WPL 2025: ಮೊದಲ ಪಂದ್ಯದಲ್ಲೇ ಸ್ಮೃತಿ ಪಡೆ ಇತಿಹಾಸ; ಆರ್‌ಸಿಬಿಗೆ ಜಯ 'ಘೋಷ'
ಮಹಿಳಾ ಪ್ರೀಮಿಯರ್ ಲೀಗ್ 2025ರ ಉದ್ಘಾಟನಾ ಪಂದ್ಯ ಗುಜರಾತ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆಯಿತು. ಡಬ್ಲ್ಯೂಪಿಎಲ್ 2025ರ ಮೊದಲ ಪಂದ್ಯದಲ್ಲಿ ಗುಜರಾತ್ 201 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಆರ್‌ಸಿಬಿ ವನಿತೆಯರ ತಂಡ 6 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದ ಬೀಗಿದೆ. ರಿಚಾ ಘೋಷ್ ಬಿರುಸಿನ ಅರ್ಧಶತಕ ಸಿಡಿಸಿ ಆರ್‌ಸಿಬಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ಮೊದಲ ಪಂದ್ಯದಲ್ಲಿ ಟಾಸ್ ಸೋತ ಗುಜರಾತ್ ಜೈಂಟ್ಸ್ ಮೊದಲು ಸ್ಫೋಟಕ ಬ್ಯಾಟಿಂಗ್ ಮಾಡಿ 4 ವಿಕೆಟ್ ನಷ್ಟಕ್ಕೆ 201 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ಗುಜರಾತ್ ನೀಡಿದ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ 18.3 ಓವರ್‌ಗಳಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡು 202 ರನ್ ಗಳಿಸಿ 9 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್‌ಗಳ ಜಯ ಸಾಧಿಸಿತು.

ಗುಜರಾತ್ ಪರ ನಾಯಕಿ ಆಶ್ಲೀಗ್ ಗಾರ್ಡ್ನರ್ 37 ಎಸೆತಗಳಲ್ಲಿ 3 ಬೌಂಡರಿ ಮತ್ತು 8 ಸಿಕ್ಸರ್‌ಗಳೊಂದಿಗೆ 213.51 ಸ್ಟ್ರೈಕ್ ರೇಟ್‌ನಲ್ಲಿ ಅಜೇಯ 79 ರನ್ ಗಳಿಸಿದರು. ಅವರಲ್ಲದೆ, ಬೆತ್ ಮೂನಿ ಕೂಡ ಅರ್ಧಶತಕ ಗಳಿಸಿದರು. ಮೂನಿ 42 ಎಸೆತಗಳಲ್ಲಿ 8 ಬೌಂಡರಿಗಳ ಸಹಾಯದಿಂದ 52 ರನ್ ಗಳಿಸಿದರು. ಕೊನೆಯಲ್ಲಿ ಡಿಯಾಂಡ್ರಾ ಡಾಟಿನ್ 3 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ 25 ರನ್‌ಗಳ ಕೊಡುಗೆ ನೀಡಿದರು. ಲಾರಾ ವೋಲ್ವಾರ್ಡ್ 6 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರೆ, ದಯಾಲನ್ ಹೇಮಲತಾ 4 ರನ್ ಗಳಿಸಿ ಔಟಾದರು. ಆರ್‌ಸಿಬಿ ಪರ ರೇಣುಕಾ ಸಿಂಗ್ 25 ರನ್‌ಗಳಿಗೆ 2 ವಿಕೆಟ್ ಪಡೆದರೆ, ಕನಿಕಾ ಅಹುಜಾ 19 ರನ್‌ಗಳಿಗೆ 1 ವಿಕೆಟ್ ಪಡೆದರು.
ಪೆರ್ರಿ-ರಿಚಾ ಅಬ್ಬರ
ಆರ್‌ಸಿಬಿ ಪರ ಸ್ಮೃತಿ ಮಂಧಾನ ಮತ್ತು ಡೇನಿಯಲ್ ವ್ಯಾಟ್-ಹಾಡ್ಜ್ ಇನ್ನಿಂಗ್ಸ್ ಆರಂಭಿಸಿದರು. ಆದರೆ ಗುಜರಾತ್ ನಾಯಕಿ ಆಶ್ಲೇ ಗಾರ್ಡ್ನರ್ ಬ್ಯಾಟಿಂಗ್ ಜೊತೆಗೆ ಬೌಲಿಂಗ್‌ನಲ್ಲಿಯೂ ಅದ್ಭುತ ಪ್ರದರ್ಶನ ನೀಡಿದರು. ಆರ್‌ಸಿಬಿ ಇನ್ನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಅವರು 2 ವಿಕೆಟ್‌ಗಳನ್ನು ಪಡೆದು ಆರಂಭಿಕ ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಕಳುಹಿಸಿದರು. ಗಾರ್ಡ್ನರ್ ಮೊದಲು ಸ್ಮೃತಿ (9) ಮತ್ತು ನಂತರ ಹಾಡ್ಜ್ (4) ಔಟ್ ಮಾಡಿದರು. ಈ ಹಂತದಲ್ಲಿ ಆರ್‌ಸಿಬಿ 14 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು.
ಸಂಕಷ್ಟದಲ್ಲಿದ ಆರ್‌ಸಿಬಿಗೆ ನೆರವಾದ ಎಲ್ಲಿಸ್ ಪೆರ್ರಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅವರು 34 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 57 ರನ್‌ಗಳ ಅರ್ಧಶತಕ ಗಳಿಸಿದರೆ, ರಾಘವಿ ಬಿಸ್ಟ್ 25 ರನ್‌ಗಳ ಕೊಡುಗೆ ನೀಡಿ ತಂಡದ ಸ್ಕೋರ್ ಅನ್ನು 100 ರನ್‌ಗಳಿಗೆ ಕೊಂಡೊಯ್ದರು. ಇದಾದ ನಂತರ, ರಿಚಾ ಘೋಷ್ ಅಬ್ಬರ ಶುರುವಾಯಿತು. ಮೊದಲ ಪಂದ್ಯದಲ್ಲಿ 201 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಪರ ರಿಚಾ ಫಿನಿಷರ್ ಪಾತ್ರ ನಿರ್ವಹಿಸಿದರು. ಅವರು 27 ಎಸೆತಗಳಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್‌ಗಳ ನೆರವಿನಿಂದ ಅಜೇಯ 64 ರನ್ ಬಾರಿಸಿ ಆರ್‌ಸಿಬಿ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಗುಜರಾತ್ ಪರ ಆಶ್ಲೀಗ್ ಗಾರ್ಡ್ನರ್ ಗರಿಷ್ಠ 2 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications