Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2025: ಅಂಕ ಪಟ್ಟಿಯಲ್ಲಿ ಬಡ್ತಿಗಾಗಿ ಯುಪಿ, ಮುಂಬೈ ಹೋರಾಟ: ಹ್ಯಾಟ್ರಿಕ್‌ ಗೆಲುವಿನ ಕನಸಿನಲ್ಲಿ ದೀಪ್ತಿ ಪಡೆ

ಮೂರನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ ರೋಚಕ ಘಟ್ಟ ತಲುಪುವತ್ತ ಮುಖ ಮಾಡಿದೆ. ಈ ಲೀಗ್‌ನ 11ನೇ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆಯಲಿದ್ದು, ಮಾಜಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಹಾಗೂ ಸತತ ಎರಡು ಗೆಲುವು ದಾಖಲಿಸಿರುವ ಯುಪಿ ವಾರಿಯರ್ಸ್‌ ನಡುವೆ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ನಿಶ್ಚಿತವಾಗಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆಯಲಿದೆ. ಮುಂಬೈ ಆಡಿದ 3 ಪಂದ್ಯಗಳಲ್ಲಿ 2 ಗೆಲುವು, 1 ಸೋಲು ಕಂಡಿದ್ದು, ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಯುಪಿ ಆಡಿದ 4 ಪಂದ್ಯಗಳಲ್ಲಿ 2 ಗೆಲುವು, 2 ಸೋಲು ಕಂಡಿದ್ದು, ನಾಲ್ಕನೇ ಸ್ಥಾನದಲ್ಲಿದೆ. ಉಭಯ ತಂಡಗಳು ತಲಾ 4 ಅಂಕ ಕಲೆ ಹಾಕಿವೆ.

ಯುಪಿ ವಾರಿಯರ್ಸ್‌ ಅಮೋಘ ಪ್ರದರ್ಶನ ನೀಡುತ್ತಿದ್ದು, ಹ್ಯಾಟ್ರಿಕ್‌ ಗೆಲುವಿನ ಕನಸು ಕಾಣುತ್ತಿದೆ. ಕಳೆದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಸೂಪರ್‌ ಓವರ್‌ನಲ್ಲಿ ಗೆದ್ದ ಯುಪಿ ಆತ್ಮ ವಿಶ್ವಾಸ ಇಮ್ಮಡಿಯಾಗಿದೆ. ಬುಧವಾರ ನಡೆಯುವ ಪಂದ್ಯದಲ್ಲಿ, ಗೆಲುವು ದಾಖಲಿಸಿ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವ ಆಸೆ ಯುಪಿ ತಂಡದ್ದಾಗಿದೆ. ಮುಂಬೈ ಸಹ ಆರ್‌ಸಿಬಿ ತಂಡವನ್ನು 4 ವಿಕೆಟ್‌ಗಳಿಂದ ಮಣಿಸಿರುವ ವಿಶ್ವಾಸ ಹೊಂದಿದೆ.

WPL 2025 UP Warriors Eye Hat-Trick Win Against Mumbai Indians in Crucial Clash

ಯುಪಿಗೆ ಹ್ಯಾಟ್ರಿಕ್‌ ಕನಸು

ಯುಪಿ ತಂಡದಲ್ಲೂ ಸ್ಟಾರ್ ಆಟಗಾರ್ತಿಯರು ಇದ್ದಾರೆ. ಕಳೆದ ಪಂದ್ಯದಲ್ಲಿ ತಂಡಕ್ಕೆ ಗೆಲುವಿನ ಮಾಲೆಯನ್ನು ತೊಡಿಸಿದ ಆಲ್‌ರೌಂಡರ್‌ ಸೋಫಿ ಎಕ್ಲೆಸ್ಟೋನ್ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇವರು ಆರ್‌ಸಿಬಿ ವಿರುದ್ಧ ಸೂಪರ್ ಓವರ್‌ನಲ್ಲಿ ಬಿಗುವಿನ ದಾಳಿ ನಡೆಸಿದ್ದರು. ಇನ್ನು ಕಿರಣ್ ನವ್ಗಿರೆ, ಚಿನ್ಲೆ ಹೆನ್ರಿ, ಶ್ವೆತಾ ಶೆರಾವತ್‌, ದೀಪ್ತಿ ಶರ್ಮಾ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಬೇಕಿದೆ. ಅಂದಾಗ ದೊಡ್ಡ ಮೊತ್ತದ ಕನಸು ನನಸಾಗುತ್ತದೆ.

ಬ್ಯಾಟಿಂಗ್‌ಗೆ ಹೋಲಿಸಿದರೆ, ಈ ತಂಡದಲ್ಲಿ ಬೌಲಿಂಗ್‌ನಲ್ಲಿ ಕೊಂಚ ಸಮಸ್ಯೆ ಕಾಣಿಸುತ್ತಿದೆ. ಸ್ಟಾರ್‌ ಬೌಲರ್‌ಗಳು ಬಿಗುವಿನ ದಾಳಿಯನ್ನು ನಡೆಸಬೇಕಿದೆ. ಕ್ರಾಂತಿ ಗೌಡ, ಗ್ರೇಸ್ ಹ್ಯಾರೀಸ್‌ ಲಯ ಭದ್ಧ ದಾಳಿಯನ್ನು ನಿರ್ವಹಿಸುತ್ತಿದ್ದು, ಇವರಿಗೆ ಬೇರೆ ಆಟಗಾರರು ಉತ್ತಮ ಸಾಥ್ ನೀಡಬೇಕಿದೆ.

WPL 2025 UP Warriors Eye Hat-Trick Win Against Mumbai Indians in Crucial Clash

ಬ್ರಂಟ್‌ ಆಕರ್ಷಣೆ

ಮುಂಬೈ ತಂಡದಲ್ಲೂ ಸ್ಟಾರ್ ಆಟಗಾರ್ತಿಯರು ಇದ್ದಾರೆ. ಇವರಲ್ಲಿ ನ್ಯಾಟ್‌ ಸ್ಕೀವರ್ ಬ್ರಂಟ್‌ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇವರು ಸದ್ಯ ಟೂರ್ನಿಯಲ್ಲಿ 179 ರನ್‌ ಸಿಡಿಸಿದ್ದು ಭರವಸೆ ಮೂಡಿಸಿದ್ದಾರೆ. ಉಳಿದಂತೆ ಅಮನಜೋತ್‌ ಕೌರ್‌, ಹರ್ಮನ್‌ ಪ್ರೀತ್‌ ಕೌರ್‌, ಹ್ಯಾಲಿ ಮ್ಯಾಥ್ಯೂಸ್‌ ಸೇರಿದಂತೆ ಸ್ಟಾರ್ ಆಟಗಾರ್ತಿಯರು ತಮ್ಮ ಘನತೆಗೆ ತಕ್ಕ ಆಟವನ್ನು ಆಡಬೇಕಿದೆ. ಸ್ಟಾರ್‌ ಆಲ್‌ರೌಂಡರ್‌ಗಳು ತಂಡದಲ್ಲಿದ್ದು ಇವರು ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗುತ್ತಿದ್ದಾರೆ. ಉಳಿದ ಬೌಲರ್‌ಗಳು ಬಿಗುವಿನ ದಾಳಿ ನಡೆಸಿ ಯುಪಿ ಬ್ಯಾಟರ್‌ಗಳನ್ನು ಕಾಡಿದ್ರೆ ಗೆಲುವು ನಿಶ್ಚಿತ.

Story first published: Wednesday, February 26, 2025, 8:00 [IST]
Other articles published on Feb 26, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+