WPL 2025 RCB: ಹೊಸ ಪ್ಲೇಯರ್ಸ್ ಎಂಟ್ರಿ; ಸ್ಮೃತಿ ಮಂದಾನಗೆ ಟೆಕ್ಷನ್
ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್)ನ ಬಹುನಿರೀಕ್ಷಿತ ಮೂರನೇ ಆವೃತ್ತಿಯು ಫೆಬ್ರವರಿ 14 ರಂದು ವಡೋದರಾದಲ್ಲಿ ಆರಂಭವಾಗಲಿದ್ದು, ಫ್ರಾಂಚೈಸಿಗಳು ಕೊನೆಯ ಕ್ಷಣದಲ್ಲಿ ತಮ್ಮ ತಂಡಗಳಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿವೆ. ಗಾಯದಿಂದಾಗಿ ಹೊರಗುಳಿದಿರುವ ಅಲಿಸಾ ಹೀಲಿ ಬದಲಿಗೆ ಯುಪಿ ವಾರಿಯರ್ಸ್ ವೆಸ್ಟ್ ಇಂಡೀಸ್ ಆಲ್ ರೌಂಡರ್ ಚಿನೆಲ್ಲೆ ಹೆನ್ರಿಯನ್ನು ಕರೆತಂದಿದೆ. ಸೋಫಿ ಡಿವೈನ್ ಮತ್ತು ಕೇಟ್ ಕ್ರಾಸ್ ವೈಯಕ್ತಿಕ ಕಾರಣಗಳಿಂದ ಹೊರಗುಳಿದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಆಸ್ಟ್ರೇಲಿಯಾದ ಆಲ್‌ರೌಂಡರ್‌ಗಳಾದ ಹೀದರ್ ಗ್ರಹಾಂ ಮತ್ತು ಕಿಮ್ ಗಾರ್ತ್ ಅವರನ್ನು ತಂಡಕ್ಕೆ ಬರಮಾಡಿಕೊಂಡಿದೆ.
ಐದು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಗ್ರಹಾಂ ಮತ್ತು ಅನುಭವಿ ಗಾರ್ತ್ ಇಬ್ಬರೂ ತಲಾ 30 ಲಕ್ಷ ರೂ.ಗಳಿಗೆ ಆರ್‌ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ. ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಅಂತಿಮಗೊಳಿಸುತ್ತಿದ್ದಂತೆ, ಮಹಿಳಾ ಕ್ರಿಕೆಟ್‌ನ ಕೆಲವು ಅದ್ಭುತ ಪ್ರತಿಭೆಗಳನ್ನು ಒಳಗೊಂಡ ಡಬ್ಲ್ಯೂಪಿಎಲ್ 2025ರ ಟೂರ್ನಿಗೆ ವೇದಿಕೆ ಸಜ್ಜಾಗಿದೆ. ಆರ್‌ಸಿಬಿ ತಂಡಕ್ಕೆ ಹೊಸ ಪ್ಲೇಯರ್ಸ್ ಬಂದಿರುವುದು ನಾಯಕಿ ಸ್ಮೃತಿ ಮಂದಾನ ಅವರಿಗೆ ಟೆಕ್ಷನ್ ತಂದಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಆರ್‌ಸಿಬಿ ವನಿತೆಯರು ಡಬ್ಲ್ಯೂಪಿಎಲ್ 2024ರ ಚಾಂಪಿಯನ್ ಆಗಿದ್ದಾರೆ. ಆದರೆ ಈ ಬಾರಿ ಟೂರ್ನಿ ಆರಂಭಕ್ಕೂ ಮುನ್ನ ಆರ್‌ಸಿಬಿ ತಂಡ ಭಾರೀ ಹಿನ್ನಡೆ ಅನುಭವಿಸಿದೆ. ಆರ್‌ಸಿಬಿ ತಂಡದಿಂದ ಒಬ್ಬರ ಬಳಿಕ ಒಬ್ಬರೂ ಹೊರ ನಡೆಯುತ್ತಿದ್ದಾರೆ. ಇದು ನಾಯಕಿ ಸ್ಮೃತಿ ಮಂದಾನ ಅವರಿಗೆ ಚಿಂತಿಸುವಂತೆ ಮಾಡಿದೆ. ಕಳೆದ ಬಾರಿ ಆರ್‌ಸಿಬಿ ತಂಡವನ್ನು ಚಾಂಪಿಯನ್ ಮಾಡುವಲ್ಲಿ ನ್ಯೂಜಿಲೆಂಡ್‌ನ ನಾಯಕಿ ಸೋಫಿ ಡಿವೈನ್ ಪ್ರಮುಖ ಪಾತ್ರವಹಿಸಿದ್ದರು. ಈ ಬಾರಿ ಅವರು ವೈಯಕ್ತಿಕ ಕಾರಣಗಳಿಂದ ಹೊರಗುಳಿದಿರುವುದು ಆರ್‌ಸಿಬಿ ದೊಡ್ಡ ಪೆಟ್ಟು ನೀಡಿದೆ.
ಆರ್‌ಸಿಬಿ ಆಡುವ ಹನ್ನೊಂದರ ಬಳಗದಲ್ಲಿ ಸೋಫಿ ಡಿವೈನ್ ಪ್ರಮುಖ ಪ್ಲೇಯರ್ ಆಗಿದ್ದರು. ಆದರೆ ಅವರು ಡಬ್ಲ್ಯೂಪಿಎಲ್ 2025 ಆರ್‌ಸಿಬಿ ಪರ ಆಡದಿರುವುದು ತಂಡದ ಸಂಯೋಜನೆಯ ಬಗ್ಗೆ ಸ್ಮೃತಿ ಮಂದಾನ ಅವರಿಗೆ ಗೊಂದಲವನ್ನು ಸೃಷ್ಟಿಸಿದೆ. ಅನುಭವಿ ಪ್ಲೇಯರ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಸ್ಮೃತಿ ಮಂದಾನ ಮೇಲಿದೆ.
ಕಳೆದ ಬಾರಿ ಟೂರ್ನಿಯುದ್ದಕ್ಕೂ ಅದ್ಬುತ ಆರ್‌ಸಿಬಿ ತಂಡ ಅದ್ಭುತ ಪ್ರದರ್ಶನದ ನೀಡಿತ್ತು. ಇದೀಗ ಡಬ್ಲ್ಯೂಪಿಎಲ್ 2025ರಲ್ಲಿ ಹೊಸ ಪ್ಲೇಯರ್ಸ್ ಆಗಮನದಿಂದಾಗಿ ಆರ್‌ಸಿಬಿ ತಂಡದ ಆಡುವ ಹನ್ನೊಂದರ ಬಳಗ ಹೇಗಿರಲಿದೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಮಂಧಾನ ಹೊಸ ಪ್ಲೇಯರ್ಸ್ ಅನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಂಡು ತಂಡವನ್ನು ಮುನ್ನಡೆಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications