಂಟ್‌ ಕೈ ಬಿಟ್ಟಿದೆ.

ನಾಲ್ಕು ಆಟಗಾರರನ್ನು ರಿಲೀಸ್ ಮಾಡಿದ ಮುಂಬೈ

ಮುಂಬೈ ಇಂಡಿಯನ್ಸ್ ತಂಡದಲ್ಲಿ ಹೆಚ್ಚಿನ ಬದಲಾವಣೆ ಇಲ್ಲ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ತಂಡ, ಸ್ಟಾರ್ ಆಟಗಾರರನ್ನು ಉಳಿಸಿಕೊಂಡಿದೆ. ಪ್ರಿಯಾಂಕಾ ಬಾಲಾ, ಹುಮೈರಾ ಕಾಜಿ, ಫಾತಿಮಾ ಜಾಫರ್, ಇಸ್ಸಿ ವಾಂಗ್ ಅವರನ್ನು ಒಂದು ಬಾರಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ಕೈ ಬಿಟ್ಟಿದೆ.

ಗುಜರಾತ್ ಜೈಂಟ್ಸ್‌ ತಂಡ, ಸ್ನೇಹ ರಣಾ, ಕ್ಯಾಥರಿನ್ ಬ್ರೈಸ್, ವೇದಾ ಕೃಷ್ಣಮೂರ್ತಿ, ತರನ್ನುಮ್ ಪಠಾಣ್, ಲೀ ತಹುಹು ಅವರನ್ನು ಹರಾಜು ಅಂಗಳಕ್ಕೆ ಬಿಟ್ಟಿದೆ. ಯುಪಿ ವಾರಿಯರ್ಸ್‌ ಲಾರೆನ್ ಬೆಲ್, ಪಾರ್ಶವಿ ಚೋಪ್ರಾ, ಲಕ್ಷ್ಮಿ ಯಾದವ್, ಎಸ್ ಯಶಸ್ರಿ ಅವರನ್ನು ಕೈ ಬಿಟ್ಟಿದೆ. ಎರಡು ಬಾರಿ ಮಹಿಳಾ ಪ್ರೀಮಿಯರ್ ಲೀಗ್ ಫೈನಲ್‌ ತಲುಪಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಿಂದ ಲಾರಾ ಹ್ಯಾರಿಸ್, ಅಶ್ವನಿ ಕುಮಾರಿ, ಪೂನಂ ಯಾದವ್, ಅಪರಣಾ ಮೊಂಡಲ್ ಅವರಿಗೆ ರಿಲೀಸ್‌ ಮಾಡಿದೆ.

WPL 2025 Retentions RCB Retains Kannadiga Star Ranka Patil Full Retention List Announced

ಯಾವ ತಂಡದ ಬಳಿ ಎಷ್ಟು ಹಣವಿದೆ?

ಗುಜರಾತ್ ಜೈಂಟ್ಸ್ - 4.4 ಕೋಟಿ
ಯುಪಿ ವಾರಿಯರ್ಜ್ - 3.9 ಕೋಟಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು - 3.25 ಕೋಟಿ
ಮುಂಬೈ ಇಂಡಿಯನ್ಸ್ - 2.65 ಕೋಟಿ
ದೆಹಲಿ ಕ್ಯಾಪಿಟಲ್ಸ್ - 2.5 ಕೋಟಿ

Story first published: Thursday, November 7, 2024, 18:53 [IST]
Other articles published on Nov 7, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+