ವುಮನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್) 2025ರ ಟೂರ್ನಿಯ ವೇಳಾಪಟ್ಟಿಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಿಸಿದೆ. ಡಬ್ಲ್ಯೂಪಿಎಲ್ ಟೂರ್ನಿಯು ಫೆಬ್ರವರಿ 14 ರಿಂದ ಪ್ರಾರಂಭವಾಗಲಿದ್ದು, ಫೈನಲ್ ಪಂದ್ಯವು ಮಾರ್ಚ್ 15 ರಂದು ಮುಂಬೈನಲ್ಲಿ ನಡೆಯಲಿದೆ. ನಾಲ್ಕು ನಗರಗಳಲ್ಲಿ ಐದು ತಂಡಗಳು ಪ್ರಶಸ್ತಿ ಗೆಲ್ಲಲು ಪರಸ್ಪರ ಪೈಪೋಟಿ ನಡೆಸಲಿವೆ. ಈ ಬಾರಿ ಒಟ್ಟು 22 ಪಂದ್ಯಗಳು ನಡೆಯಲಿದ್ದು, ಗುಜರಾತ್ ಜೈಂಟ್ಸ್ ಮತ್ತು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಉದ್ಘಾಟನಾ ಪಂದ್ಯ ವಡೋದರದಲ್ಲಿ ನಡೆಯಲಿದೆ.
ಮೊದಲ ಹಂತದ ಡಬ್ಲ್ಯೂಪಿಎಲ್ ಟೂರ್ನಿಗೆ ಬರೋಡಾ ಆತಿಥ್ಯ ವಹಿಸಲಿದೆ. ಈ ನಗರದಲ್ಲಿ 6 ಪಂದ್ಯಗಳು ನಡೆಯಲಿವೆ. ಬೆಂಗಳೂರು ಎರಡನೇ ಹಂತದ ಆತಿಥ್ಯ ಪಡೆದುಕೊಂಡಿದೆ. ಇಲ್ಲಿಯೂ ಆರು ಪಂದ್ಯಗಳನ್ನು ಆಯೋಜಿಸಲಾಗುವುದು. ಲಕ್ನೋ ಮೂರನೇ ಹಂತದ ಟೂರ್ನಿಗೆ ಆತಿಥ್ಯ ವಹಿಸಲಿದ್ದು, ಇಲ್ಲಿ ನಾಲ್ಕು ಪಂದ್ಯಗಳು ನಡೆಯಲಿವೆ. ಲೀಗ್ ಹಂತದ ಕೊನೆಯ ಎರಡು ಪಂದ್ಯಗಳಾದ ಎಲಿಮಿನೇಟರ್ ಮತ್ತು ಫೈನಲ್ ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಡಬ್ಲ್ಯೂಪಿಎಲ್ ಟೂರ್ನಿಯಲ್ಲಿ ಗುಜರಾತ್ ಜೈಂಟ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಯುಪಿ ವಾರಿಯರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಐದು ತಂಡಗಳು ಪೈಪೋಟಿ ನಡೆಸಲಿವೆ. ಡಬ್ಲ್ಯೂಪಿಎಲ್ 2025ರಲ್ಲಿ ಯಾವುದೇ ಡಬಲ್-ಹೆಡರ್ ಪಂದ್ಯವಿಲ್ಲ. ಈ ಕಾರಣದಿಂದಾಗಿ ಲೀಗ್‌ನಲ್ಲಿ ಯಾವುದೇ ಪಂದ್ಯವು ಮಧ್ಯಾಹ್ನ ಪ್ರಾರಂಭವಾಗುವುದಿಲ್ಲ. ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 7:30ಕ್ಕೆ ಆರಂಭವಾಗಲಿವೆ.
ಫೆಬ್ರವರಿ 14: ಗುಜರಾತ್ ಜೈಂಟ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು- ವಡೋದರಾ
ಫೆಬ್ರವರಿ 15: ಮುಂಬೈ ಇಂಡಿಯನ್ಸ್ vsಡೆಲ್ಲಿ ಕ್ಯಾಪಿಟಲ್ಸ್- ವಡೋದರಾ
ಫೆಬ್ರವರಿ 16 : ಗುಜರಾತ್ ಜೈಂಟ್ಸ್ ವಿರುದ್ಧ ಯುಪಿ ವಾರಿಯರ್ಸ್- ವಡೋದರಾ
ಫೆಬ್ರವರಿ 17 : ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು- ವಡೋದರ
ಫೆಬ್ರವರಿ 18: ಮುಂಬೈ ಇಂಡಿಯನ್ vs ಗುಜರಾತ್ ಜೈಂಟ್ಸ್- ವಡೋದರಾ
ಫೆಬ್ರವರಿ 19: ಯುಪಿ ವಾರಿಯರ್ಸ್ vs ದೆಹಲಿ ಕ್ಯಾಪಿಟಲ್ಸ್- ವಡೋದರಾ
ಫೆಬ್ರವರಿ 21: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್- ಬೆಂಗಳೂರು
ಫೆಬ್ರವರಿ 22: ದೆಹಲಿ ಕ್ಯಾಪಿಟಲ್ಸ್ vs ಯುಪಿ ವಾರಿಯರ್ಸ್- ಬೆಂಗಳೂರು
ಫೆಬ್ರವರಿ 24: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಯುಪಿ ವಾರಿಯರ್ಸ್- ಬೆಂಗಳೂರು
ಫೆಬ್ರವರಿ 25: ದೆಹಲಿ ಕ್ಯಾಪಿಟಲ್ಸ್ vs ಗುಜರಾತ್ ಜೈಂಟ್ಸ್- ಬೆಂಗಳೂರು
ಫೆಬ್ರವರಿ 26: ಮುಂಬೈ vs ಯುಪಿ ವಾರಿಯರ್ಸ್- ಬೆಂಗಳೂರು
ಫೆಬ್ರವರಿ 27: ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಜೈಂಟ್ಸ್- ಬೆಂಗಳೂರು
ಫೆಬ್ರವರಿ 28: ದೆಹಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್- ಬೆಂಗಳೂರು
ಮಾರ್ಚ್ 1: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ದೆಹಲಿ ಕ್ಯಾಪಿಟಲ್ಸ್- ಬೆಂಗಳೂರು
ಮಾರ್ಚ್ 3: ಯುಪಿ ವಾರಿಯರ್ಸ್ vs ಗುಜರಾತ್ ಜೈಂಟ್ಸ್- ಲಕ್ನೋ
ಮಾರ್ಚ್ 6: ಯುಪಿ ವಾರಿಯರ್ಸ್ vs ಮುಂಬೈ ಇಂಡಿಯನ್ಸ್- ಲಕ್ನೋ
ಮಾರ್ಚ್ 7: ಗುಜರಾತ್ ಜೈಂಟ್ಸ್ vs ಡೆಲ್ಲಿ ಕ್ಯಾಪಿಟಲ್ಸ್- ಲಕ್ನೋ
ಮಾರ್ಚ್ 8: ಯುಪಿ ವಾರಿಯರ್ಸ್ vs ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು- ಲಕ್ನೋ
ಮಾರ್ಚ್ 10: ಮುಂಬೈ ಇಂಡಿಯನ್ಸ್ vs ಗುಜರಾತ್ ಜೈಂಟ್ಸ್- ಮುಂಬೈ
ಮಾರ್ಚ್ 11: ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು- ಮುಂಬೈ
ಮಾರ್ಚ್ 13: ಎಲಿಮಿನೇಟರ್- ಮುಂಬೈ
ಮಾರ್ಚ್ 15: ಫೈನಲ್- ಮುಂಬೈ