ಮಹಿಳಾ ಪ್ರೀಮಿಯರ್ ಲೀಗ್‌ನ 14 ನೇ ಪಂದ್ಯವು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಿತು. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಆರ್‌ಸಿಬಿ ಸೋಲು ಕಂಡಿದೆ. ಈ ಋತುವಿನಲ್ಲಿ ಆರ್‌ಸಿಬಿ ವನಿತೆಯರ ತಂಡ ಸತತ ನಾಲ್ಕನೇ ಪಂದ್ಯವನ್ನು ತವರಿನಲ್ಲಿ ಸೋತಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರ್‌ಸಿಬಿಯನ್ನು 9 ವಿಕೆಟ್‌ಗಳಿಂದ ಸೋಲಿಸಿ ಪ್ಲೇ ಆಫ್‌ಗೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಇದರೊಂದಿಗೆ ಆರ್‌ಸಿಬಿ ಪ್ಲೇ ಆಫ್ ಹಾದಿ ಕಠಿಣವಾಗಿದೆ.
ಈ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಸ್ಮೃತಿ ಮಂದಾನ ನೇತೃತ್ವದ ಆರ್‌ಸಿಬಿ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತು. ಆರ್‌ಸಿಬಿ ನೀಡಿದ ಸುಲಭ ಗುರಿ ಬೆನ್ನಟ್ಟಿದ ಡೆಲ್ಲಿ ಕೇವಲ 16 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.

ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಮತ್ತೊಮ್ಮೆ ಬಿಗ್ ಇನ್ನಿಂಗ್ಸ್ ಆಡುವಲ್ಲಿ ಎಡುವಿದರು. ಸ್ಮೃತಿ ಮಂಧಾನ ಕೇವಲ 8 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಎಲ್ಲಿಸ್ ಪೆರ್ರಿ ಡಬ್ಲ್ಯೂಪಿಎಲ್ 2025ರ ನಾಲ್ಕನೇ ಅರ್ಧಶತಕವನ್ನು ಪೂರೈಸಿದರು. ಅವರು 47 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್‌ಗಳು ನೆರವಿನಿಂದ 60 ರನ್ ಬಾರಿಸಿದರು. ಡ್ಯಾನಿ ವ್ಯಾಟ್-ಹಾಡ್ಜ್ (21) ಮತ್ತು ರಾಘ್ವಿ ಬಿಶ್ತ್ (33) 68 ರನ್ ಗಳ ಜೊತೆಯಾಟ ಆಡುವ ಮೂಲಕ ಆರ್‌ಸಿಬಿ ಇನ್ನಿಂಗ್ಸ್ ಅನ್ನು ಬಲಪಡಿಸಿದರು.
ಈ ಶತಕದೊಂದಿಗೆ, ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ಈ ವರ್ಷದ ಡಬ್ಲ್ಯೂಪಿಎಲ್‌ನಲ್ಲಿ ಆರು ಪಂದ್ಯಗಳಲ್ಲಿ 98.33 ಸರಾಸರಿಯಲ್ಲಿ 295 ರನ್ ಗಳಿಸುವ ಮೂಲಕ ಆರ್‌ಸಿಬಿ ತಂಡಕ್ಕೆ ನೆರವಾದರು. ಡೆಲ್ಲಿ ಕ್ಯಾಪಿಟಲ್ಸ್ ಪರ ಶಿಖಾ ಪಾಂಡೆ ಮತ್ತು ನಲ್ಲಪುರರೆಡ್ಡಿ ಚರಣಿ ತಲಾ
2 ವಿಕೆಟ್ ಕಬಳಿಸಿದರೆ, ಮರಿಜಾನ್ನೆ ಕಪ್ 1 ವಿಕೆಟ್ ಪಡೆದರು.
ಆರ್‌ಸಿಬಿ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಕೇವಲ 15.3 ಓವರ್‌ಗಳಲ್ಲೇ 1 ವಿಕೆಟ್ ಕಳೆದುಕೊಂಡು ಪಂದ್ಯವನ್ನು ಗೆದ್ದು ಬೀಗಿತು. ಇದರೊಂದಿಗೆ ಆರ್‌ಸಿಬಿ ಸೋಲಿಸಿ ಡೆಲ್ಲಿ ಪ್ಲೇಆಫ್ ಪ್ರವೇಶಿಸಿತು. ಡೆಲ್ಲಿ ಪರ ಬಿರುಸಿನ ಬ್ಯಾಟಿಂಗ್ ಮಾಡಿದ ಶಫಾಲಿ ವರ್ಮಾ 43 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್‌ಗಳ ನೆರವಿನಿಂದ 80 ಬಾರಿಸಿದರು. ಮತ್ತೊಂದೆಡೆ ಜೆಸ್ ಜೊನಾಸ್ಸೆನ್ 38 ಎಸೆತಗಳಲ್ಲಿ 9 ಬೌಂಡಡಿ ಮತ್ತು 1 ಸಿಕ್ಸರ್ ಮೂಲಕ 61 ರನ್ ಗಳಿಸಿದರು. ನಾಯಕಿ ಮೆಗ್ ಲ್ಯಾನಿಂಗ್ ಕೇವಲ 2 ರನ್ ಗಳಿಸಿ ಔಟಾದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನ (ನಾಯಕ), ಡೇನಿಯಲ್ ವ್ಯಾಟ್-ಹಾಡ್ಜ್, ಎಲ್ಲಿಸ್ ಪೆರ್ರಿ, ರಾಘ್ವಿ ಬಿಸ್ಟ್, ಕನಿಕಾ ಅಹುಜಾ, ರಿಚಾ ಘೋಷ್ (ವಿಕೆಟ್‌ಕೀಪರ್), ಜಾರ್ಜಿಯಾ ವಾರೆಹಮ್, ಕಿಮ್ ಗಾರ್ತ್, ಸ್ನೇಹ ರಾಣಾ, ರೇಣುಕಾ ಸಿಂಗ್ ಠಾಕೂರ್, ಏಕ್ತಾ ಬಿಶ್ತ್.
ಡೆಲ್ಲಿ ಕ್ಯಾಪಿಟಲ್ಸ್: ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಅನ್ನಾಬೆಲ್ ಸದರ್ಲ್ಯಾಂಡ್, ಮರಿಜಾನ್ನೆ ಕಪ್, ಜೆಸ್ ಜೊನಾಸೆನ್, ಸಾರಾ ಬ್ರೈಸ್ (ವಿಕೆಟ್‌ಕೀಪರ್), ನಿಕಿ ಪ್ರಸಾದ್, ಶಿಖಾ ಪಾಂಡೆ, ಮಿನ್ನು ಮಣಿ, ನಲ್ಲಪುರೆಡ್ಡಿ ಚರಣಿ.