WPL 2025: ಸೂಪರ್ ಓವರ್‌ನಲ್ಲಿ ಗೆಲ್ಲೋ ಪಂದ್ಯ ಸೋತ ಆರ್‌ಸಿಬಿ
ಎಂ ಚಿನ್ನಾಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಸ್ ನಡುವಿನ ಡಬ್ಲ್ಯುಪಿಎಲ್ 2025ರ ಪಂದ್ಯವು ಸೂಪರ್ ಓವರ್‌ನಲ್ಲಿ ಕೊನೆಗೊಂಡಿತು. ಆರ್‌ಸಿಬಿ ನೀಡಿದ 180 ರನ್ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್ ಕೂಡಾ 180 ರನ್ ಗಳಿಸಿ ಪಂದ್ಯವನ್ನು ಟೈ ಮಾಡಿಕೊಂಡಿತು. ಹೀಗಾಗಿ ಪಂದ್ಯ ಸೂಪರ್ ಓವರ್‌ಗೆ ಹೋಯಿತು.
ಸೂಪರ್ ಓವರ್‌ನಲ್ಲಿ ಯುಪಿ ವಾರಿಯರ್ಸ್ ಮೊದಲು ಬ್ಯಾಟಿಂಗ್ ಮಾಡಿ 8 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಆರ್‌ಸಿಬಿ 6 ಎಸೆತಗಳಲ್ಲಿ ಕೇವಲ 4 ರನ್ ಕಲೆ ಹಾಕಿತು. ಇದರೊಂದಿಗೆ ಆರ್‌ಸಿಬಿ 4 ರನ್‌ಗಳ ಸೋಲು ಕಂಡತು. ಡಬ್ಲ್ಯುಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸೂಪರ್ ಓವರ್ ಪಂದ್ಯ ನಡೆದಿರುವುದು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಪಿ ವಾರಿಯರ್ಸ್ ನಾಯಕಿ ದೀಪ್ತಿ ಶರ್ಮಾ ಆರ್‌ಸಿಬಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಆರ್‌ಸಿಬಿ ಆರಂಭಿಕರಾಗಿ ನಾಯಕಿ ಸ್ಮೃತಿ ಮಂಧಾನ ಕೇವಲ 6 ರನ್ ಗಳಿಸಿ ಔಟಾದರು. ನಂತರ ಒಂದಾದ ಡೇನಿಯಲ್ ವ್ಯಾಟ್-ಹಾಡ್ಜ್ ಮತ್ತು ಎಲ್ಲಿಸ್ ಪೆರ್ರಿ ಆರ್‌ಸಿಬಿ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ವ್ಯಾಟ್-ಹಾಡ್ಜ್ 57 ರನ್ ಗಳಿಸಿ ವಿಕೆಟ್ ಕಳೆದುಕೊಂಡರೆ, ಎಲ್ಲಿಸ್ ಪೆರ್ರಿ 56 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್‌ಗಳ ನೆರವಿನಿಂದ ಅಜೇಯ 90 ರನ್‌ಗಳ ಬಿಗ್ ಇನ್ನಿಂಗ್ಸ್ ಆಡಿದರು. ಇದರಿಂದಾಗಿ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 180 ರನ್ ಗಳಿಸಿತು.
ಆರ್‌ಸಿಬಿ ನೀಡಿದ ಗೆಲುವಿನ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್ ಕೂಡ 20 ಓವರ್‌ಗಳಲ್ಲಿ 180 ರನ್‌ಗಳನ್ನು ಕಲೆ ಹಾಕುವ ಮೂಲಕ ಆಲೌಟಾಯಿತು. ಯುಪಿ ತಂಡದ ಗೆಲುವಿನಲ್ಲಿ ಶ್ವೇತಾ ಸೆಹ್ರಾವತ್ (31), ದೀಪ್ತಿ ಶರ್ಮಾ (25) ಮತ್ತು ಸೋಫಿ ಎಕ್ಲೆಸ್ಟೋನ್ (33) ಪ್ರಮುಖ ಪಾತ್ರವಹಿಸಿದರು. ಕೊನೆಯಲ್ಲಿ ಯುಪಿ ಗೆಲುವಿಗೆ 6 ಎಸೆತಗಳಲ್ಲಿ 18 ರನ್‌ಗಳ ಅವಶ್ಯಕತೆಯಿತ್ತು.
