Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2025: ಲೀಗ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಯಾರು? RCB ಆಟಗಾರ್ತಿಯರಿಗೆ ಇದೆಯಾ ಸ್ಥಾನ?

ಮಹಿಳಾ ಪ್ರೀಮಿಯರ್‌ ಲೀಗ್‌ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಮೇಗಾ ಟೂರ್ನಿಯಲ್ಲಿ ಸ್ಟಾರ್ ಆಟಗಾರರನ್ನು ಒಂದೇ ಸೂರಿನಡಿ ನೋಡುವ ಸಂತಸವೇ ಬೇರೆಯದ್ದಾಗಿರುತ್ತದೆ. ವಿಶ್ವದಲ್ಲೇ ತಮ್ಮ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಿಂದ ಸದ್ದು ಮಾಡಿರುವ ಆಟಗಾರರು ಲೀಗ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟಿ20 ಕ್ರಿಕೆಟ್‌ ಅಂದರನೇ ಬ್ಯಾಟರ್‌ಗಳ ಆರ್ಭಟ ಜೋರಾಗಿತ್ತದೆ. ಈ ಲೀಗ್‌ನಲ್ಲಿ ಬೌಲರ್‌ಗಳು ಅಬ್ಬರಿಸುವುದು ಕಡಿಮೆ. ಆದರೆ ತಮ್ಮ ಶಿಸ್ತು ಬದ್ಧ ದಾಳಿಯಿಂದ ತಂಡಕ್ಕೆ ನೆರವಾದ ಬೌಲರ್‌ಗಳ ಪಟ್ಟಿ ಇಲ್ಲಿದೆ.

ಡಬ್ಲ್ಯುಪಿಎಲ್‌ ಲೀಗ್‌ ಆರಂಭಕ್ಕೆ ಮುನ್ನವೇ ರೋಚಕತೆ ಮನೆ ಮಾಡಿದೆ ಮೂರನೇ ಆವೃತ್ತಿಯ ಲೀಗ್‌ನಲ್ಲಿ ಹಲವು ತಂಡಗಳು ತಮ್ಮ ಶಕ್ತಿ ಪ್ರದರ್ಶನ ಮಾಡಲಿವೆ. ಆರ್‌ಸಿಬಿ ತಂಡ ಹಾಲಿ ಚಾಂಪಿಯನ್‌ ಎಂಬ ಹಣೆ ಪಟ್ಟಿಯೊಂದಿಗೆ ಅಂಗಳಕ್ಕೆ ಇಳಿಯಲಿದೆ. ಈ ವೇಳೆ ಎಲ್ಲರ ಕಣ್ಣುಗಳು ಸಹ ಸ್ಟಾರ್‌ ಆಟಗಾರ್ತಿಯರ ಮೇಲೆ ಇರುತ್ತದೆ. ಈಗಾಗಲೇ ಮಹಿಳಾ ಪ್ರೀಮಿಯರ್‌ ಲೀಗ್‌ ಎರಡು ಆವೃತ್ತಿಗಳನ್ನು ಕಂಪ್ಲೀಟ್ ಮಾಡಿದ್ದು, ಬ್ಯಾಟರ್‌ಗಳಂತೆ ಬೌಲರ್‌ಗಳು ಸಹ ಈ ಟೂರ್ನಿಯಲ್ಲಿ ಆರ್ಭಟ ನಡೆಸಿದ್ದಾರೆ. ಲೀಗ್‌ನಲ್ಲಿ ಹೆಚ್ಚು ವಿಕೆಟ್‌ ಬೌಲರ್‌ಗಳ ವರದಿ ಇಲ್ಲಿದೆ.

WPL 2025 Top Bowlers Who Have Dominated the Women s Premier League So Far

ಸೋಫಿ ಕಮಾಲ್‌

ಇಂಗ್ಲೆಂಡ್‌ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಡಬ್ಲ್ಯುಪಿಎಲ್‌ನಲ್ಲೂ ಆರ್ಭಟಿಸುತ್ತಿರುವ ಬೌಲರ್‌ಗಳ ಪಟ್ಟಿಯಲ್ಲಿ ಯುಪಿ ವಾರಿಯರ್ಸ್ ತಂಡದ ಸೋಫಿ ಎಕ್ಲೆಸ್ಟೋನ್ ಅವರಿಗೆ ಮೊದಲ ಸ್ಥಾನ. ಇವರು ಲೀಗ್‌ನಲ್ಲಿ ಅಬ್ಬರದ ಪ್ರದರ್ಶನ ನೀಡಿ ಅತ್ಯಧಿಕ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದಿದ್ದಾರೆ. ಇವರು ಆಡಿದ 17 ಪಂದ್ಯಗಳಲ್ಲಿ 6.59ರ ಎಕಾನಮಿಯಲ್ಲಿ 27 ವಿಕೆಟ್‌ ಕಬಳಿಸಿದ್ದಾರೆ.

ಮುಂಬೈ ಬೌಲರ್ಸ್‌ ಅಬ್ಬರ

ಅತ್ಯಧಿಕ ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯನ್ನು ನೋಡಿದರೆ, ಈ ಪಟ್ಟಿಯ ಟಾಪ್‌ 5 ಬೌಲರ್‌ಗಳ ಪಟ್ಟಿಯಲ್ಲಿ ಆರ್‌ಸಿಬಿ ಆಟಗಾರ್ತಿಯರು ಇಲ್ಲ. ಈ ಪಟ್ಟಿಯಲ್ಲಿ ಮುಂಬೈ ಬೌಲರ್ಸ್‌ ಕಮಾಲ್‌ ಮಾಡಿದ್ದಾರೆ. ಭಾರತದ ಭರವಸೆಯ ಬೌಲರ್‌ ಸೈಕಾ ಇಶಾಕ್, ಮುಂಬೈ ಇಂಡಿಯನ್ಸ್‌ ಪರ ಅಖಾಡಕ್ಕೆ ಇಳಿಯುತ್ತಾರೆ. ಇವರು ಆಡಿದ 19 ಪಂದ್ಯಗಳಲ್ಲಿ 24 ವಿಕೆಟ್‌ ಕಬಳಿಸಿದ್ದಾರೆ. ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲೂ ಇದೇ ತಂಡದ ಆಟಗಾರ್ತಿ ಇದ್ದಾರೆ. ಹೇಲಿ ಮ್ಯಾಥ್ಯೂಸ್ ವೆಸ್ಟ್‌ ಇಂಡೀಸ್‌ ಸ್ಟಾರ್ ಆಟಗಾರ್ತಿ. ಇವರು ಈ ಲೀಗ್‌ನಲ್ಲಿ ಆಡಿದ 19 ಪಂದ್ಯಗಳಲ್ಲಿ 23 ವಿಕೆಟ್‌ ಹೊಂದಿದ್ದಾರೆ. ಈ ಪಟ್ಟಿಯ ನಾಲ್ಕನೇ ಸ್ಥಾನದಲ್ಲಿ ಅಮೆಲಿಯಾ ಕೆರ್ ಇದ್ದು, ಇವರು ಸಹ ಮುಂಬೈ ಇಂಡಿಯನ್ಸ್‌ ತಂಡವನ್ನು ಪ್ರತಿನಿಧಿಸುತ್ತಾರೆ. ಇವರು ಆಡಿದ 19 ಪಂದ್ಯಗಳಲ್ಲಿ 22 ವಿಕೆಟ್‌ ಉರುಳಿಸಿದ್ದಾರೆ.

WPL 2025 Top Bowlers Who Have Dominated the Women s Premier League So Far

ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮರಿಜಾನ್ನೆ ಕಪ್ ಗೂ ಸ್ಥಾನ. ಇವರು ಡೆಲ್ಲಿ ಕ್ಯಾಪಿಟಲ್ಸ್‌ ಪರ ಬೌಲಿಂಗ್ ಮಾಡುತ್ತಾರೆ. ಇವರು ಆಡಿದ 19 ಪಂದ್ಯಗಳಲ್ಲಿ 5.96ರ ಎಕಾನಮಿಯಲ್ಲಿ 20 ವಿಕೆಟ್‌ ಹೊಂದಿದ್ದಾರೆ.

Story first published: Saturday, February 8, 2025, 7:00 [IST]
Other articles published on Feb 8, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+