ಆರ್‌ಸಿಬಿ ಪರ ಕೊನೆಯ ಓವರ್ ಅನ್ನು ರೇಣುಕಾ ಸಿಂಗ್ ಬೌಲಿಂಗ್ ಮಾಡಿದರು. ಈ ಓವರ್‌ನಲ್ಲಿ ಸೋಫಿ ಎಕ್ಲೆಸ್ಟೋನ್ 2 ಸಿಕ್ಸರ್ ಮತ್ತು 1 ಬೌಂಡರಿ ಬಾರಿಸುವ ಮೂಲಕ ಪಂದ್ಯದ ಗತಿಯನ್ನೇ ಬದಲಾಯಿಸಿದರು. ಆದರೆ ಕೊನೆಯ ಎಸೆತದಲ್ಲಿ ಯುಪಿ ಗೆಲ್ಲಲು 1 ರನ್ ಅಗತ್ಯವಿತ್ತು. ಸ್ಟ್ರೈಕ್‌ನಲ್ಲಿದ್ದ ಕ್ರಾಂತಿ ಗೌಡ್ ಈ ಎಸೆತವನ್ನು ಮಿಸ್ ಮಾಡಿಕೊಂಡರು. ಚೆಂಡು ನೇರವಾಗಿ ವಿಕೆಟ್ ಕೀಪರ್ ರಿಚ ಘೋಷ್ ಕೈ ಸೇರಿತು. ಹೀಗಾಗಿ ರನ್ ಕದಿಯಲು ಮುಂದಾದ ಸೋಫಿ ಎಕ್ಲೆಸ್ಟೋನ್ ರನ್ ಔಟ್‌ಗೆ ಬಲಿಯಾದರು. ಪರಿಣಾಮ ಪಂದ್ಯ ಟೈ ಆಗುವ ಮೂಲಕ ಡಬ್ಲ್ಯುಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಸೂಪರ್ ನಡೆಯಲು ಕಾರಣವಾಯಿತು.
ಗೆಲ್ಲೋ ಪಂದ್ಯ ಸೋತ ಆರ್‌ಸಿಬಿ
ಆರ್‌ಸಿಬಿ ಮತ್ತು ಯುಪಿ ವಾರಿಯರ್ಸ್ ನಡುವಿನ ಸೂಪರ್ ಓವರ್ ಪಂದ್ಯ ಭಾರೀ ಕುತೂಹಲ ಮೂಡಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಯುಪಿ ವಾರಿಯರ್ಸ್ 6 ಎಸೆತಗಳಲ್ಲಿ ಕೇವಲ 8 ರನ್ ಗಳಿಸಿತು. ಈ ಮೂಲಕ ಯುಪಿ ವಾರಿಯರ್ಸ್‌ನಿಂದ 9 ರನ್‌ಗಳ ಗೆಲುವಿನ ಗುರಿಯನ್ನು ಆರ್‌ಸಿಬಿ ಪಡೆಯಿತು. ಆದರೆ ಸೋಫಿ ಎಕ್ಲೆಸ್ಟೋನ್ ಅದ್ಭುತವಾಗಿ ಬೌಲಿಂಗ್ ಮಾಡಿ ಆರ್‌ಸಿಬಿ ಸೋಲಿಗೆ ಕಾರಣವಾದರು. ಸೋಫಿ ಎಕ್ಲೆಸ್ಟೋನ್ 6 ಎಸೆತಗಳಲ್ಲಿ ಕೇವಲ 4 ರನ್‌ಗಳನ್ನು ನೀಡಿದರು. ಇದರೊಂದಿಗೆ ಯುಪಿ ವಾರಿಯರ್ಸ್ ವಿರುದ್ದ ಗೆಲ್ಲೋ ಪಂದ್ಯವನ್ನು ಆರ್‌ಸಿಬಿ ಕಳೆದುಕೊಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications